ಆ್ಯಪ್ನಗರ

ರೌಡಿ ಹತ್ಯೆಗೈದ ಪತ್ನಿ ಬಂಧನ

ತಾಯಿ ಮನೆಯಿಂದ ಬಲವಂತವಾಗಿ ಕರೆದೊಯ್ಯಲು ಬಂದಿದ್ದ ಪತಿಯನ್ನು ಪಕ್ಕದ ಮನೆಯ ಸ್ನೇಹಿತನ ಜತೆ ಸೇರಿ ಪತ್ನಿಯೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಆಡೋಗೋಡಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Vijaya Karnataka 4 May 2019, 5:00 am
ಬೆಂಗಳೂರು : ತಾಯಿ ಮನೆಯಿಂದ ಬಲವಂತವಾಗಿ ಕರೆದೊಯ್ಯಲು ಬಂದಿದ್ದ ಪತಿಯನ್ನು ಪಕ್ಕದ ಮನೆಯ ಸ್ನೇಹಿತನ ಜತೆ ಸೇರಿ ಪತ್ನಿಯೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಆಡೋಗೋಡಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪತ್ನಿ ಮತ್ತು ಆಕೆಯ ನೆರವವಿಗೆ ಬಂದ ಸ್ನೇಹಿತನನ್ನು ಪೊಲೀಸರು ಸ್ಥಳದಲ್ಲೇ ಬಂಧಿಸಿದ್ದಾರೆ.
Vijaya Karnataka Web rowdy murder wife arrest
ರೌಡಿ ಹತ್ಯೆಗೈದ ಪತ್ನಿ ಬಂಧನ


ತಮಿಳುನಾಡು ಮೂಲದ ಎಲ್‌.ಆರ್‌.ನಗರದಲ್ಲಿ ವಾಸವಿದ್ದ ಎಡ್ವಿನ್‌ ಅಲಿಯಾಸ್‌ ಅಲೆಕ್ಸಾಂಡರ್‌ (34) ಕೊಲೆಯಾದ ರೌಡಿ. ಈತನನ್ನು ಕೊಲೆ ಮಾಡಿದ ಆರೋಪದ ಮೇಲೆ ಪತ್ನಿ ಸುಜಾತ (28) ಹಾಗೂ ಮನೆಯ ಸ್ನೇಹಿತ ಶ್ರೀಧರ್‌ನನ್ನು (24) ಪೊಲೀಸರು ಬಂಧಿಸಿದ್ದಾರೆ.

ಆಡುಗೋಡಿ ಪೊಲೀಸ್‌ ಠಾಣೆಯಲ್ಲಿ ರೌಡಿ ಶೀಟರ್‌ ಆಗಿದ್ದ ಎಡ್ವಿನ್‌ ಕಳೆದ 3 ವರ್ಷಗಳಿಂದ ರೌಡಿ ಚಟುವಟಿಕೆಗಳಿಂದ ದೂರ ಉಳಿದಿದ್ದ. ಬೆಂಗಳೂರಿನಲ್ಲೇ ಇದ್ದರೆ ಹಳೆದ ದ್ವೇಷಕ್ಕೆ ಮತ್ತೆ ಮತ್ತೆ ಜಗಳ ನಡೆಯುತ್ತದೆ ಎಂದು ಬೆಂಗಳೂರು ತೊರೆದು ತಮಿಳುನಾಡು ಸೇರಿ ಕೂಲಿ ಕೆಲಸ ಮಾಡಿಕೊಂಡಿದ್ದ. ಆದರೆ, ಈತನ ವರ್ತನೆಯಿಂದ ಬೇಸತ್ತಿದ್ದ ಪತ್ನಿ ಸುಜಾತ ತನ್ನ ಮೂವರು ಮಕ್ಕಳ ಸಮೇತ ಬೆಂಗಳೂರಿನಲ್ಲೇ ಉಳಿದಿದ್ದಳು. ಆಕೆಯನ್ನು ವಾಪಸ್‌ ತಮಿಳುನಾಡಿಗೆ ಕರೆದುಕೊಂಡು ಹೋಗಲು ಅಲೆಕ್ಸಾಂಡರ್‌ ಬಂದಿದ್ದಾಗ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ರೌಡಿ ಪಟ್ಟಿಗೆ ಸೇರುವುದಕ್ಕೂ ಮೊದಲು ಎಡ್ವಿನ್‌ ಕೂಲಿ ಕೆಲಸ ಮಾಡಿಕೊಂಡಿದ್ದ. ಈ ವೇಳೆ ತರಕಾರಿ ವ್ಯಾಪಾರ ಮಾಡುತ್ತಿದ್ದ ಸುಜಾತಳನ್ನು ಮದುವೆಯಾಗಿದ್ದ. ರೌಡಿಸಂ ಬಿಡುವ ಉದ್ದೇಶದಿಂದ ಎಡ್ವಿನ್‌ ತಮಿಳುನಾಡಿಗೆ ಹೊರಟಾಗ ಪತ್ನಿ ಹೋಗಲು ಒಪ್ಪದೇ ಆಡುಗೋಡಿಯಲ್ಲಿರುವ ತಾಯಿ ಮನೆ ಸೇರಿದ್ದಳು. ಮಕ್ಕಳನ್ನು ಬೆಂಗಳೂರಿನಲ್ಲೇ ಶಾಲೆಗೆ ಸೇರಿಸಿದ್ದೇನೆ. ಹೀಗಾಗಿ ತಮಿಳುನಾಡಿಗೆ ಬರುವುದಿಲ್ಲ ಎಂದು ಹಠ ಹಿಡಿದಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದರು.

ಅದೇ ರೀತಿ ಸುಜಾತ, ಪಕ್ಕದ ಮನೆಯ ಶ್ರೀಧರ್‌ ಎಂಬಾತನ ಜತೆ ಸಲುಗೆಯಿಂದ ಇರುವ ಬಗ್ಗೆ ಎಡ್ವಿನ್‌ಗೆ ಅಸಮಾಧಾನ ಇತ್ತು. ಮೇ 2ರಂದು ಪತ್ನಿಯನ್ನು ಕರೆದುಕೊಂಡು ಹೋಗಲು ಬೆಂಗಳೂರಿಗೆ ಬಂದಿದ್ದ ಎಡ್ವಿನ್‌, ಪತ್ನಿಗೆ ತಮಿಳುನಾಡಿಗೆ ಬರುವಂತೆ ಒತ್ತಾಯಿಸಿದ್ದ. ಆದರೆ ಆಕೆ ಮತ್ತೆ ನಿರಾಕರಿಸಿದಾಗ ಚೂರಿ ತೋರಿಸಿ ಕೊಲೆ ಮಾಡುವ ಬೆದರಿಕೆ ಹಾಕಿದ್ದ. ಜಗಳ ಕೇಳಿ ಪಕ್ಕದ ಮನೆಯಿಂದ ಬಂದ ಶ್ರೀಧರ್‌ ಬುದ್ಧಿವಾದ ಹೇಳಲು ಮುಂದಾಗಿದ್ದು, ಈ ವೇಳೆ ಇಬ್ಬರ ನಡುವೆ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ಹೋದಾಗ ಸುಜಾತ ಮತ್ತು ಶ್ರೀಧರ ಸೇರಿ ಎಡ್ವಿನ್‌ ಕೈಯಲ್ಲಿದ್ದ ಚೂರಿ ಕಿತ್ತುಕೊಂಡು ಅದರಲ್ಲೇ ಚುಚ್ಚಿ ಕೊಲೆ ಮಾಡಿದ್ದರು. ಅಕ್ಕ ಪಕ್ಕದವರಿಗೆ ತಕ್ಷಣ ಪೊಲೀಸರಿಗೆ ಮಾಹಿತಿ ರವಾನಿಸಿದ್ದರು. ಸ್ಥಳಕ್ಕೆ ಧಾವಿಸಿದ ಪೊಲೀಸರು ಆರೋಪಿಗಳನ್ನು ಸ್ಥಳದಲ್ಲೇ ವಶಕ್ಕೆ ಪಡೆದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ