ಆ್ಯಪ್ನಗರ

40 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಮಹಿಳೆಯಿಂದ ಬೆದರಿಕೆ

ಫೇಸ್‌ಬುಕ್‌ನಲ್ಲಿ ಪರಿಚಯವಾದ ಮಹಿಳೆ ಹಣಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡಿದ್ದೂ ಅಲ್ಲದೆ ಹಲ್ಲೆಯನ್ನೂ ನಡೆಸಿದ್ದಾರೆ ಎಂದು ರಿಯಲ್‌ಎಸ್ಟೇಟ್‌ ಉದ್ಯಮಿಯೊಬ್ಬರು ದೂರಿದ್ದಾರೆ.

Vijaya Karnataka 2 Jun 2019, 5:00 am
Vijaya Karnataka Web lady blckmails real estate industrialist
40 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಮಹಿಳೆಯಿಂದ ಬೆದರಿಕೆ

ವಿಕ ಸುದ್ದಿಲೋಕ ಬೆಂಗಳೂರು

ಫೇಸ್‌ಬುಕ್‌ನಲ್ಲಿ ಪರಿಚಯವಾದ ಮಹಿಳೆ ಹಣಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡಿದ್ದೂ ಅಲ್ಲದೆ ಹಲ್ಲೆಯನ್ನೂ ನಡೆಸಿದ್ದಾರೆ ಎಂದು ರಿಯಲ್‌ಎಸ್ಟೇಟ್‌ ಉದ್ಯಮಿಯೊಬ್ಬರು ದೂರಿದ್ದಾರೆ.

ಉದ್ಯಮಿ ಆರ್‌.ಶಂಕರ್‌ ಎಂಬುವವರು ನಾಲ್ವರ ವಿರುದ್ಧ ಹನುಮಂತನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ''ಸುಮಾರು 5 ತಿಂಗಳ ಹಿಂದೆ ಫೇಸ್‌ಬುಕ್‌ನಲ್ಲಿ ದಾಕ್ಷಾಯಿಣಿ ಎಂಬುವವರು ಪರಿಚಯವಾಗಿ ಸ್ನೇಹಿತರಾಗಿದ್ದರು. ಸ್ವಲ್ಪ ದಿನಗಳ ಬಳಿಕ ಮಕ್ಕಳ ವಿದ್ಯಾಭ್ಯಾಸಕ್ಕೆ ಹಣ ಬೇಕೆಂದು 6-7 ಲಕ್ಷ ರೂ. ಪಡೆದುಕೊಂಡರು. ಕಳೆದ ಸುಮಾರು ಒಂದು ತಿಂಗಳಿಂದ 40 ಲಕ್ಷ ರೂ. ಕೊಡುವಂತೆ ಫೋನ್‌ ಮಾಡಿ ಒತ್ತಾಯಿಸುತ್ತಿದ್ದರು. ಹಣವನ್ನು ಕೊಡದೆ ಇದ್ದರೆ ನಿಮ್ಮ ಕೆಲವು ಖಾಸಗಿ ಫೋಟೋಗಳು ನನ್ನ ಬಳಿ ಇದ್ದು, ಅವುಗಳನ್ನು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್‌ ಮಾಡಿ ಮರ್ಯಾದೆ ಹರಾಜು ಹಾಕುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದರು'' ಎಂದು ದೂರಿನಲ್ಲಿ ಶಂಕರ್‌ ಆರೋಪಿಸಿದ್ದಾರೆ.

''ಮಹಿಳೆಯ ಒತ್ತಡ ಹೆಚ್ಚಾದ ಕಾರಣ ನಾನು ಈ ಹಿಂದೆ ಕೊಟ್ಟಿದ್ದ ಹಣವನ್ನು ವಾಪಸ್‌ ಕೊಡುವಂತೆ ಕೇಳಿದೆ. ಇದರಿಂದ ಕೋಪಗೊಂಡ ದಾಕ್ಷಾಯಿಣಿ, ಮೇ 14ರಂದು ಬೆಳಗ್ಗೆ 11 ಗಂಟೆಗೆ ಹನುಮಂತನಗರದ ಪಿಇಎಸ್‌ ಕಾಲೇಜು ಬಳಿ ನಾನು ಹೋಗುತ್ತಿದ್ದಾಗ ತನ್ನ ತಾಯಿ ನಾಗರತ್ನ, ಕಿರಣ್‌ ಮತ್ತು ಬಾಬು ಎಂಬುವರನ್ನು ಕರೆದುಕೊಂಡು ಬಂದು ಕಾರನ್ನು ಅಡ್ಡಗಟ್ಟಿ ಬ್ಯಾಟ್‌, ಕೀ ಚೈನ್‌ ಮತ್ತು ಕೈಯಿಂದ ಹಲ್ಲೆ ಮಾಡಿ ಪ್ರಾಣ ಬೆದರಿಕೆ ಹಾಕಿದ್ದಾರೆ,'' ಎಂದು ದೂರಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ