ಆ್ಯಪ್ನಗರ

ಮಾವಳ್ಳಿಪುರ ಬಳಿ ಚಿರತೆ ಸೆರೆ

ಸಿಆರ್‌ಪಿಎಫ್‌ ಕ್ಯಾಂಪಸ್‌ ಹಿಂಭಾಗದ ಮಾವಳ್ಳಿಪುರದ ಸಮೀಪದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯು ಚಿರತೆಯೊಂದನ್ನು ಸೆರೆ ಹಿಡಿದಿದ್ದಾರೆ.

Vijaya Karnataka 27 Mar 2019, 5:00 am
ಯಲಹಂಕ: ಇಲ್ಲಿಗೆ ಸಮೀಪದ ಸಿಆರ್‌ಪಿಎಫ್‌ ಕ್ಯಾಂಪಸ್‌ ಹಿಂಭಾಗದ ಮಾವಳ್ಳಿಪುರದ ಸಮೀಪದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯು ಚಿರತೆಯೊಂದನ್ನು ಸೆರೆ ಹಿಡಿದಿದ್ದಾರೆ.
Vijaya Karnataka Web BRL-26YELAHANKA-1


ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರಿರುವ ರಾಮಗೊಂಡನಹಳ್ಳಿ -ಮಾವಳ್ಳಿ ಪುರದ ಕಾಡು ಪ್ರದೇಶದಲ್ಲಿ ಹಲವು ಬಾರಿ ಚಿರತೆ ನಾಗರಿಕರಿಗೆ ಕಣ್ಣಿಗೆ ಕಾಣಿಸಿಕೊಂಡಿತ್ತು. ವಾರದ ಹಿಂದೆಯಷ್ಟೆ ಮಾವಳ್ಳಿಪುರದ ಐವಿಆರ್‌ ರಸ್ತೆಯ ಭಾರತೀಯ ಪಶು ಸಂಶೋಧನಾ ಸಂಸ್ಥೆಯ 4-5 ಕರುಗಳನ್ನು ಚಿರತೆ ತಿಂದು ಹಾಕಿತ್ತು. ಈ ವಿಷಯವನ್ನು ಸಂಸ್ಥೆಯವರು ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದರು. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳದಲ್ಲಿ ಪರಿಶೀಲಿಸಿದಾಗ ಚಿರತೆ ಸಂಚಾರ ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಸಂಸ್ಥೆಯ ಆವರಣದಲ್ಲಿ ಇರಿಸಿದ್ದ ಬೋನು ಇರಿಸಲಾಗಿತ್ತು. ಸೋಮವಾರ ರಾತ್ರಿ ಚಿರತೆ ಬೋನಿನಲ್ಲಿ ಸಿಲುಕಿದೆ. ಪ್ರಥಮ ಚಿಕಿತ್ಸೆ ನೀಡಿ ಚಿರತೆಯನ್ನು ಬನ್ನೇರುಘಟ್ಟ ಅರಣ್ಯ ಪ್ರದೇಶಕ್ಕೆ ಕೊಂಡೊಯ್ಯಲಾಯಿತು ಎಂದು ಅರಣ್ಯ ಇಲಾಖೆಯ ಸಿಬ್ಬಂದಿ ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ಯಲಹಂಕ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ಐಟಿಸಿ ಕಾರ್ಖಾನೆಯ ನಾಗಮಂಗಲ ಸಮೀಪ ಚಿರತೆಯೊಂದನ್ನು ಸೆರೆ ಹಿಡಿಯಲಾಗಿತ್ತು.

ನಾಯಿಗಳು ಬಲಿ: ಮಾವಳ್ಳಿಪುರ ಭೂಭರ್ತಿ ಘಟಕದಲ್ಲಿ ತ್ಯಾಜ್ಯದ ನಡುವೆ ಸಿಗುತ್ತಿದ್ದ ಆಹಾರ ಆಶ್ರಯಿಸಿಕೊಂಡಿದ್ದ ನಾಯಿಗಳು ಒಮ್ಮೆಗೆ ಕಣ್ಮರೆಯಾಗುತ್ತಿದ್ದವು. ಇದು ಚಿರತೆಯದ್ದೇ ಕೃತ್ಯ ಎಂದು ಸ್ಥಳೀಯರು ಶಂಕಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ