ಆ್ಯಪ್ನಗರ

ಪಿಯುಸಿ ಕಲಿಯುವ ಮಗಳ ಮೇಳೆ ಲೈಂಗಿಕ ದೌರ್ಜನ್ಯ

ಪಿಯುಸಿ ಓದುತ್ತಿರುವ ಮಗಳಿಗೆ ಲೈಂಗಿಕ ದೌರ್ಜನ್ಯ ನೀಡಿದ ತಂದೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ಪರಾರಿಯಾಗಿದ್ದಾನೆ.

Vijaya Karnataka 27 Nov 2018, 5:00 am
ಬೆಂಗಳೂರು: ಪಿಯುಸಿ ಓದುತ್ತಿರುವ ಮಗಳಿಗೆ ಲೈಂಗಿಕ ದೌರ್ಜನ್ಯ ನೀಡಿದ ತಂದೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ಪರಾರಿಯಾಗಿದ್ದಾನೆ.
Vijaya Karnataka Web sexual harrasement


ಬಸವನಗುಡಿ ಮಹಿಳಾ ಠಾಣೆಯಲ್ಲಿ ಸಂತ್ರಸ್ತ ಬಾಲಕಿ ನೀಡಿದ ದೂರಿನ ಮೇರೆಗೆ ಎಫ್‌ಐಆರ್‌ ದಾಖಲಾಗಿದ್ದು, 55 ವರ್ಷದ ತಂದೆ ಮನೆಯಿಂದ ಕಾಲ್ಕಿತ್ತಿದ್ದಾನೆ.

ಎರಡು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದ್ದ ದೌರ್ಜನ್ಯ ನ.16 ರಂದು ಬೆಳಕಿಗೆ ಬಂದಿದೆ. ಬಾಲಕಿಯ ಚಿಕ್ಕಮ್ಮ, ಲೈಂಗಿಕ ದೌರ್ಜನ್ಯ ನಡೆಯುತ್ತಿದ್ದಾಗಲೇ ಮನೆಗೆ ನುಗ್ಗಿ ರೆಡ್‌ ಹ್ಯಾಂಡ್‌ ಆಗಿ ಆರೋಪಿಯನ್ನು ಹಿಡಿದಿದ್ದಾರೆ. ಈ ವೇಳೆ ಬಾಲಕಿಯ ತಾಯಿ ಮನೆಯಲ್ಲಿ ಇರಲಿಲ್ಲ. ಮನೆಗೆ ಬಂದ ತಾಯಿ ವಿಷಯ ತಿಳಿದು ಬಸವನಗುಡಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪತ್ನಿ ತನ್ನ ವಿರುದ್ಧ ದೂರು ದಾಖಲಿಸಲು ಠಾಣೆಗೆ ತೆರಳುತ್ತಿದ್ದಂತೆ ಮೊಬೈಲ್‌ ಆಫ್‌ ಮಾಡಿಕೊಂಡ ಆರೋಪಿ ನಾಪತ್ತೆಯಾಗಿದ್ದಾನೆ,.

ಹೈಸ್ಕೂಲ್‌ನಿಂದಲೇ ಶುರು ಮಾಡಿದ್ದ: ಆರೋಪಿ ತಂದೆ, ಮಗಳು ಹೈಸ್ಕೂಲ್‌ನಲ್ಲಿ ಇದ್ದಾಗಿನಿಂದಲೇ ದೌರ್ಜನ್ಯ ನೀಡಲು ಶುರು ಮಾಡಿದ್ದ. 9ನೇ ತರಗತಿಯಲ್ಲಿದ್ದಾಗಲೇ ಅನುಚಿತವಾಗಿ ವರ್ತಿಸಲು ಶುರು ಮಾಡಿದ್ದ. ವಿಷಯ ತಾಯಿಗೆ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಹೀಗಾಗಿ ಯಾರಿಗೂ ವಿಷಯ ಗೊತ್ತಾಗಿರಲಿಲ್ಲ. ಆದರೆ, ಪಿಯುಸಿಗೆ ಬಂದ ವೇಳೆ ಬಾಲಕಿ ವಿಷಯವನ್ನು ಚಿಕ್ಕಮ್ಮನ ಬಳಿ ಹೇಳಿಕೊಂಡಿದ್ದಳು.

ಆಘಾತಗೊಂಡ ಚಿಕ್ಕಮ್ಮ, ಅಮ್ಮ ಮನೆಯಲ್ಲಿ ಇಲ್ಲದಿದ್ದಾಗ ಹೇಳು. ನಾನು ಬಂದು ಮನೆ ಪಕ್ಕದಲ್ಲೇ ಇರುತ್ತೇನೆ. ದೌರ್ಜನ್ಯಕ್ಕೆ ಮುಂದಾದಾಗ ಜೋರಾಗಿ ಕಿರಿಚು. ನಾನು ರೆಡ್‌ ಹ್ಯಾಂಡಾಗಿ ಆತನನ್ನು ಹಿಡಿದುಕೊಳ್ಳುತ್ತೇನೆ ಎಂದು ಉಪಾಯ ಹೇಳಿದ್ದರು. ನ.16ರಂದು ತಾಯಿ, ಹಿರಿಯ ಮಗಳ ಹೆರಿಗೆಗೆಂದು ಆಸ್ಪತ್ರೆಗೆ ಹೋಗಿದ್ದ ಸಂದರ್ಭದಲ್ಲಿ ಆರೋಪಿ ಮತ್ತೆ ಮಗಳ ಮೇಲೆ ಕೃತ್ಯಎಸಗಲು ಮುಂದಾಗಿದ್ದ. ತಕ್ಷಣ ಮನೆಯೊಳಗೆ ಬಂದ ಚಿಕ್ಕಮ್ಮ, ಥಳಿಸಿ ಬಾಲಕಿಯನ್ನು ರಕ್ಷಿಸಿದ್ದಾಳೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ