ಆ್ಯಪ್ನಗರ

ಮಣಿಪಾಲ್‌ ವಂಚನೆ : ಮತ್ತೊಬ್ಬ ಆರೋಪಿ ಬಂಧನ

ಚೆನ್ನೈ ಮೂಲದ ಬಾಲಂಬಾಳ್‌ ಬಂಧಿತ ಆರೋಪಿ. ಈಕೆಯನ್ನು ವಶಕ್ಕೆ ಪಡೆಯಲು ಹಲವು ದಿನಗಳಿಂದ ಯತ್ನಿಸುತ್ತಿದ್ದ ಪೊಲೀಸರು ಶುಕ್ರವಾರ ರಾತ್ರಿ ಚೆನ್ನೈನಲ್ಲೇ ಬಂಧಿಸಿ ಬೆಂಗಳೂರಿಗೆ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಐದು ದಿನಗಳ ಕಾಲ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

Vijaya Karnataka 12 Aug 2019, 5:00 am
ವಿಕ ಸುದ್ದಿಲೋಕ ಬೆಂಗಳೂರು
Vijaya Karnataka Web arrest


ಮಣಿಪಾಲ್‌ ಎಜುಕೇಷನ್‌ ಮತ್ತು ಮೆಡಿಕಲ್‌ ಗ್ರೂಪ್‌ಗೆ 70 ಕೋಟಿ ರೂ. ವಂಚನೆ ಮಾಡಿದ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯನ್ನು ಕಬ್ಬನ್‌ಪಾರ್ಕ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಚೆನ್ನೈ ಮೂಲದ ಬಾಲಂಬಾಳ್‌ ಬಂಧಿತ ಆರೋಪಿ. ಈಕೆಯನ್ನು ವಶಕ್ಕೆ ಪಡೆಯಲು ಹಲವು ದಿನಗಳಿಂದ ಯತ್ನಿಸುತ್ತಿದ್ದ ಪೊಲೀಸರು ಶುಕ್ರವಾರ ರಾತ್ರಿ ಚೆನ್ನೈನಲ್ಲೇ ಬಂಧಿಸಿ ಬೆಂಗಳೂರಿಗೆ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಐದು ದಿನಗಳ ಕಾಲ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿ ಸಂದೀಪ್‌ ಗುರುರಾಜ್‌ ಮತ್ತು ಬಾಲಂಬಾಳ್‌ ಆತ್ಮೀಯರಾಗಿದ್ದರು. ಈ ಆತ್ಮೀಯತೆಯಿಂದಲೇ ಎರಡೂವರೆ ಕೋಟಿ ರೂಪಾಯಿಯನ್ನು ಪ್ರಮುಖ ಆರೋಪಿ ಸಂದೀಪ್‌ ಗುರುರಾಜ್‌ ಆಕೆಯ ಖಾತೆಗೆ ವರ್ಗಾವಣೆ ಮಾಡಿದ್ದಲ್ಲದೆ, ಆಕೆಯ ಕೈಗೆ 13 ಲಕ್ಷ ರೂ ನೀಡಿದ್ದ. ಪ್ರಕರಣ ಬೆಳಕಿಗೆ ಬಂದ ಬಳಿಕ ಇದುವರೆಗೂ ಬಂಧಿತರಾಗಿರುವ ಆರು ಮಂದಿಯನ್ನು ವಿಚಾರಣೆಗೆ ಒಳಪಡಿಸಿದ ಬಳಿಕ ಈಕೆಯ ವಿಚಾರ ಕೂಡ ಬೆಳಕಿಗೆ ಬಂದಿತ್ತು. ಚೆನ್ನೈನ ರೆಸಾರ್ಟ್‌ವೊಂದರಲ್ಲಿ ಬಾಲಂಬಾಳ್‌ ಹಾಗೂ ಆಕೆಯ ಪತಿಯನ್ನು ಭೇಟಿಯಾಗಿದ್ದ ಸಂದೀಪ್‌ ಕೆಲ ಉದ್ಯಮಗಳಲ್ಲಿ ಹಣ ಹೂಡಿಕೆ ಮಾಡುವ ಬಗ್ಗೆ ಚರ್ಚೆ ನಡೆಸಿ ಹಣ ವರ್ಗಾವಣೆ ಮಾಡಿದ್ದ ಎಂದು ತಿಳಿದು ಬಂದಿದೆ.

ಸಂದೀಪ್‌ನಿಂದ ಪಡೆದಿದ್ದ ಹಣವನ್ನು ಆರೋಪಿ ಬೆಂಗಳೂರು ಮತ್ತು ಚೆನ್ನೈನ ಕೆಲವೆಡೆ ನಾನಾ ಉದ್ದಿಮೆಗಳಲ್ಲಿ ಹೂಡಿಕೆ ಮಾಡಿರುವುದಲ್ಲದೆ, ಷೇರು ಮಾರುಕಟ್ಟೆ ವ್ಯವಹಾರದಲ್ಲೂ ತೊಡಗಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ವಿಚಾರಣೆಗಾಗಿ ಆಕೆಯನ್ನು ಐದು ದಿನಗಳ ಕಾಲ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ