ಆ್ಯಪ್ನಗರ

ಚಿರತೆ, ಜಿಂಕೆ ಚರ್ಮ ವಶ: 8 ಜನರ ಬಂಧನ

ಚಿರತೆ ಮತ್ತು ಜಿಂಕೆ ಚರ್ಮ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಮಹಾಲಕ್ಷ್ಮೇ ಲೇಔಟ್‌ ಪೊಲೀಸರು ಬಂಧಿಸಿದ್ದಾರೆ.

Vijaya Karnataka 22 Jul 2018, 5:00 am
ಬೆಂಗಳೂರು: ಚಿರತೆ ಮತ್ತು ಜಿಂಕೆ ಚರ್ಮ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಮಹಾಲಕ್ಷ್ಮೇ ಲೇಔಟ್‌ ಪೊಲೀಸರು ಬಂಧಿಸಿದ್ದಾರೆ.
Vijaya Karnataka Web leopard deer skin seize arrest
ಚಿರತೆ, ಜಿಂಕೆ ಚರ್ಮ ವಶ: 8 ಜನರ ಬಂಧನ

ಉತ್ತರ ಕನ್ನಡ ಜಿಲ್ಲೆಯ ಮಂಜುನಾಥ ರತ್ನಾಕರ್‌ (30), ಕೃಷ್ಣ ಗಣಪ್ಪ (60), ಉದಯ್‌ (48), ಉದಯ್‌ ರಾಮಾ ನಾಯ್ಕ (59), ಮಹೇಂದ್ರ ಹೆಗಡೆ (19), ಮಂಜುನಾಥ ನಾಯ್ಕ (24), ರಾಘವೇಂದ್ರ ನಾರಾಯಣ (27), ಸುನೀಲ್‌ ನಾಯ್ಕ (24) ಬಂಧಿತರು. ಇವರಿಂದ ಒಂದು ಚಿರತೆ ಚರ್ಮ, ಜಿಂಕೆ ಚರ್ಮ, 6 ಜಿಂಕೆ ಕೊಂಬುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಜು 19ರಂದು ಆರೋಪಿಗಳು ಮಹಾಲಕ್ಷ್ಮೇ ಲೇಔಟ್‌ನಲ್ಲಿ ಗೋಣಿ ಚೀಲದಲ್ಲಿ ಚಿರತೆ ಚರ್ಮ ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟಕ್ಕೆ ಯತ್ನಿಸುತ್ತಿರುವ ಮಾಹಿತಿ ಆಧರಿಸಿ ಬಂಧಿಸಲಾಗಿದೆ. ಆರೋಪಿಗಳು ವನ್ಯಜೀವಿ ಚರ್ಮ ಮತ್ತು ಕೊಂಬುಗಳನ್ನು ಯಾವ ಅರಣ್ಯದಲ್ಲಿ ಬೇಟೆಯಾಡಿ ತಂದಿದ್ದರು ಎಂಬ ಬಗ್ಗೆ ಪರಿಶೀಲನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ