ಆ್ಯಪ್ನಗರ

ಬೆಂಗಳೂರಿನಲ್ಲಿ ಕಳವಾಗಿದ್ದ ನಾಯಿ ಬೆಲೆ 8 ಕೋಟಿಯಲ್ಲ 2 ಲಕ್ಷ ರೂ ಮಾತ್ರ!

ರಾಜ್ಯ ರಾಜಧಾನಿಯಲ್ಲಿ ಕಳವಾಗಿದ್ದ ನಾಯಿ ಪ್ರಕರಣ ಮತ್ತೊಂದು ಟ್ವಿಸ್ಟ್‌ ಪಡೆದುಕೊಂಡಿದೆ. 8 ಕೋಟಿ ರೂ. ಮೌಲ್ಯದ ನಾಯಿ ಕಳವಾಗಿದೆ ಎಂದು ಪೊಲೀಸ್‌ಗೆ ದೂರು ನೀಡಿದ್ದರು. ಅಲ್ಲದೆ, ನಾಯಿ ಹುಡುಕಿಕೊಟ್ಟವರಿಗೆ 1 ಲಕ್ಷ ರೂ. ಬಹುಮಾನವನ್ನೂ ಘೋಷಿಸಿದ್ದರು.

Vijaya Karnataka 24 Dec 2019, 9:40 am
ಬೆಂಗಳೂರು: 8 ಕೋಟಿ ರೂ. ನಾಯಿ ಕಳವು ಎಂದು ಸಾಕಷ್ಟು ಸುದ್ದಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಯಿ ಕೊನೆಗೂ ಸಿಕ್ಕಿದೆ. ಆದರೆ ಅದರ ಬೆಲೆ ಕೇವಲ 2 ಲಕ್ಷ ರೂ. ಮಾತ್ರವಂತೆ!
Vijaya Karnataka Web missing dog in bengaluru 12


8 ಕೋಟಿ ರೂ. ಮೌಲ್ಯದ ನಾಯಿ ಕಳವಾಗಿದೆ ಎಂದು ಚೇತನ್‌ ಎಂಬುವವರು ಹನುಮಂತನಗರ ಠಾಣೆಗೆ ದೂರು ನೀಡಿದ್ದರು. ನಾಯಿ ಹುಡುಕಿಕೊಟ್ಟವರಿಗೆ ಒಂದು ಲಕ್ಷ ರೂಪಾಯಿ ನಗದು ಬಹುಮಾನವನ್ನೂ ಘೋಷಿಸಿದ್ದು, ಕುತೂಹಲ ಹುಟ್ಟಿಸಿತ್ತು.

ಚೀನಾದ ಅಲಸ್ಕನ್‌ ಮಾಲಮ್ಯೂಟ್‌ ತಳಿಗೆ ಸೇರಿದ್ದ ಶ್ವಾನವನ್ನು ಸತೀಶ್‌ ಎಂಬ ಸ್ನೇಹಿತರಿಂದ ಚೇತನ್‌ ಕೆಲ ದಿನಗಳ ಮಟ್ಟಿಗೆ ಪಡೆದಿದ್ದರು. ಮನೆ ಮುಂದೆ ನಾಯಿ ಕಟ್ಟಿಹಾಕಿದ್ದಾಗ ಅದು ಇದ್ದಕ್ಕಿದ್ದಂತೆಯೇ ನಾಪತ್ತೆಯಾಗಿತ್ತು. ಈ ಕಾರಣದಿಂದ ನಾಯಿ ಕಳ್ಳತನವಾಗಿರುವ ಬಗ್ಗೆ ಚೇತನ್‌ ದೂರು ನೀಡಿದ್ದರು. ನಾಯಿಯ ಮಾಲೀಕ ಸತೀಶ್‌ ನಾಯಿ ಬೆಲೆ 8 ಕೋಟಿ ರೂ. ಎಂದು ಹೇಳಿದ್ದರಂತೆ. ಅದೇ ಕಾರಣದಿಂದ ದೂರಿನಲ್ಲೇ 8 ಕೋಟಿ ರೂ. ಎಂದು ದಾಖಲಿಸಿದ್ದರಂತೆ. ''ನಾನು ಕೂಡ ನಾಯಿ ಬೆಲೆ 8 ಕೋಟಿ ರೂ. ಎಂದು ನಂಬಿದ್ದೆ. ಆದರೆ ಅದರ ಬೆಲೆ 2 ಲಕ್ಷ ಎಂಬುದು ಇದೀಗ ಗೊತ್ತಾಗಿದೆ,'' ಎಂದು ಮಾಧ್ಯಮದ ಜತೆ ಮಾತನಾಡಿದ ಚೇತನ್‌ ಹೇಳಿದ್ದಾರೆ.

ಈ ಸುದ್ದಿ ಓದಿ: ಬೆಂಗಳೂರಿನಲ್ಲಿ ಕಳವಾಗಿದ್ದ 8 ಕೋಟಿ ರೂ. ಮೌಲ್ಯದ ಶ್ವಾನ ಪತ್ತೆ: ಪರಿಚಯಸ್ಥರಿಂದಲೇ ಅಪಹರಣ?

ದೂರುದಾರ ಚೇತನ್‌ ಅವರ ಪರಿಚಯಸ್ಥರೇ ನಾಯಿಯನ್ನು ಕರೆದುಕೊಂಡು ಹೋಗಿದ್ದರು. ದೂರು ದಾಖಲಾದ ಬಳಿಕ ವಾಪಸ್‌ ಕರೆತಂದು ಪೊಲೀಸರಿಗೆ ಒಪ್ಪಿಸಿದ್ದಾರೆ. ಒಟ್ಟಾರೆ ಪ್ರಕರಣದಿಂದ ನಾಯಿ ಭರ್ಜರಿ ಪ್ರಚಾರ ಪಡೆಯುವಂತಾಯಿತು.

ಇದನ್ನೂ ಓದಿ: ಬೆಂಗಳೂರಿನಲ್ಲಿ 8 ಕೋಟಿ ರೂ. ಮೌಲ್ಯದ ನಾಯಿ ಕಳವು: ಹುಡುಕಿಕೊಟ್ಟವರಿಗೆ 1 ಲಕ್ಷ ರೂ. ಬಹುಮಾನ !

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ