ಆ್ಯಪ್ನಗರ

ಅಕ್ರಮ ತಂಬಾಕು- ಪಾನ್‌ ಮಸಾಲ ಗೋದಾಮುಗಳ ಮೇಲೆ ವಾಣಿಜ್ಯ ತೆರಿಗೆ ಅಧಿಕಾರಿಗಳ ದಾಳಿ

ನಗರ ಮತ್ತು ಹೊರವಲಯದಲ್ಲಿ ತಂಬಾಕು ಮತ್ತು ಪಾನ್‌ ಮಸಾಲ ಉತ್ಪನ್ನಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮನೆಗಳು ಮತ್ತು ಗೋದಾಮುಗಳ ಮೇಲೆ ದಾಳಿ ನಡೆಸಿರುವ ರಾಜ್ಯ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು, ಸುಮಾರು 1 ಕೋಟಿ ರೂ. ಮೌಲ್ಯದ ಉತ್ಪನ್ನಗಳನ್ನು ಪತ್ತೆ ಮಾಡಿದ್ದಾರೆ.

Vijaya Karnataka 25 Jan 2019, 5:00 am
ಬೆಂಗಳೂರು: ನಗರ ಮತ್ತು ಹೊರವಲಯದಲ್ಲಿ ತಂಬಾಕು ಮತ್ತು ಪಾನ್‌ ಮಸಾಲ ಉತ್ಪನ್ನಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮನೆಗಳು ಮತ್ತು ಗೋದಾಮುಗಳ ಮೇಲೆ ದಾಳಿ ನಡೆಸಿರುವ ರಾಜ್ಯ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು, ಸುಮಾರು 1 ಕೋಟಿ ರೂ. ಮೌಲ್ಯದ ಉತ್ಪನ್ನಗಳನ್ನು ಪತ್ತೆ ಮಾಡಿದ್ದಾರೆ.
Vijaya Karnataka Web it RAID


ಅಕ್ರಮ ದಾಸ್ತಾನು ಮಾಡಿಕೊಂಡಿದ್ದ ಗೋದಾಮು ಮಾಲೀಕರಿಗೆ ದಂಡ ವಿಧಿಸಿದ್ದಾರೆ.

ಖಚಿತ ಮಾಹಿತಿ ಆಧರಿಸಿ ಇಲಾಖೆಯ ಜಾರಿ ಮತ್ತು ಜಾಗೃತ ವಿಭಾಗದ ತಂಡಗಳು ಜಂಟಿ ಕಾರ್ಯಾಚರಣೆ ನಡೆಸಿ, ಹೊಸೂರು ರಸ್ತೆಯ ಚಂದಾಪುರ, ಆನೇಕಲ್‌ನಲ್ಲಿನ ಮನೆ ಮತ್ತು ಗೋದಾಮುಗಳ ಮೇಲೆ ದಾಳಿ ನಡೆಸಿದರು. ಗೋದಾಮುಗಳ ಮಾಲೀಕರು ಜಿಎಸ್‌ಟಿ ನೋಂದಣಿ ಮಾಡಿಸದೆ, ನಾಮಫಲಕವನ್ನು ಅಳವಡಿಸಿಕೊಳ್ಳದೇ ಅಕ್ರಮವಾಗಿ ಸರಕು ಸಂಗ್ರಹಿಸಿಟ್ಟಿದ್ದರು.

ತಮಿಳುನಾಡಿನಲ್ಲಿ ಪಾನ್‌ ಮಸಾಲ, ತಂಬಾಕು ಉತ್ಪನ್ನಗಳ ಮಾರಾಟವನ್ನು ನಿಷೇಧಿಸಲಾಗಿದೆ. ಹೀಗಾಗಿ, ಉದ್ಯಮಿಗಳು, ವ್ಯಾಪಾರಸ್ಥರು ಕರ್ನಾಟಕ ಗಡಿಭಾಗದಲ್ಲಿರುವ ಗೋದಾಮುಗಳಲ್ಲಿ ತಂಬಾಕು ಸಂಗ್ರಹಿಸಿ ಅದನ್ನು ತಮಿಳುನಾಡಿಗೆ ಸಾಗಿಸುವ ಉದ್ದೇಶ ಹೊಂದಿದ್ದರು. ತಂಬಾಕು ಮತ್ತು ಪಾನ್‌ ಮಸಾಲ ಉತ್ಪಾದಕರ ಮತ್ತು ಸಾಗಣೆದಾರರ ವಿರುದ್ಧ ವಾಣಿಜ್ಯ ತೆರಿಗೆ ನಿಗಾ ವಹಿಸಿದ್ದು, ಅನಧಿಕೃತವಾಗಿ ವಹಿವಾಟು ನಡೆಸಿ ತೆರಿಗೆ ವಂಚಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಇಲಾಖೆ ಅಧಿಕಾರಿಗಳು ಎಚ್ಚರಿಸಿದ್ದಾರೆ.

ಅನಧಿಕೃತ ಗೋದಾಮುಗಳ ಮಾಹಿತಿ ಇದ್ದರೆ ಸಾರ್ವಜನಿಕರು ದೂರವಾಣಿ ಸಂಖ್ಯೆ 080-25704970ಕ್ಕೆ ಸಂಪರ್ಕಿಸಿ ಮಾಹಿತಿ ನೀಡಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ