ಆ್ಯಪ್ನಗರ

ಬೆಂಗಳೂರು: ಎಚ್ಚರ, ಜನನಿಬಿಡ ಚಾಮರಾಜಪೇಟೆಯಲ್ಲಿ ಮೊಬೈಲ್‌ ಕಳ್ಳರ ಹಾವಳಿ

ಬೆಂಗಳೂರಿನ ನಗರದ ಹೃದಯ ಭಾಗದಲ್ಲಿರುವ ಚಾಮರಾಜಪೇಟೆಯ ಅಕ್ಕಪಕ್ಕದ ರಸ್ತೆಗಳಲ್ಲಿ ಮೊಬೈಲ್‌ಫೋನ್‌ ಕಳ್ಳರ ಅಟ್ಟಹಾಸ ಜೋರಾಗಿದೆ. ಮೊಬೈಲ್‌ ಕಳ್ಳತನ ಈಗ ಹೆಚ್ಚಾಗಿದೆ.

Vijaya Karnataka Web 26 Feb 2020, 3:21 pm
ಬೆಂಗಳೂರು: ನಗರದ ಹೃದಯ ಭಾಗದಲ್ಲಿರುವ ಚಾಮರಾಜಪೇಟೆಯ ಪಂಪ ಮಹಾಕವಿ ರಸ್ತೆ ಸೇರಿದಂತೆ ಅಕ್ಕಪಕ್ಕದ ರಸ್ತೆಗಳಲ್ಲಿ ಮೊಬೈಲ್‌ ಫೋನ್‌ ಕಳ್ಳರ ಅಟ್ಟಹಾಸ ಮೇರೆ ಮೀರಿದೆ.
Vijaya Karnataka Web ಮೊಬೈಲ್‌ ಕಳ್ಳತನ
ಮೊಬೈಲ್‌ ಕಳ್ಳತನ


ಮಂಗಳವಾರ ಸಂಜೆ 5.30ರ ಸುಮಾರಿನಲ್ಲಿ ರಾಮೇಶ್ವರ ದೇವಸ್ಥಾನ ರಸ್ತೆ, ಎಸ್‌ಬಿಐ ಬ್ಯಾಂಕ್‌ನ ಮುಂಭಾಗದಲ್ಲಿರುವ ಆಟೋ ನಿಲ್ದಾಣದ ಬಳಿ ಬೈಕ್‌ನಲ್ಲಿ ಬಂದ ಇಬ್ಬರು ಕ್ಷಣಾರ್ಧದಲ್ಲಿ ಯುವಕನೊಬ್ಬನ ಮೊಬೈಲ್‌ ಫೋನ್‌ ಎಗರಿಸಿ ಪರಾರಿಯಾದರು. ಮೊಬೈಲ್‌ ಕಳೆದುಕೊಂಡ ಯುವಕ ಜೋರಾಗಿ ಕೂಗುತ್ತಲೇ ಕಳ್ಳರನ್ನು ಬೆನ್ನತ್ತಿ ಓಡಿದರೂ ಪ್ರಯೋಜನವಾಗಲಿಲ್ಲ. ಸಬ್‌ ರಿಜಿಸ್ಟ್ರಾರ್‌ ಕಚೇರಿವರೆಗೂ ಓಡಿದರೂ ಆರೋಪಿಗಳು ಶರವೇಗದಲ್ಲಿ ಪರಾರಿಯಾದರು. ಈ ವೇಳೆ ರಸ್ತೆಯಲ್ಲಿ ಅನೇಕ ಮಂದಿ ಓಡಾಡುತ್ತಿದ್ದರೂ ಕಳ್ಳರನ್ನು ಹಿಡಿಯುವ ಬದಲು ಮೂಕ ಪ್ರೇಕ್ಷಕರಾಗಿ ನಿಂತು ನೋಡುತ್ತಿದ್ದರು.

ಪ್ರತಿ ದಿವಸ ಚಾಮರಾಜಪೇಟೆಯಲ್ಲಿ ಮೊಬೈಲ್‌, ಸರಗಳ್ಳತನದಂತಹ ಪ್ರಕರಣಗಳು ನಡೆಯುತ್ತಿದ್ದರೂ ಪೊಲೀಸರು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಸಾರ್ವಜನಿಕರು ದೂರಿದರು.

ಪಂಪ ಮಹಾಕವಿ ರಸ್ತೆಯ ಮಿಂಟೋ ವೃತ್ತದಲ್ಲಿ ಪೊಲೀಸ್‌ ಠಾಣೆಯಿದ್ದರೂ ಮೊಬೈಲ್‌ ಕಳ್ಳರಿಗೆ ಯಾವುದೇ ಭಯ ಇಲ್ಲದಂತಾಗಿದೆ. ಇದೇ ರಸ್ತೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್‌, ಹಲವು ಬ್ಯಾಂಕ್‌ಗಳು, ಪತ್ರಿಕಾ ಕಚೇರಿ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಸರಕಾರಿ ಪದವಿ ಪೂರ್ವ ಕಾಲೇಜು, ಮಕ್ಕಳ ಕೂಟ ಸೇರಿದಂತೆ ಹಲವು ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು ಪ್ರತಿನಿತ್ಯ ಸಾವಿರಾರು ಮಂದಿ ಓಡಾಡುತ್ತಾರೆ. ಈ ಹಿಂದೆ ಪತ್ರಕರ್ತರೊಬ್ಬರ ಮೊಬೈಲ್‌ ಅನ್ನು ಕಳ್ಳರು ಎಗರಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ