ಆ್ಯಪ್ನಗರ

ಫೋಕಸ್‌ ಡಯಾಗ್ನಾಸ್ಟಿಕ್ಸ್‌ ಕೇಂದ್ರಕ್ಕೆ 1 ಲಕ್ಷ ರೂ. ದಂಡ

ಬಯೋ ಮೆಡಿಕಲ್‌ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡದೆ ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ರಾಜಾಜಿನಗರದ ಫೋಕಸ್‌ ಡಯೊಗ್ನ್ನಾಸ್ಟಿಕ್ಸ್‌ ಮತ್ತು ಸ್ಪೆಷಾಲಿಟಿ ಕ್ಲಿನಿಕ್‌ಗೆ ಬಿಬಿಎಂಪಿ ಆರೋಗ್ಯಾಧಿಕಾರಿಗಳು ಒಂದು ಲಕ್ಷ ರೂ. ದಂಡ ವಿಧಿಸಿದ್ದಾರೆ.

Vijaya Karnataka 24 Mar 2019, 5:00 am
ಬೆಂಗಳೂರು: ಬಯೋ ಮೆಡಿಕಲ್‌ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡದೆ ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ರಾಜಾಜಿನಗರದ ಫೋಕಸ್‌ ಡಯೊಗ್ನ್ನಾಸ್ಟಿಕ್ಸ್‌ ಮತ್ತು ಸ್ಪೆಷಾಲಿಟಿ ಕ್ಲಿನಿಕ್‌ಗೆ ಬಿಬಿಎಂಪಿ ಆರೋಗ್ಯಾಧಿಕಾರಿಗಳು ಒಂದು ಲಕ್ಷ ರೂ. ದಂಡ ವಿಧಿಸಿದ್ದಾರೆ.
Vijaya Karnataka Web one lakh fine for diognastic center
ಫೋಕಸ್‌ ಡಯಾಗ್ನಾಸ್ಟಿಕ್ಸ್‌ ಕೇಂದ್ರಕ್ಕೆ 1 ಲಕ್ಷ ರೂ. ದಂಡ


ರಾಜಾಜಿನಗರ ವ್ಯಾಪ್ತಿಯಲ್ಲಿ ಮನೆ ಮನೆಯಿಂದ ಕಸ ಸಂಗ್ರಹಿಸುವ ಆಟೊದಲ್ಲಿ ವೈದ್ಯಕೀಯ ತ್ಯಾಜ್ಯ ಪತ್ತೆಯಾಗಿತ್ತು. ಈ ಕುರಿತು ಪೌರ ಕಾರ್ಮಿಕರು ಮತ್ತು ಕಸ ಸಂಗ್ರಹ ಆಟೊ ಚಾಲಕರನ್ನು ವಿಚಾರಿಸಿದಾಗ ಫೋಕಸ್‌ ಡಯೊಗ್ನಾಸ್ಟಿಕ್ಸ್‌ ಮತ್ತು ಕ್ಲಿನಿಕ್‌ನವರು ವೈದ್ಯಕೀಯ ತ್ಯಾಜ್ಯವನ್ನು ಹಾಕಿರುವ ಕುರಿತು ಮಾಹಿತಿ ನೀಡಿದರು. ಬಳಿಕ ಸಂಬಂಧಪಟ್ಟ ಕೇಂದ್ರಕ್ಕೆ 1 ಲಕ್ಷ ರೂ. ದಂಡ ವಿಧಿಸಲಾಗಿದೆ.

''ವೈದ್ಯಕೀಯ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವುದು ಎಲ್ಲ ಆಸ್ಪತ್ರೆಗಳು ಮತ್ತು ಡಯೊಗ್ನಾಸ್ಟಿಕ್ಸ್‌ ಕೇಂದ್ರಗಳ ಆದ್ಯ ಕರ್ತವ್ಯವಾಗಿರುತ್ತದೆ. ಆದರೆ, ಫೋಕಸ್‌ ಡಯಾಗ್ನಾಸ್ಟಿಕ್ಸ್‌ ನವರು ಅದನ್ನು ಉಲ್ಲಂಘಿಸಿದ್ದಾರೆ. ಆದ ಕಾರಣ, ಒಂದು ಲಕ್ಷ ರೂ. ದಂಡ ವಿಧಿಸಿ, ನೋಟಿಸ್‌ ನೀಡಲಾಗಿದೆ. ಮೂರು ದಿನಗಳೊಳಗೆ ಸಮಜಾಯಿಷಿ ನೀಡದಿದ್ದಲ್ಲಿ ಕೆಎಂಸಿ ಕಾಯಿದೆ ಅನ್ವಯ ಉದ್ದಿಮೆ ಪರವಾನಗಿಯನ್ನು ರದ್ದುಗೊಳಿಸಿ, ಕಾನೂನುರೀತ್ಯ ಕ್ರಮ ಜರುಗಿಸಲಾಗುವುದು,'' ಎಂದು ಡಾ. ಬಾಲಸುಂದರ್‌ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ