ಆ್ಯಪ್ನಗರ

ಚಲಿಸುತ್ತಿದ್ದಾಗಲೇ ಬಾಡಿಗೆ ಸ್ಕೂಟರ್‌ಗೆ ಬೆಂಕಿ

ಮೆಟ್ರೊ ನಿಲ್ದಾಣದಿಂದ ಬಾಡಿಗೆಗೆ ತೆಗೆದುಕೊಂಡು ಹೋಗುತ್ತಿದ್ದ ಬೌನ್ಸ್‌ ಕಂಪನಿಯ ಬಾಡಿಗೆ ಸ್ಕೂಟರ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಸುಟ್ಟು ಕರಕಲಾಗಿರುವ ಘಟನೆ ನಾಗರಬಾವಿ ರಿಂಗ್‌ ರಸ್ತೆಯಲ್ಲಿ ನಡೆದಿದೆ.

Vijaya Karnataka 15 Mar 2019, 5:00 am
ಬೆಂಗಳೂರು: ಮೆಟ್ರೊ ನಿಲ್ದಾಣದಿಂದ ಬಾಡಿಗೆಗೆ ತೆಗೆದುಕೊಂಡು ಹೋಗುತ್ತಿದ್ದ ಬೌನ್ಸ್‌ ಕಂಪನಿಯ ಬಾಡಿಗೆ ಸ್ಕೂಟರ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಸುಟ್ಟು ಕರಕಲಾಗಿರುವ ಘಟನೆ ನಾಗರಬಾವಿ ರಿಂಗ್‌ ರಸ್ತೆಯಲ್ಲಿ ನಡೆದಿದೆ.
Vijaya Karnataka Web rented bike burnt when riding
ಚಲಿಸುತ್ತಿದ್ದಾಗಲೇ ಬಾಡಿಗೆ ಸ್ಕೂಟರ್‌ಗೆ ಬೆಂಕಿ


ಘಟನೆಯಲ್ಲಿ ಅದೃಷ್ಟವಷಾತ್‌ ದ್ವಿಚಕ್ರ ವಾಹನ ಸವಾರ ಅಪಾಯದಿಂದ ಪಾರಾಗಿದಾರೆ. ನಾಗರಬಾವಿಯ ಕಲ್ಯಾಣ ನಗರದ ನಿವಾಸಿಯಾಗಿರುವ ಸಂಜಯ್‌, ಬುಧವಾರ ರಾತ್ರಿ ಮೆಜೆಸ್ಟಿಕ್‌ ಮೆಟ್ರೊ ನಿಲ್ದಾಣದಿಂದ ಬೌನ್ಸ್‌ ಕಂಪನಿಯ ಸ್ಕೂಟರ್‌ ಬಾಡಿಗೆಗೆ ಪಡೆದುಕೊಂಡು ಹೋಗಿದ್ದರು. ರಿಂಗ್‌ ರಸ್ತೆಯಲ್ಲಿರುವ ತೆರಿಗೆ ಭವನ ಸಮೀಪದ ಅಂಡರ್‌ಪಾಸ್‌ನಲ್ಲಿ ತೆರಳುತ್ತಿದ್ದಾಗ ಏಕಾಏಕಿ ಎಂಜಿನ್‌ ಬಳಿ ಬೆಂಕಿ ಕಾಣಿಸಿಕೊಂಡಿದ್ದು, ನಂತರ ಬೆಂಕಿ ಹೊತ್ತಿಕೊಳ್ಳಲು ಆರಂಭಿಸಿದೆ. ಅಪಾಯದ ಅರಿವಾದಾಗ ಸ್ಕೂಟರ್‌ ನಿಲ್ಲಿಸಿದ ಸಂಜಯ್‌ ದೂರ ಓಡಿ, ಅಗ್ನಿಶಾಮಕ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ತೆರಳಿದ ಅಗ್ನಿಶಾಮಕ ವಾಹನ ಮತ್ತು ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಆದರೆ, ಅಷ್ಟರಲ್ಲಿ ಸ್ಕೂಟರ್‌ ಬಹುತೇಕ ಬೆಂಕಿಗೆ ಆಹುತಿಯಾಗಿತ್ತು.

ಬೆಂಕಿಗೆ ನಿಖರ ಕಾರಣ ಗೊತ್ತಾಗಿಲ್ಲ. ಆದರೆ, ಎಂಜಿನ್‌ ಬಿಸಿ ಹೆಚ್ಚಾಗಿ ಬೆಂಕಿ ಉಂಟಾಗಿರಬಹುದು ಎಂದು ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಅನುಮಾನ ವ್ಯಕ್ತಪಡಿಸಿದ್ದಾರೆ. ಸಂಜಯ್‌ ನೀಡಿದ ದೂರು ಆಧರಿಸಿ ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ