ಆ್ಯಪ್ನಗರ

ನೀರು ಕೇಳುವ ಸೋಗಿನಲ್ಲಿ ಮನೆಗೆ ನುಗ್ಗಿ ದರೋಡೆ: ಐವರ ಸೆರೆ

ನೀರು ಕೇಳುವ ನೆಪದಲ್ಲಿ ಮನೆಗಳಿಗೆ ನುಗ್ಗಿ, ಮನೆಯಲ್ಲಿದ್ದವರನ್ನು ಬೆದರಿಸಿ ಚಿನ್ನಾಭರಣ, ನಗದು ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ದರೋಡೆ ಮಾಡುತ್ತಿದ್ದ ಐವರು ಆರೋಪಿಗಳನ್ನು ಭಾರತಿ ನಗರ ಪೊಲೀಸರು ಬಂಧಿಸಿದ್ದಾರೆ.

Vijaya Karnataka 5 Aug 2018, 9:06 am
ಬೆಂಗಳೂರು: ನೀರು ಕೇಳುವ ನೆಪದಲ್ಲಿ ಮನೆಗಳಿಗೆ ನುಗ್ಗಿ, ಮನೆಯಲ್ಲಿದ್ದವರನ್ನು ಬೆದರಿಸಿ ಚಿನ್ನಾಭರಣ, ನಗದು ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ದರೋಡೆ ಮಾಡುತ್ತಿದ್ದ ಐವರು ಆರೋಪಿಗಳನ್ನು ಭಾರತಿ ನಗರ ಪೊಲೀಸರು ಬಂಧಿಸಿದ್ದಾರೆ.
Vijaya Karnataka Web loot


ಶಿವಾಜಿನಗರದ ಫಾರೂಕ್‌ (24), ನದೀಮ್‌ ಅಹ್ಮದ್‌ (21), ಜವಾದ್‌ ಅಲಿ (21), ಕೆ.ಜಿ ಹಳ್ಳಿಯ ನದೀಮ್‌ ಖಾನ್‌(22) ಮತ್ತು ಭಾರತಿ ನಗರದ ರತನ್‌ (20) ಬಂಧಿತರು. ಆರೋಪಿಗಳಿಂದ 4 ಲಕ್ಷ ರೂ. ಮೌಲ್ಯದ ಚಿನ್ನದ ಸರಗಳು, 14 ಕೈಗಡಿಯಾರ ಮತ್ತು ಒಂದು ಕ್ಯಾಮೆರಾ ಜಪ್ತಿ ಮಾಡಲಾಗಿದೆ ಎಂದು ಪೂರ್ವ ವಿಭಾಗ ಡಿಸಿಪಿ ಅಜಯ್‌ ಹಿಲೋರಿ ತಿಳಿಸಿದರು.

ಭಾರತಿ ನಗರ ಠಾಣೆ ವ್ಯಾಪ್ತಿಯಲ್ಲಿ ಆರೋಪಿಗಳು, ದರೋಡೆ ಮಾಡಲು ಹೊಂಚು ಹಾಕಿ ಕುಳಿತಿದ್ದ ವೇಳೆ ಸಿಕ್ಕ ಖಚಿತ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನೀರು ಕೇಳುವ ನೆಪದಲ್ಲಿ ನುಗ್ಗಿದ್ದರು

ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಜೋನಾಥನ್‌ ಥಾಮಸ್‌ ಪತ್ನಿ ಜತೆ ಎಚ್‌ಬಿಆರ್‌ ಲೇಔಟ್‌ 5ನೇ ಬ್ಲಾಕ್‌ನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದಾರೆ.

ಜೂ.25ರಂದು ಜೋನಾಥನ್‌ ಮನೆಯಲ್ಲಿ ಒಬ್ಬರೇ ಇದ್ದರು. ಸಂಜೆ 5.20ರ ಸುಮಾರಿಗೆ ಬಾಗಿಲು ಬಡಿದಂತಾಗಿದೆ. ಈ ಹಿನ್ನೆಲೆಯಲ್ಲಿ ತನ್ನ ಪತ್ನಿ ಬಂದಿರಬಹುದು ಎಂದು ಭಾವಿಸಿ ಬಾಗಿಲು ತೆಗೆದಿದ್ದರು. ಈ ವೇಳೆ ಅಪರಿಚಿತ ವ್ಯಕ್ತಿ ಕುಡಿಯಲು ನೀರು ಕೊಡಿ ಎಂದು ಕೇಳಿದ್ದಾನೆ. ಈ ವೇಳೆ ಅವರು ನೀರು ತರಲು ಕಿಚನ್‌ಗೆ ಹೋಗಿದ್ದರು. ಈ ವೇಳೆ ಮೂವರು ವ್ಯಕ್ತಿಗಳು ಮನೆಯೊಳಗೆ ನುಗ್ಗಿ ಒಳಗಿನಿಂದ ಬೋಲ್ಟ್‌ ಹಾಕಿ ಚಾಕು ತೋರಿಸಿ ಕಿರುಚಾಡದಂತೆ ಬೆದರಿಸಿದ್ದಾರೆ. ನಂತರ ಜೋನಾಥನ್‌ ಕತ್ತಿನಲ್ಲಿದ್ದ 85 ಗ್ರಾಂ ತೂಕದ 2 ಚಿನ್ನದ ಸರಗಳು, ಪರ್ಸ್‌ನಲ್ಲಿದ್ದ 1,500 ರೂ. ನಗದು ಕಿತ್ತುಕೊಂಡಿದ್ದಾರೆ. ಗುಂಪಿನಲ್ಲಿದ್ದ ಒರ್ವ ಡೈನಿಂಗ್‌ ಟೇಬಲ್‌ ಮೇಲೆ ಇಟ್ಟಿದ್ದ ಚಾಕು ತೆಗೆದುಕೊಂಡು ಕಪಾಟುಗಳಲ್ಲಿ ಹುಡುಕಾಡಿ ವಿವಿಧ ಕಂಪನಿಗಳ 17 ವಾಚ್‌ಗಳು ಮತ್ತು ಡಿಎಸ್‌ಎಲ್‌ಆರ್‌ ಕ್ಯಾಮೆರಾ, ಸುಗಂಧದ್ರವ್ಯಗಳನ್ನು ಎತ್ತಿಕೊಂಡಿದ್ದ. ಈ ವೇಳೆ ಒರ್ವ ವ್ಯಕ್ತಿ ಮನೆಯ ಬಾಗಿಲ ಬಳಿ ನಿಂತು ಯಾರಾದರೂ ಬರುತ್ತಾರಾ ಎಂದು ಗಮನಿಸುತ್ತಿದ್ದ. ಬಳಿಕ ದುಷ್ಕರ್ಮಿಗಳು ಒಬ್ಬೊಬ್ಬರಾಗಿ ಮನೆಯಿಂದ ಪರಾರಿಯಾಗಿದ್ದರು. ಈ ಸಂಬಂಧ ಜೋನಾಥನ್‌ ಹೆಣ್ಣೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ