ಆ್ಯಪ್ನಗರ

ರೌಡಿಗಳಿಗೆ ಗೂಂಡಾ ಕಾಯ್ದೆಯಡಿ ಬಂಧಿಸುವ ಎಚ್ಚರಿಕೆ

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಬಾರದಂತೆ ತಡೆಯಲು ಹಾಗೂ ರೌಡಿ ಚಟುವಟಿಕೆಗಳಿಗೆ ಬ್ರೇಕ್‌ ಹಾಕುವ ಹಿನ್ನೆಲೆಯಲ್ಲಿ ಉತ್ತರ ಡಿಸಿಪಿ ವಿಭಾಗದ ಪೊಲೀಸರು ಶನಿವಾರ ತಡ ರಾತ್ರಿಯಿಂದ ಭಾನುವಾರ ನಸುಕಿನವರೆಗೆ ರೌಡಿಗಳು ಹಾಗೂ ಚಾಳಿ ಬಿದ್ದ ಆರೋಪಿಗಳ ಪರೇಡ್‌ ನಡೆಸಿದರು.

Vijaya Karnataka 18 Mar 2019, 5:00 am
ಬೆಂಗಳೂರು: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಬಾರದಂತೆ ತಡೆಯಲು ಹಾಗೂ ರೌಡಿ ಚಟುವಟಿಕೆಗಳಿಗೆ ಬ್ರೇಕ್‌ ಹಾಕುವ ಹಿನ್ನೆಲೆಯಲ್ಲಿ ಉತ್ತರ ಡಿಸಿಪಿ ವಿಭಾಗದ ಪೊಲೀಸರು ಶನಿವಾರ ತಡ ರಾತ್ರಿಯಿಂದ ಭಾನುವಾರ ನಸುಕಿನವರೆಗೆ ರೌಡಿಗಳು ಹಾಗೂ ಚಾಳಿ ಬಿದ್ದ ಆರೋಪಿಗಳ ಪರೇಡ್‌ ನಡೆಸಿದರು.
Vijaya Karnataka Web police warned rowdies
ರೌಡಿಗಳಿಗೆ ಗೂಂಡಾ ಕಾಯ್ದೆಯಡಿ ಬಂಧಿಸುವ ಎಚ್ಚರಿಕೆ


800 ಕ್ಕೂ ಅಧಿಕ ಆರೋಪಿಗಳ ಮನೆ ಮತ್ತು ಅಡ್ಡೆಗಳ ಮೇಲೆ ದಾಳಿ ನಡೆಸಿ ಎಲ್ಲರನ್ನೂ ಜಾಲಹಳ್ಳಿ ಠಾಣೆ ವ್ಯಾಪ್ತಿಯ ಬಿಇಎಲ್‌ ಮೈದಾನದಲ್ಲಿ ಸೇರಿಸಿ ಕಾನೂನು ಕೈಗೆತ್ತಿಕೊಳ್ಳದಂತೆ ಖಡಕ್‌ ಸೂಚನೆ ನೀಡಲಾಗಿದೆ.

ಡಿಸಿಪಿ ಎನ್‌.ಶಶಿಕುಮಾರ್‌ ನೇತೃತ್ವದಲ್ಲಿ ಯಶವಂತಪುರ, ಜಾಲಹಳ್ಳಿ, ಮಲ್ಲೇಶ್ವರ, ಶ್ರೀರಾಮಪುರ, ಆರ್‌ಎಂಸಿ ಯಾರ್ಡ್‌, ಪೀಣ್ಯ, ಗಂಗಮ್ಮನಗುಡಿ, ಹೆಬ್ಬಾಳ ಸೇರಿದಂತೆ 18 ಠಾಣಾ ವ್ಯಾಪ್ತಿಗಳಲ್ಲಿ ಈ ದಾಳಿ ನಡೆದಿದೆ. ಆರೋಪಿಗಳ ಪ್ರಸ್ತುತ ವಿಳಾಸ ಮೊಬೈಲ್‌ ನಂಬರ್‌ ಹಾಗೂ ಪೂರ್ವಾಪರದ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗಿದ್ದು, ಚುನಾವಣೆ ಸಮೀಪಿಸಿರುವಾಗ ಯಾರಾದರೂ ತಕರಾರು, ಗೂಂಡಾಗಿರಿ ಮಾಡಿದರೆ ಗೂಂಡಾ ಕಾಯ್ದೆಯಡಿ ಬಂಧಿಸಿ ಕಾನೂನು ಕ್ರಮ ಜರುಗಿಸುವುದಾಗಿ ಡಿಸಿಪಿ ಎನ್‌.ಶಿವಕುಮಾರ್‌ ಎಚ್ಚರಿಕೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ