ಆ್ಯಪ್ನಗರ

ಮೆಡಿಕಲ್‌ ಸೀಟ್‌ ಕೊಡಿಸುವುದಾಗಿ 20 ಲಕ್ಷ ರೂ. ಪಡೆದು ವಂಚನೆ

ನಗರದ ವೈದ್ಯಕೀಯ ಕಾಲೇಜಿನಲ್ಲಿ ಸೀಟ್‌ ಕೊಡಿಸುವುದಾಗಿ ಕೇರಳ ಮೂಲದ ವಿದ್ಯಾರ್ಥಿಯ ಪಾಲಕರನ್ನು ನಂಬಿಸಿದ ವಂಚಕನೊಬ್ಬ, 20 ಲಕ್ಷ ರೂ. ಪಡೆದು ತಲೆಮರೆಸಿಕೊಂಡಿದ್ದಾನೆ.

Vijaya Karnataka 20 Sep 2018, 5:00 am
ಬೆಂಗಳೂರು: ನಗರದ ವೈದ್ಯಕೀಯ ಕಾಲೇಜಿನಲ್ಲಿ ಸೀಟ್‌ ಕೊಡಿಸುವುದಾಗಿ ಕೇರಳ ಮೂಲದ ವಿದ್ಯಾರ್ಥಿಯ ಪಾಲಕರನ್ನು ನಂಬಿಸಿದ ವಂಚಕನೊಬ್ಬ, 20 ಲಕ್ಷ ರೂ. ಪಡೆದು ತಲೆಮರೆಸಿಕೊಂಡಿದ್ದಾನೆ.
Vijaya Karnataka Web medical seat kerala based person cheated
ಮೆಡಿಕಲ್‌ ಸೀಟ್‌ ಕೊಡಿಸುವುದಾಗಿ 20 ಲಕ್ಷ ರೂ. ಪಡೆದು ವಂಚನೆ


ಕೇರಳದ ತ್ರಿಶೂರ್‌ ಮೂಲದ ಸೈನಿ ಆಂಟೋ(44) ವಂಚನೆಗೊಳಗಾದವರು. ಸೈನಿ ಅವರ ಮಗ ನೀಟ್‌ ಪರೀಕ್ಷೆ ಬರೆದು ಮೆಡಿಕಲ್‌ ಸೀಟ್‌ಗಾಗಿ ಕಾಲೇಜುಗಳಲ್ಲಿ ಹುಡುಕಾಟ ನಡೆಸುತ್ತಿದ್ದರು. ಆ.14ರಂದು ಸೈನಿ ಆಂಟೋ ಅವರ ಮೊಬೈಲ್‌ಗೆ ಸಂದೇಶವೊಂದು ಬಂದಿದ್ದು, ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಮೆಡಿಕಲ್‌ ಸೀಟ್‌ ಕೊಡಿಸುತ್ತೇವೆ. ಮಾಹಿತಿಗಾಗಿ ಸಂಪರ್ಕಿಸಿ ಎಂದು ಹೇಳಲಾಗಿತ್ತು. ಹೀಗಾಗಿ ಸೈನಿ ತಂದೆ ಆ ನಂಬರ್‌ಗೆ ಕರೆ ಮಾಡಿದ್ದರು. ಈ ವೇಳೆ ಸುಭಾಷಿತ್‌ ಪತಿ ಎಂದು ಪರಿಚಯಿಸಿಕೊಂಡಿದ್ದ ವ್ಯಕ್ತಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಮೆಡಿಕಲ್‌ ಸೀಟ್‌ ಕೊಡಿಸುವುದಾಗಿ ತಿಳಿಸಿ ದಾಖಲೆಗಳನ್ನು ತೆಗೆದುಕೊಂಡು ಬೆಂಗಳೂರಿಗೆ ಬರುವಂತೆ ಹೇಳಿದ್ದ. ಅದರಂತೆ ಸೈನಿ ಅವರು ಪತ್ನಿ ಮತ್ತು ಮಗನ ಜತೆ ಆ.23ರಂದು ಬೆಂಗಳೂರಿಗೆ ಬಂದು, ಎಂ.ಜಿ. ಆ ವ್ಯಕ್ತಿಯನ್ನು ಭೇಟಿ ಮಾಡಿದ್ದರು.

ಈ ವೇಳೆ ಆರೋಪಿಯು, ನಗರದ ಡಾ.ಬಿ.ಆರ್‌ ಅಂಬೇಡ್ಕರ್‌ ಮೆಡಿಕಲ್‌ ಕಾಲೇಜಿನಲ್ಲಿ ವೈದ್ಯ ಸೀಟು ಕೊಡಿಸಿವುದಾಗಿ ಹೇಳಿ ಸೈನಿ ಅವರಿಂದ ಮುಂಗಡವಾಗಿ 10 ಲಕ್ಷ ರೂ. ಆರ್‌ಟಿಜಿಎಸ್‌ ಮಾಡಿಸಿಕೊಂಡಿದ್ದ. ಸೀಟು ನಿಗದಿಯಾದ ಬಳಿಕ 10 ಲಕ್ಷ ರೂ. ಕೊಡುವಂತೆ ಹೇಳಿದ್ದ. ಕೆಲ ದಿನದ ಬಳಿಕ ಸೀಟ್‌ ಆಗಿದೆ ಎಂದು ಹೇಳಿದ ಆತ ಮತ್ತೆ 10 ಲಕ್ಷ ರೂ. ಆರ್‌ಟಿಜಿಎಸ್‌ ಮಾಡಿಸಿಕೊಂಡಿದ್ದ. ಸೀಟು ಸಿಕ್ಕಿದೆ ಎಂದು ಭಾವಿಸಿದ ಅವರು ಮಗನನ್ನು ಕರೆದುಕೊಂಡು ಕಾಲೇಜಿಗೆ ಹೋಗಿದ್ದರು. ಈ ವೇಳೆ ಮೋಸ ಹೋಗಿರುವುದು ಗೊತ್ತಾಗಿದೆ. ಬಳಿಕ ಅವರು ಕಬ್ಬನ್‌ಪಾರ್ಕ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ