ಆ್ಯಪ್ನಗರ

ನಮ್ಮ ಮೆಟ್ರೋದಲ್ಲಿ ಯುವತಿಯ ಚಿತ್ರ ತೆಗೆದ ಕಿರಾತಕ

ನಮ್ಮ ಮೆಟ್ರೊದಲ್ಲಿ ಪ್ರಯಾಣಿಸುತ್ತಿದ್ದ ಯುವತಿಯ ಚಿತ್ರವನ್ನು ತೆಗೆದ ಸಹಪ್ರಯಾಣಿಸಕನೊಬ್ ಬಾದನ್ನು ವಾಟ್ಸಾಪ್‌ನಲ್ಲಿ ಶೇರ್‌ ಮಾಡಿರುವ ಘಟನೆ ಪೀಣ್ಯ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಟೈಮ್ಸ್ ಆಫ್ ಇಂಡಿಯಾ 9 Aug 2017, 5:54 pm
ಬೆಂಗಳೂರು: ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದ ಯುವತಿಯ ಚಿತ್ರವನ್ನು ತೆಗೆದ ಸಹಪ್ರಯಾಣಿಕನೊಬ್ಬ ಅದನ್ನು ವಾಟ್ಸಪ್‌ನಲ್ಲಿ ಶೇರ್‌ ಮಾಡಿರುವ ಘಟನೆ ಪೀಣ್ಯ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
Vijaya Karnataka Web pervert clicks girl on metro
ನಮ್ಮ ಮೆಟ್ರೋದಲ್ಲಿ ಯುವತಿಯ ಚಿತ್ರ ತೆಗೆದ ಕಿರಾತಕ


20 ವರ್ಷದ ಯುವತಿಯು ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದು, ಕಳೆದ ಗುರುವಾರದಂದು ಮಂತ್ರಿಮಾಲ್‌ ನಿಲ್ದಾಣದಿಂದ ಜಾಲಹಳ್ಳಿ ಕ್ರಾಸ್‌ ನಿಲ್ದಾಣಕ್ಕೆ ಪ್ರಯಾಣಿಸಲು ರೈಲು ಹತ್ತಿದ್ದರು. ರೈಲಿನಲ್ಲಿದ್ದ ಸಹ ಪ್ರಯಾಣಿಕನೊಬ್ಬ ಆಕೆಯ ಚಿತ್ರವನ್ನು ತೆಗೆದು ಅಸಭ್ಯವಾಗಿ ವರ್ತಿಸಿದ್ದಾನೆ. ಬಳಿಕ ಆ ಚಿತ್ರವನ್ನು ವಾಟ್ಸಪ್‌ ಗ್ರೂಪನಲ್ಲೂ ಶೇರ್‌ ಮಾಡಿಕೊಂಡಿದ್ದಾನೆ ಎಂದು ಯುವತಿ ಪೊಲೀಸರಿಗೆ ತಿಳಿಸಿದ್ದಾರೆ.

'ಜಾಲಹಳ್ಳಿ ಕ್ರಾಸ್‌ ನಿಲ್ದಾಣ ಬರುತ್ತಿದ್ದಂತೆ ನಾನು ಇಳಿಯಲು ಮುಂದಾದೆ ಆತ ಕೂಡಾ ನನ್ನ ಹಿಂದೆಯೇ ಬಂದೆ, ಕೂಡಲೇ ಆತನ ಮೊಬೈಲ್‌ ನೀಡುವಂತೆ ಕೇಳಿದ ಬಳಿಕ ಆತ ಓಡಿ ಹೋಗಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಕೂಡಲೇ ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿಗೆ ವಿಷಯ ತಿಳಿಸಿದ್ದೆ.ಆಗ ಸಿಬ್ಬಂದಿಯು ಆತನನ್ನು ಬೆನ್ನಟ್ಟಿ ಹಿಡಿದುಮೊಬೈಲ್‌ ವಶಕ್ಕೆ ಪಡೆದಿದ್ದರು. ಆದರೆ ಇಷ್ಟೊತ್ತಿಗಾಗಲೇ ಆ ಚಿತ್ರಗಳನ್ನು ವ್ಯಕ್ತಿ ಡಿಲಿಟ್‌ ಮಾಡಿದ್ದ. ಹೀಗಾಗಿ ಆತನನ್ನು ಸಿಬ್ಬಂಧಿ ಬಿಟ್ಟು ಕಳುಹಿಸಿದ್ದಾರೆ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

ಇಂತಹ ವಿಚಾರವನ್ನು ನಿರ್ವಹಸುವಲ್ಲಿ ಮೆಟ್ರೊ ಸಿಬ್ಬಂದಿಗೆ ನೀಡುತ್ತಿರುವ ತರಬೇತಿ ಕೂಡಾ ಕಡಿಮೆಯಿದೆ ಎಂದು ಸಂತ್ರಸ್ಥೆ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಆದರೆ ಬಿಎಂಆರ್‌ಸಿಎಲ್‌ ಅಧಿಕಾರಿಗಳು ಮಾತ್ರ ಯುವತಿಯೇ ಆತನನ್ನು ಬಿಟ್ಟು ಬಿಡುವಂತೆ ಹೇಳಿದ್ದಾಳೆ ಹೀಗಾಗಿ ಸಿಬ್ಬಂದಿ ಆ ಯುವಕನ್ನು ಬಿಟ್ಟು ಕಳುಹಿಸಿದ್ದಾರೆ ಎಂದು ಪೊಲೀಸರಿಗೆ ಹೇಳಿದ್ದಾರೆ.

ಅಲ್ಲದೇ ಪೊಲೀಸರ ತನಿಖೆಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿರುವ ಬಿಎಂಆರ್‌ಸಿ ಅಧಿಕಾರಿಗಳು, ಸಿಸಿಟಿವಿ ಚಿತ್ರವನ್ನೂ ನೀಡುವುದಾಗಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ