ಆ್ಯಪ್ನಗರ

ಮೆಟ್ರೊ ನಿಲ್ದಾಣ ಪ್ರವೇಶಿಸಿ ಹೊರಹೋದ ವ್ಯಕ್ತಿ ರಾಜಸ್ಥಾನ ಮೂಲದವನು: ರವಿ ಚನ್ನಣ್ಣನವರ್

ಮೆಜೆಸ್ಟಿಕ್ ಮೆಟ್ರೊ ನಿಲ್ದಾಣ ಪ್ರವೇಶಿಸಿ ಹೊರಹೋದ ವ್ಯಕ್ತಿ ರಾಜಸ್ಥಾನ ಮೂಲದವನು. ಭಿಕ್ಷೆ ಬೇಡಲು ಮಾರ್ಚ್ ತಿಂಗಳಲ್ಲಿ ಬೆಂಗಳೂರಿಗೆ ಬಂದಿದ್ದ. ಆತನ ಬಳಿ ಒಂದಷ್ಟು ನಾಣ್ಯಗಳು ಇದ್ದವು. ಆತನ ಹೆಸರು ಸಾಜೀದ್ ಖಾನ್ (38) ಎಂದು ತಿಳಿದು ಬಂದಿದೆ.

Vijaya Karnataka Web 11 May 2019, 9:14 pm
ಬೆಂಗಳೂರು: ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದ ಪೂರ್ವ ದ್ವಾರದ ಮೂಲಕ ಪ್ರವೇಶಿಸಿದ ವ್ಯಕ್ತಿಯೊಬ್ಬ, ಮೆಟಲ್ ಡಿಟೆಕ್ಟರ್‌ನಲ್ಲಿ ತಪಾಸಣೆಗೆ ಒಳಪಟ್ಟ ಬಳಿಕ ಹೊರಗೆ ಹೋಗಿರುವ ಅನುಮಾನಾಸ್ಪದ ಘಟನೆಗೆ ಸಂಬಂಧಪಟ್ಟಂತೆ ಆ ವ್ಯಕ್ತಿಯ ಸುಳಿವು ಲಭ್ಯವಾಗಿದೆ.
Vijaya Karnataka Web terrorist in bangalore metro


ಮೆಜೆಸ್ಟಿಕ್ ಮೆಟ್ರೊ ನಿಲ್ದಾಣ ಪ್ರವೇಶಿಸಿ ಹೊರಹೋದ ವ್ಯಕ್ತಿ ರಾಜಸ್ಥಾನ ಮೂಲದವನು. ಭಿಕ್ಷೆ ಬೇಡಲು ಮಾರ್ಚ್ ತಿಂಗಳಲ್ಲಿ ಬೆಂಗಳೂರಿಗೆ ಬಂದಿದ್ದ. ಆತನ ಬಳಿ ಒಂದಷ್ಟು ನಾಣ್ಯಗಳು ಇದ್ದವು. ಆತನ ಹೆಸರು ಸಾಜೀದ್ ಖಾನ್ (38) ಎಂದು ತಿಳಿದು ಬಂದಿದೆ.

ಆರ್.ಟಿ ನಗರ ಮಸೀದಿ ಬಳಿ ಆತನನ್ನು ಡ್ರಾಪ್ ಮಾಡಿದ ಆಟೋ ಚಾಲಕ ನೀಡಿದ ಮಾಹಿತಿ ಆಧರಿಸಿ ಶಂಕಿತ ವ್ಯಕ್ತಿಯನ್ನು ಪತ್ತೆ ಹಚ್ಚಲಾಗಿದೆ. ಆತ ಬೆಂಗಳೂರು ನಗರದ ತವಕ್ಕಲ್ ಮಸ್ತಾನ್ ದರ್ಗಾ ಬಳಿಯ ಲಾಡ್ಜ್‌ನಲ್ಲಿ ಉಳಿದು ಕೊಂಡಿದ್ದ ಎಂದು ಬೆಂಗಳೂರು ಪಶ್ಚಿಮ ವಿಭಾಗ ಡಿಸಿಪಿ ರವಿ ಡಿ ಚನ್ನಣ್ಣನವರ್ ಮಾಹಿತಿ ನೀಡಿದ್ದಾರೆ.

ಸೋಮವಾರ (ಮೇ 6) ರಾತ್ರಿ 7.40ರ ಸುಮಾರಿಗೆ ಅಪರಿಚಿತ ವ್ಯಕ್ತಿಯೊಬ್ಬ ಪೂರ್ವ ದ್ವಾರದ ಮೂಲಕ ನಿಲ್ದಾಣಕ್ಕೆ ಪ್ರವೇಶಿಸಲು ಯತ್ನಿಸಿದ. ಮೆಟಲ್ ಡಿಟೆಕ್ಟರ್ ಪ್ರವೇಶಿಸಿದಾಗ ಸದ್ದು ಉಂಟಾಗಿದೆ. ನಂತರ ಹ್ಯಾಂಡ್ ಹೆಲ್ಡ್ ಮೆಟಲ್ ಡಿಟೆಕ್ಟರ್‌ನಲ್ಲಿ ಸದ್ದು ಉಂಟಾಗಿ ಅನುಮಾನ ಬಂದಿತ್ತು.

ನಂತರ ತಪಾಸಣೆ ನಡೆಸುತ್ತಿದ್ದ ಗಾರ್ಡ್ ಮಹೇಶ್ ಎಂಬುವರು ಏನು ಇದೆ ಎಂದು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಕುರ್ತಾವನ್ನು ಒಮ್ಮೆ ಎತ್ತುವ ವ್ಯಕ್ತಿ ಹಾಗೇ ಮಾತನಾಡಿಕೊಂಡು ನಿಲ್ದಾಣದ ಒಳಗೆ ಹೋಗುವ ಬದಲು ಹೊರಗೆ ಹೋಗುತ್ತಾನೆ. ಆದರೆ, ಆ ವ್ಯಕ್ತಿ ಹೊರಗೆ ಹೋಗಿದ್ದರಿಂದ ಅನುಮಾನಗೊಂಡ ಅಲ್ಲೇ ಇದ್ದ ಸೆಕ್ಯುರಿಟಿ ಮೇಲ್ವಿಚಾರಕ ಓಂ ಶ್ಯಾಮ್ ಎಂಬುವರು ಕೂಡಲೇ ಉಪ್ಪಾರಪೇಟೆ ಪೊಲೀಸರಿಗೆ ಮಾಹಿತಿ ನೀಡಿ, ಘಟನೆಯನ್ನು ವಿವರಿಸಿದ್ದರು.

ಬಳಿಕ ಈ ಸುದ್ದಿ ಬೆಂಗಳೂರನ್ನು ಬೆಚ್ಚಿ ಬೀಳಿಸಿತ್ತು. ಅಲ್ಲದೆ, ಬೆಂಗಳೂರು ಸೇರಿದಂತೆ ರಾಜ್ಯದ ಜನತೆಯಲ್ಲೂ ಗಾಬರಿ ಉಂಟು ಮಾಡಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ