ಆ್ಯಪ್ನಗರ

ಮನೆಗಳಲ್ಲಿ ಕಳವು: ನಾಲ್ವರ ಸೆರೆ

ಮನೆಗಳ ಬೀಗ ಮುರಿದು ಕಳ್ಳತನ ಮಾಡುತ್ತಿದ್ದ ನಾಲ್ವರು ಮನೆಗಳ್ಳರನ್ನು ಬಂಧಿಸಿರುವ ಉತ್ತರ ವಿಭಾಗದ ನಂದಿನಿ ಲೇಔಟ್‌ ಹಾಗೂ ಶ್ರೀರಾಮಪುರ ಪೊಲೀಸರು, 3.30 ಲಕ್ಷ ರೂ. ಮೌಲ್ಯದ ಆಭರಣ ಜಪ್ತಿ ಮಾಡಿದ್ದಾರೆ.

Vijaya Karnataka 23 Jan 2019, 5:00 am
ಬೆಂಗಳೂರು: ಮನೆಗಳ ಬೀಗ ಮುರಿದು ಕಳ್ಳತನ ಮಾಡುತ್ತಿದ್ದ ನಾಲ್ವರು ಮನೆಗಳ್ಳರನ್ನು ಬಂಧಿಸಿರುವ ಉತ್ತರ ವಿಭಾಗದ ನಂದಿನಿ ಲೇಔಟ್‌ ಹಾಗೂ ಶ್ರೀರಾಮಪುರ ಪೊಲೀಸರು, 3.30 ಲಕ್ಷ ರೂ. ಮೌಲ್ಯದ ಆಭರಣ ಜಪ್ತಿ ಮಾಡಿದ್ದಾರೆ.
Vijaya Karnataka Web THEFT1


ಹಾಸನದ ಡಿ.ಗಣೇಶ(39), ತುಮಕೂರು ಮೂಲದ ಕುಮಾರ್‌(30), ಕೆಂಗೇರಿಯ ರಿಯಾಜ್‌ ಹನೀಫ್‌(33) ಹಾಗೂ ನಂದಿನಿ ಲೇಔಟ್‌ನ ಅಲ್ತಾಫ್‌ ಸೈಯ್ಯಿದ್‌ ಅಬ್ದುಲ್ಲಾ(30) ಬಂಧಿತರು.

ಹೈದ್ರಾಬಾದ್‌ ಮೂಲದ ಅಲ್ತಾಫ್‌, ಮಾದಕ ವಸ್ತು ಗಾಂಜಾ ಸೇವನೆ ಚಟ ಹೊಂದಿದ್ದು, ನಗರದಲ್ಲಿ ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ಬಾಗಿಲು ಬೀಗ ಮುರಿದು ಒಳ ಪ್ರವೇಶಿಸಿ ಚಿನ್ನಾಭರಣ ದೋಚುತ್ತಿದ್ದ. ಬಂದ ಹಣದಲ್ಲಿ ಗಾಂಜಾ ಸೇದುತ್ತಿದ್ದ. ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಈತನನ್ನು ಇತ್ತೀಚೆಗೆ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ 5 ಕನ್ನ ಕಳವು ಪ್ರಕರಣಗಳು ಪತ್ತೆಯಾಗಿವೆ. 42 ಗ್ರಾಂ ಚಿನ್ನಾಭರಣ ಮತ್ತು ಒಂದು ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ ಎಂದು ನಂದಿನಿ ಲೇಔಟ್‌ ಪೊಲೀಸರು ತಿಳಿಸಿದರು.

ಶ್ರೀರಾಮಪುರ: ಮೋಜಿನ ಜೀವನಕ್ಕಾಗಿ ಮನೆಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿರುವ ಶ್ರೀರಾಮಪುರ ಪೊಲೀಸರು 1.80 ಲಕ್ಷ ರೂ. ಮೌಲ್ಯದ 60 ಗ್ರಾಂ ಆಭರಣ ಜಪ್ತಿ ಮಾಡಿದ್ದಾರೆ.

ಮೆಜೆಸ್ಟಿಕ್‌ನ ಲಾಡ್ಜ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ರಿಯಾಜ್‌ನನ್ನು ಬಂಧಿಸಿ ಆತನ ನೀಡಿದ ಮಾಹಿತಿ ಆಧರಿಸಿ ಗಣೇಶ್‌ ಮತ್ತು ಕುಮಾರ್‌ ಎಂಬುವರನ್ನು ಬಂಧಿಸಲಾಗಿದೆ.

ನ.6ರಂದು ಜಕ್ಕರಾಯನಕೆರೆಯ ಆರ್ಮುಗಮ್‌ ಎಂಬುವರು ತಮ್ಮ ಮನೆಗೆ ಬೀಗ ಹಾಕಿ ತಮಿಳುನಾಡಿಗೆ ತೆರಳಿದ್ದರು. ಆ ಸಂದರ್ಭದಲ್ಲಿ ಮನೆಗೆ ನುಗ್ಗಿ ಚಿನ್ನಾಭರಣ ಕಳ್ಳತನ ಮಾಡಿದ್ದರು. ಬಂಧಿತರು ಈ ಹಿಂದೆಯು ಶ್ರೀರಾಮಪುರ ಮತ್ತು ಶೇಷಾದ್ರಿಪುರದಲ್ಲಿ ಮನೆಕಳ್ಳತನ ಕೇಸ್‌ನಲ್ಲಿ ಜೈಲಿಗೆ ಹೋಗಿ, ಬಿಡುಗಡೆಯಾಗಿ ಬಂದ ಬಳಿಕ ಮತ್ತೆ ಅದೇ ಕೆಲಸ ಮುಂದುವರಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ