ಆ್ಯಪ್ನಗರ

ಕಾರಿನ ಸಮೇತ ವ್ಯಕ್ತಿ ಭಸ್ಮ! ಒಂದು ಸಿಗರೇಟ್‌ ಗೆ ಜೀವ ಬಲಿಯಾಯ್ತೆ?

ಅಪಘಾತಕ್ಕೆ ತುತ್ತಾಗಿ ರಿಪೇರಿಗೆಂದು ನಿಲ್ಲಿಸಿದ್ದ ಕಾರು ಬೆಂಕಿಗೆ ಆಹುತಿ, ಜೀವಂತ ಸುಟ್ಟು ಕರಕಲಾದ ವ್ಯಕ್ತಿ. ಸಿಗರೇಟ್‌ ನಿಂದ ಈ ದುರಂತ ನಡೆದಿದೆ ಎಂದು ಶಂಕಿಸಿದ ಪೊಲೀಸರು. ಮೃತ ವ್ಯಕ್ತಿ ಯಾರೆಂದು ತನಿಖೆ.

Vijaya Karnataka 11 Feb 2020, 11:59 am
ಬೆಂಗಳೂರು: ಅಪಘಾತಕ್ಕೆ ತುತ್ತಾಗಿ ರಿಪೇರಿಗೆಂದು ನಿಲ್ಲಿಸಿದ್ದ ಕಾರಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಕಾರಿನೊಳಗಿದ್ದ ವ್ಯಕ್ತಿಯೊಬ್ಬರು ಜೀವಂತ ಸುಟ್ಟು ಕರಕಲಾಗಿದ್ದಾರೆ.
Vijaya Karnataka Web man burnt alive in car


ಡಿ.ಜೆ.ಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯ ಬಿಡಿಎ ರಸ್ತೆ ಸಮೀಪದ ಎಲ್‌.ಆರ್‌. ಬಂಡೆಯ ವರ್ಕ್ ಶಾಪ್‌ನಲ್ಲಿ ದುರಂತ ಸಂಭವಿಸಿದೆ. ಸೋಮವಾರ ರಾತ್ರಿ 8 ಗಂಟೆ ಸುಮಾರಿಗೆ ಅವಘಡ ಸಂಭವಿಸಿದ್ದು, ಜೀವಂತ ಸುಟ್ಟು ಹೋಗಿರುವ ವ್ಯಕ್ತಿ ಯಾರು ಎನ್ನುವ ಬಗ್ಗೆ ಇನ್ನೂ ಸುಳಿವು ಸಿಕ್ಕಿಲ್ಲ. ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಕೆಎ-01 ಎಂಡಿ 8797 ನಂಬರಿನ ಚಾರ್ಲೆಟ್‌ ಓಟ್ರಾ ಕಾರು ಅಪಘಾತಕ್ಕೀಡಾಗಿತ್ತು. ರಿಪೇರಿಗಾಗಿ ಕಾರನ್ನು ಹೆಬ್ಬಾಳದ ಗ್ಯಾರೇಜ್‌ಗೆ ಬಿಡಲಾಗಿತ್ತು. ಗ್ಯಾರೇಜ್‌ನ ಮೆಕ್ಯಾನಿಕ್‌ ಕಾರಿನ ಬಾಡಿಯ ದುರಸ್ತಿಗಾಗಿ ಅದನ್ನು ಎಲ್‌.ಆರ್‌. ಬಂಡೆಯಲ್ಲಿರುವ ವರ್ಕ್ ಶಾಪ್‌ಗೆ ತಂದು ನಿಲ್ಲಿಸಿ ಹೋಗಿದ್ದರು. ಸೋಮವಾರ ಸಂಜೆ ವರ್ಕ್ ಶಾಪ್‌ ಅವಧಿ ಮುಗಿದು ಬಾಗಿಲು ಹಾಕಿಕೊಂಡು ತರಳಿದ ಬಳಿಕ ಈ ಅನಾಹುತ ಸಂಭವಿಸಿದೆ.

ಕಾಡ್ಗಿಚ್ಚು ನಂದಿಸಲು ಕಾರ್ಬನ್‌ ಸಿಲಿಂಡರ್‌: ನಾಗರಹೊಳೆ ಅಭಯಾರಣ್ಯದಲ್ಲಿ ಯಶಸ್ವಿ ಪರೀಕ್ಷೆ

ಸಿಗರೇಟ್‌ನಿಂದ ಅನಾಹುತ ?

ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿರುವ ಎಫ್‌ಎಸ್‌ಎಲ್‌ ತಜ್ಞರಿಗೆ ಸ್ಥಳದಲ್ಲಿ ಸಿಗರೇಟ್‌ ಸೇದಿರುವುದು ಪತ್ತೆಯಾಗಿದೆ. ಯಾರೋ ಕುಡಿದ ಅಮಲಿನಲ್ಲಿ ಕಾರೊಳಗೆ ಕುಳಿತು ಸಿಗರೇಟ್‌ ಸೇದಿರಬೇಕು ಅಥವಾ ಕಾರಿನ ಒಳಗೇ ಕುಳಿತು ಮದ್ಯಪಾನ ಮಾಡಿ ಸಿಗರೇಟ್‌ ಸೇದಿರುವ ಸಾಧ್ಯತೆಗಳಿವೆ. ಈ ವೇಳೆ ಸಿಗರೇಟಿನ ಬೆಂಕಿಯಿಂದ ಕಾರು ಹೊತ್ತಿಕೊಂಡಿದ್ದು ಅಗ್ನಿ ಅನಾಹುತ ಸಂಭವಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ