ಆ್ಯಪ್ನಗರ

ಚಾಲಕನ ವಂಚಿಸಿ ಕಾರು ಅಪಹರಣ

ಚಾಲಕನನ್ನು ಯಾಮಾರಿಸಿ ಮಾರುತಿ ಸ್ವಿಫ್ಟ್‌ ಡಿಸೈರ್‌ ಕಾರನ್ನು ಅಪಹರಿಸಿರುವ ಪ್ರಕರಣ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 206ರ ಹೇಮಗಿರಿ ಗೇಟ್‌ ಬಳಿ ನಡೆದಿದೆ.

ವಿಕ ಸುದ್ದಿಲೋಕ 30 May 2016, 4:00 am

ಕಡೂರು: ಚಾಲಕನನ್ನು ಯಾಮಾರಿಸಿ ಮಾರುತಿ ಸ್ವಿಫ್ಟ್‌ ಡಿಸೈರ್‌ ಕಾರನ್ನು ಅಪಹರಿಸಿರುವ ಪ್ರಕರಣ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 206ರ ಹೇಮಗಿರಿ ಗೇಟ್‌ ಬಳಿ ನಡೆದಿದೆ.

ಓಲಾ ಕಂಪನಿಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ರಾಮಾಂಜಿನಿ (24) ವಂಚನೆಗೊಳಗಾದವರು. ಬೆಂಗಳೂರಿನ ಗೊರಗುಂಟೆ ಪಾಳ್ಯದ ಎಂಎಸ್‌ಕೆ ನಗರ ವಾಸಿ ರಾಮಾಂಜಿನಿ, ಮೇ 25ರ ರಾತ್ರಿ ಗೊರಗುಂಟೆ ಪಾಳ್ಯದ ಬಸ್‌ ನಿಲ್ದಾಣಕ್ಕೆ ಬಂದಾಗ ನಾಲ್ವರು ಅಪರಿಚಿತರು ಶಿವಮೊಗ್ಗದಲ್ಲಿ ನಡೆಯಲಿರುವ ಮದುವೆಯಲ್ಲಿ ಪಾಲ್ಗೊಳ್ಳಲು ಕಾರು ಬೇಕೆಂದು ಕೇಳಿದ್ದರು. ಅದಕ್ಕೆ ಅವರು ಒಪ್ಪಿದ್ದು, ಶಿವಮೊಗ್ಗಕ್ಕೆ ತೆರಳಿದ್ದರು. ಮುಂಜಾನೆ 4.30ರ ವೇಳೆಗೆ ರಾಷ್ಟ್ರೀಯ ಹೆದ್ದಾರಿಯ ಹೇಮಗಿರಿ ಗೇಟ್‌ ಬಳಿ ಬಂದಾಗ ಕಾರನ್ನು ರಸ್ತೆ ಬದಿ ನಿಲ್ಲಿಸುವಂತೆ ಹೇಳಿದರು. ರಾಮಾಂಜಿನಿ ಕಾರನ್ನು ನಿಲ್ಲಿಸುತ್ತಿದ್ದಂತೆಯೇ ಅವರನ್ನು ಹೊರಕ್ಕೆ ತಳ್ಳಿ ಕಾರಿನ ಸಮೇತ ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ.

ಈ ಬೆಳವಣಿಗೆಯಿಂದ ಕುಸಿದುಬಿದ್ದ ರಾಮಾಂಜಿನಿ, ಬಳಿಕ ಸುಧಾರಿಸಿಕೊಂಡು ಲಾರಿಯೊಂದನ್ನು ಹತ್ತಿ ಬೆಂಗಳೂರಿಗೆ ತೆರಳಿ ಕಂಪನಿಯ ಮಾಲೀಕರಿಗೆ ವಿಷಯ ತಿಳಿಸಿದ್ದಾರೆ. ಚಾಲಕನ ಮೊಬೈಲ್‌ ಸಹ ಕಾರಿನಲ್ಲಿ ಉಳಿದಿದ್ದು, ಕಂಪನಿಯವರನ್ನು ತಕ್ಷಣ ಸಂಪರ್ಕಿಸಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ. ಪಟ್ಟಣದ ಠಾಣೆಯಲ್ಲಿ ದೂರು ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ