ಆ್ಯಪ್ನಗರ

ಮನೆಗೆ ನುಗ್ಗಿ ಒಂಟಿ ಮಹಿಳೆ ಮೇಲೆ ಅತ್ಯಾಚಾರ

ಮನೆಯಲ್ಲಿ ಒಂಟಿಯಾಗಿದ್ದ ಉತ್ತರ ಭಾರತ ಮೂಲದ 33 ವರ್ಷದ ಮಹಿಳೆಯನ್ನು ದುಷ್ಕರ್ಮಿಯೊಬ್ಬ ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಎಸಗಿರುವ ಘಟನೆ ಬಸವೇಶ್ವರ ನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Vijaya Karnataka 11 Nov 2018, 8:16 am
ಬೆಂಗಳೂರು : ಮನೆಯಲ್ಲಿ ಒಂಟಿಯಾಗಿದ್ದ ಉತ್ತರ ಭಾರತ ಮೂಲದ 33 ವರ್ಷದ ಮಹಿಳೆಯನ್ನು ದುಷ್ಕರ್ಮಿಯೊಬ್ಬ ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಎಸಗಿರುವ ಘಟನೆ ಬಸವೇಶ್ವರ ನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
Vijaya Karnataka Web 31277562_180246176122074_221722674429165568_n


ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವ ಸಂತ್ರಸ್ತ ಮಹಿಳೆ ವಿವಾಹಿತೆಯಾಗಿದ್ದು, ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆಯಲ್ಲಿರುವ ಮನೆಯೊಂದರಲ್ಲಿ ಸ್ನೇಹಿತೆಯರ ಜೊತೆ ವಾಸವಿದ್ದರು. ದೀಪಾವಳಿ ಹಬ್ಬದ ಪ್ರಯುಕ್ತ ಸ್ನೇಹಿತೆಯರು ಊರುಗಳಿಗೆ ತೆರಳಿದ್ದರಿಂದ ಮನೆಯಲ್ಲಿ ಒಂಟಿಯಾಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

''ನ.8ರಂದು ರಾತ್ರಿ 9.30ರ ಸುಮಾರಿಗೆ ಬಾಗಿಲು ಬಡಿದ ಸದ್ದು ಕೇಳಿಸಿತ್ತು. ಬಾಗಿಲು ತೆಗೆಯುತ್ತಿದ್ದಂತೆ ಅಪರಿಚಿತನೊಬ್ಬ ಬಲವಂತವಾಗಿ ಪ್ರವೇಶ ಮಾಡಿದ್ದಾನೆ. ಆಘಾತಗೊಂಡ ನಾನು ಕಾಪಾಡಿ ಕಾಪಾಡಿ ಎಂದು ಕೂಗಾಡಿದೆ. ಈ ವೇಳೆ ದುಷ್ಕರ್ಮಿಯು ನನ್ನ ಬಾಯಿಯನ್ನು ಗಟ್ಟಿಯಾಗಿ ಹಿಡಿದುಕೊಂಡು ಕೂದಲನ್ನು ಎಳೆದಾಡಿದ್ದಾನೆ. ಆತನ ಕೈ ಬೆರಳುಗಳನ್ನು ಕಚ್ಚಿ ದೂರ ತಳ್ಳಲು ಪ್ರಯತ್ನಿಸಿದೆ. ಪ್ರತಿರೋಧ ನಡುವೆಯು ದುಷ್ಕರ್ಮಿ, ಮನೆಯ ಒಳಗಿನಿಂದ ಬಾಗಿಲನ್ನು ಲಾಕ್‌ ಮಾಡಿಕೊಂಡು ನನ್ನನ್ನು ಕೊಠಡಿಯೊಳಗೆ ಎಳೆದುಕೊಂಡು ಹೋಗಿದ್ದ. ಕೆಲ ನಿಮಿಷಗಳಲ್ಲೇ ಪ್ರಜ್ಞೆ ತಪ್ಪಿತ್ತು. ಎಚ್ಚರಗೊಂಡಾಗ ಆತ ಮನೆಯಲ್ಲೇ ಇದ್ದ. ಆತನನ್ನು ಹಿಡಿಯಲು ಹಿಂದೆಯೇ ಓಡಿದೆ. ಆದರೆ, ಹಿಡಿಯಲು ಸಾಧ್ಯವಾಗಲಿಲ್ಲ'' ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ಮೊಬೈಲ್‌, ಹಣ ಕಳವು:

ದುಷ್ಕರ್ಮಿಯು ಮನೆಯ ಕಪಾಟುಗಳಲ್ಲಿಟ್ಟಿದ್ದ ಹಣ ಮತ್ತು ಮೊಬೈಲ್‌ ಫೋನ್‌ ದೋಚಿದ್ದಾನೆ. ಅಲ್ಲದೆ ಬ್ರಿಫ್‌ಕೇಸ್‌ ಕೂಡಾ ತೆರೆದು ನೋಡಿದ್ದಾನೆ. ಮನೆಯ ರೆಫ್ರೇಜಿರೇಟರ್‌ನಲ್ಲಿನ ಚಾಕೋಲೇಟ್‌, ಉಪ್ಪಿನಕಾಯಿ ಬಾಟಲಿ ತೆಗೆದಿದ್ದಾನೆ ಎಂದು ದೂರಿನಲ್ಲಿ ಸಂತ್ರಸ್ತೆ ವಿವರಿಸಿದ್ದಾರೆ. ಆರೋಪಿಯು ನೋಡಲು ಕಪ್ಪಗಿದ್ದು, ಆತನ ವಯಸ್ಸು ಸುಮಾರು 15ರಿಂದ 28 ಇರಬಹುದು. ಈ ಹಿಂದೆ ಆತನನ್ನು ನೋಡಿರಲಿಲ್ಲ ಎಂದು ದೂರಿನಲ್ಲಿ ಸಂತ್ರಸ್ತೆ ತಿಳಿಸಿದ್ದಾರೆ.

ಸಮೀಪದ ಕಟ್ಟಡಗಳಲ್ಲಿನ ಸಿಸಿ ಕ್ಯಾಮರಾ ಪರಿಶೀಲನೆ ನಡೆಸುತ್ತಿದ್ದೇವೆ. ಆತ ಪರಾರಿಯಾಗುವುದನ್ನು ನೆರೆ ಹೊರೆಯವರು ಗಮನಿಸಿದ್ದಾರೆ. ಹೀಗಾಗಿ, ಈ ಕುರಿತು ಸೂಕ್ಷ್ಮವಾಗಿ ಪರಿಶೀಲನೆ ನಡೆಸಿ ಆರೋಪಿ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ