ಆ್ಯಪ್ನಗರ

ಬಿಎಂಟಿಸಿ ನಿರ್ವಾಹಕನಿಂದ ಲೈಂಗಿಕ ದೌರ್ಜನ್ಯ: ಟ್ವೀಟ್‌ ಮಾಡಿದ ಸಂತ್ರಸ್ತೆ

ಬಿಎಂಟಿಸಿ ಬಸ್‌ ನಿರ್ವಾಹಕನಿಂದ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಖಾಸಗಿ ಕಂಪನಿ ಉದ್ಯೋಗಿ ಆಗಿರುವ ಮಹಿಳಾ ಪ್ರಯಾಣಿಕರೊಬ್ಬರು ನಗರ ಪೊಲೀಸ್‌ ಕಮಿಷನರ್‌ಗೆ ಟ್ವೀಟ್‌ ಮಾಡಿದ್ದು ಶಂಕಿತ ನಿರ್ವಾಹಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Vijaya Karnataka Web 13 Sep 2018, 11:46 am
ಬೆಂಗಳೂರು: ಬಿಎಂಟಿಸಿ ಬಸ್‌ ನಿರ್ವಾಹಕನಿಂದ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಖಾಸಗಿ ಕಂಪನಿ ಉದ್ಯೋಗಿ ಆಗಿರುವ ಮಹಿಳಾ ಪ್ರಯಾಣಿಕರೊಬ್ಬರು ನಗರ ಪೊಲೀಸ್‌ ಕಮಿಷನರ್‌ಗೆ ಟ್ವೀಟ್‌ ಮಾಡಿದ್ದು ಶಂಕಿತ ನಿರ್ವಾಹಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರೆ ಮಹಿಳೆ ಯಾರು ಎನ್ನುವುದು ಗೊತ್ತಿಲ್ಲದಿರುವುದರಿಂದ ತನಿಖೆ ಹೇಗೆ ಮುಂದುವರಿಸಬೇಕು ಎನ್ನುವ ಗೊಂದಲಕ್ಕೆ ಅಧಿಕಾರಿಗಳು ಸಿಲುಕಿದ್ದಾರೆ.
Vijaya Karnataka Web bus


ಮಂಗಳವಾರ ಸಂಜೆ 7 ಗಂಟೆ ಸುಮಾರಿಗೆ ಸಿಲ್ಕ್‌ಬೋರ್ಡ್‌ ಜಂಕ್ಷನ್‌ನಲ್ಲಿ ಬಸ್‌ ಹತ್ತಿದ್ದೆ ಎಂದು ಅನಾಮಧೇಯ ಖಾತೆಯಿಂದ ಟ್ವೀಟ್‌ ಮಾಡಿರುವ ಸಂತ್ರಸ್ತೆ ತಮ್ಮ ಮೇಲೆ ನಡೆದ ದೌರ್ಜನ್ಯವನ್ನು ವಿವರಿಸಿದ್ದಾರೆ.

‘‘ಬಸ್‌ ಹತ್ತಿದಾಗ ಮಹಿಳೆಯರಿಗೆ ನಿಗದಿ ಆಗಿದ್ದ ಸೀಟುಗಳು ಭರ್ತಿ ಆಗಿದ್ದವು. ನನಗೆ ಆರೋಗ್ಯ ಸರಿ ಇಲ್ಲದ ಕಾರಣದಿಂದ ಬಸ್ಸಿನ ಕೊನೆ ಸಾಲಿನಲ್ಲಿ ಖಾಲಿ ಇದ್ದ ಸೀಟ್‌ನಲ್ಲಿ ಕುಳಿತುಕೊಂಡೆ. ಮುಂದಿನ ನಿಲ್ದಾಣಗಳಲ್ಲಿ ಪ್ರಯಾಣಿಕರು ಹೆಚ್ಚಾಗಿ ಹತ್ತಿಕೊಂಡಿದ್ದರಿಂದ ಬಸ್‌ ಪೂರ್ತಿ ಭರ್ತಿಯಾಗಿತ್ತು. ಟಿಕೆಟ್‌ ನೀಡುತ್ತಾ ಬಂದ ನಿರ್ವಾಹಕ ನನ್ನ ಪಕ್ಕ ನಿಂತುಕೊಂಡು ಉಳಿದವರಿಗೆ ಟಿಕೆಟ್‌ ನೀಡುತ್ತಿದ್ದ. ಈ ವೇಳೆ ಆತ ಕಾಲನ್ನು ನನ್ನ ತೊಡೆಗಳಿಗೆ ಉಜ್ಜುತ್ತಿದ್ದ. ನನಗೆ ಏನು ಮಾಡಬೇಕೋ ತೋಚಲಿಲ್ಲ. ನನಗೆ ಗಲಾಟೆ ಮಾಡಲು ಧೈರ್ಯ ಬರಲಿಲ್ಲ. ನನ್ನ ಕುಟುಂಬ ನನ್ನ ಸಂಬಳವನ್ನೇ ಅವಲಂಬಿಸಿರುವುದರಿಂದ ಈ ವಿಷಯ ಮನೆಯಲ್ಲಿ ಗೊತ್ತಾದರೆ ಅವರು ಕೆಲಸಕ್ಕೆ ಹೋಗದಂತೆ ತಡೆಯಬಹುದು ಎಂದು ಯೋಚಿಸಿ ಸುಮ್ಮನಿದ್ದೆ’’ ಎಂದು ಟ್ವೀಟ್‌ ಮಾಡಿದ್ದಾರೆ.

ಮಹಿಳೆಯನ್ನು ಸಂಪರ್ಕಿಸುವ ಪ್ರಯತ್ನ ಮುಂದುವರಿಸಿದ್ದೇವೆ. ಅವರು ಬಂದು ಹೇಳಿಕೆ ನೀಡದ ಹೊರತು ತನಿಖೆ ಮುಂದುವರಿಸುವುದು ಕಷ್ಟ. ಅವರು ಆರೋಪಿಯನ್ನು ಗುರುತಿಸಿ ಹೇಳಿಕೆ ನೀಡಬೇಕು’’ ಎಂದು ಪೊಲೀಸರು ಮಾಹಿತಿ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ