ಆ್ಯಪ್ನಗರ

ಮೊಬೈಲ್‌ ಕಳ್ಳರನ್ನು ಬೆನ್ನತ್ತಿದ ಪೊಲೀಸರು

ಕ್ಯಾಬ್‌ಗಾಗಿ ಕಾಯುತ್ತಾ ನಿಂತಿದ್ದ ಸಾಫ್ಟ್‌ವೇರ್‌ ಎಂಜನಿಯರ್‌ವೊಬ್ಬರ ಕೈಯಲ್ಲಿದ್ದ ಮೊಬೈಲ್‌ ಕಿತ್ತುಕೊಂಡು ಪರಾರಿಯಾಗುತ್ತಿದ್ದ ಮೊಬೈಲ್‌ ಖದೀಮರನ್ನು ಸಿನಿಮೀಯ ಶೈಲಿಯಲ್ಲಿ ಪೊಲೀಸರು ಬೆನ್ನತ್ತಿದ ಘಟನೆ ಬಾಣಸವಾಡಿಯಲ್ಲಿ ನಡೆದಿದೆ.

Vijaya Karnataka 4 Feb 2019, 5:00 am
ಬೆಂಗಳೂರು: ಕ್ಯಾಬ್‌ಗಾಗಿ ಕಾಯುತ್ತಾ ನಿಂತಿದ್ದ ಸಾಫ್ಟ್‌ವೇರ್‌ ಎಂಜನಿಯರ್‌ವೊಬ್ಬರ ಕೈಯಲ್ಲಿದ್ದ ಮೊಬೈಲ್‌ ಕಿತ್ತುಕೊಂಡು ಪರಾರಿಯಾಗುತ್ತಿದ್ದ ಮೊಬೈಲ್‌ ಖದೀಮರನ್ನು ಸಿನಿಮೀಯ ಶೈಲಿಯಲ್ಲಿ ಪೊಲೀಸರು ಬೆನ್ನತ್ತಿದ ಘಟನೆ ಬಾಣಸವಾಡಿಯಲ್ಲಿ ನಡೆದಿದೆ.
Vijaya Karnataka Web mobile thief arrest
ಮೊಬೈಲ್‌ ಕಳ್ಳರನ್ನು ಬೆನ್ನತ್ತಿದ ಪೊಲೀಸರು


ಶನಿವಾರ ಸಂಜೆ ಘಟನೆ ನಡೆದಿದ್ದು, ಟೆಕ್ಕಿ ವಿನೋದ್‌ ಎನ್ನುವವರು ಕ್ಯಾಬ್‌ಗಾಗಿ ಕಾಯುತ್ತಾ ಲಿಂಗರಾಜಪುರ ಮುಖ್ಯ ರಸ್ತೆಯಲ್ಲಿ ನಿಂತಿದ್ದರು. ಕ್ಯಾಬ್‌ ಎಷ್ಟು ದೂರದಲ್ಲಿದೆ ಎನ್ನುವುದನ್ನು ಮೊಬೈಲ್‌ನಲ್ಲೇ ನೋಡುತ್ತಾ ನಿಂತಿದ್ದಾಗಲೇ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ವಿನೋದ್‌ ಕೈಯಲ್ಲಿದ್ದ ಮೊಬೈಲ್‌ ಕಿತ್ತುಕೊಂಡು ಪರಾರಿಯಾದರು. ತಮ್ಮ ಬಳಿ ಇದ್ದ ಮತ್ತೊಂದು ಮೊಬೈಲ್‌ನಲ್ಲಿ 'ನಮ್ಮ 100'ಗೆ ಕರೆ ಮಾಡಿದ್ದ ವಿನೋದ್‌, ದುಷ್ಕರ್ಮಿಗಳು ಪರಾರಿಯಾದ ಮಾರ್ಗವನ್ನೂ ತಿಳಿಸಿದ್ದರು.

ತಕ್ಷಣ ನಿಯಂತ್ರಣ ಕೊಠಡಿಯಿಂದ ಮಾಹಿತಿ ಘಟನಾ ಸ್ಥಳದ ಸಮೀಪದಲ್ಲೇ ಇದ್ದ ಹೊಯ್ಸಳಕ್ಕೆ ರವಾನೆಯಾಗಿತ್ತು. ಕೆಲವೇ ನಿಮಿಷಗಳಲ್ಲಿ ಹೊಯ್ಸಳ ಸಿಬ್ಬಂದಿ ದುಷ್ಕರ್ಮಿಗಳನ್ನು ಬೆನ್ನತ್ತಿ ಬಾರ್‌ವೊಂದರ ಬಳಿ ಅನುಮಾನಾಸ್ಪದವಾಗಿ ನಿಂತಿದ್ದವರೇ ಮೊಬೈಲ್‌ ಕಳ್ಳರು ಎನ್ನುವ ಅನುಮಾನದ ಮೇಲೆ ಅವರನ್ನು ಹಿಡಿದುಕೊಳ್ಳಲು ಕೆಳಗಿಳಿಯುತ್ತಿದ್ದಂತೆ ಆರೋಪಿಗಳಿಬ್ಬರೂ ಸ್ಥಳದಿಂದ ತಮ್ಮ ಬೈಕ್‌ ಹತ್ತಿ ಸ್ಥಳದಿಂದ ಕಾಲ್ಕಿತ್ತರು. ಹೊಯ್ಸಳ ಸಿಬ್ಬಂದಿ ಮತ್ತೊಂದು ಮಾರ್ಗದಿಂದ ಆ ಬೈಕ್‌ ಅನ್ನು ಅಡ್ಡ ಹಾಕುವಲ್ಲಿ ಯಶಸ್ವಿಯಾದರಾದರೂ ಮೊಬೈಲ್‌ ಬಿಸಾಡಿ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಬಾರ್‌ನ ಸಿಸಿಟಿವಿಯ ದೃಶ್ಯಗಳಲ್ಲಿ ಆರೋಪಿಗಳ ಮುಖ ಚಹರೆ ಸ್ಪಷ್ಟವಾಗಿ ದಾಖಲಾಗಿದೆ. ಸದ್ಯದಲ್ಲೇ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮಕ್ಕೆ ಒಳಪಡಿಸಲಾಗುವುದು ಎಂದು ಬಾಣಸವಾಡಿ ಠಾಣೆ ಪೊಲೀಸರು ಮಾಹಿತಿ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ