ಆ್ಯಪ್ನಗರ

ಚಿಪ್ಪು ಹಂದಿ ಮಾರಾಟಕ್ಕೆ ಯತ್ನ, ಇಬ್ಬರ ಬಂಧನ

Vijaya Karnataka 15 Aug 2019, 5:00 am
ಬೆಂಗಳೂರು : ಅಳಿವಿನಂಚಿನಲ್ಲಿರುವ ಚಿಪ್ಪು ಹಂದಿ ಮಾರಾಟಕ್ಕೆ ಯತ್ನಿಸಿಧಿದ ಇಬ್ಬರನ್ನು ಮಹಾಲಕ್ಷ್ಮೇ ಲೇಔಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.
Vijaya Karnataka Web two arrest
ಚಿಪ್ಪು ಹಂದಿ ಮಾರಾಟಕ್ಕೆ ಯತ್ನ, ಇಬ್ಬರ ಬಂಧನ


ಬನ್ನೇರುಘಟ್ಟ ನಿವಾಸಿ ಮುನಿವೆಂಕಟಪ್ಪ (45) ಹಾಗೂ ಗೌತಮ್‌(31) ಬಂಧಿತರು. ಇವರಿಂದ ಒಂದು ಜೀವಂತ ಚಿಪ್ಪು ಹಂದಿ ಹಾಗೂ ಚಿಪ್ಪುಗಳನ್ನು ವಶಪಡಿಸಿಕೊಳ್ಳಲಾಗಿದೆ. ಚಿಪ್ಪು ಹಂದಿಯನ್ನು ಬನ್ನೇರುಘಟ್ಟ ಅರಣ್ಯಾಧಿಕಾರಿಗಳ ವಶಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿಧಿದ್ದಾಧಿರೆ.

ಮಂಗಳವಾರ ಮಹಾಲಕ್ಷ್ಮೇ ಲೇಔಟ್‌ನ ಕಮಲಮ್ಮನಗುಂಡಿ ಆಟದ ಮೈದಾನದ ಬಳಿ ಕೆಲ ವ್ಯಕ್ತಿಗಳು ಪ್ರಾಣಿಗಳನ್ನು ಮಾರಾಟಕ್ಕೆ ಯತ್ನಿಸುತ್ತಿದ್ದಾರೆಂಬ ಮಾಹಿತಿ ಮೇಧಿರೆಧಿಗೆ ಸ್ಥಳಕ್ಕೆ ತೆರಳಿದ ಪೊಲೀಸರು, ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

'ಧಿ'ಆರೋಪಿಗಳಿಬ್ಬರು ರಿಯಲ್‌ ಎಸ್ಟೇಟ್‌ ವ್ಯವಹಾರದ ಜಧಿತೆಧಿಗೆ, ಕೈಮಗ್ಗದ ಕೆಲಸವಧಿನ್ನೂ ಮಾಡುತ್ತಿದ್ದಾರೆ. ಚಿಂತಾಮಣಿ ಮೂಲದ ವ್ಯಕ್ತಿಯೊಬ್ಬ ತಂದು ಕೊಟ್ಟಿದ್ದಾನೆ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಬೇಕಾಗಿದೆ'ಧಿ' ಎಂದು ಪೊಧಿಲೀಸ್‌ ಅಧಿಧಿಧಿಕಾಧಿರಿಧಿಯೊಧಿಬ್ಬರು ತಿಧಿಳಿಧಿಸಿಧಿದರು.

'ಧಿ'ಧಿಎರಡು ವರ್ಷಗಳ ಹಿಂದಿನ ಮಾಹಿತಿ ಪ್ರಕಾರ, ಬನ್ನೇರುಘಟ್ಟ ಅರಣ್ಯದಲ್ಲೂ ಚಿಪ್ಪು ಹಂದಿಗಳು ಇಲ್ಲ ಎಂದು ಅರಣ್ಯ ಅಧಿಕಾರಿಗಳು ಮೌಖಿಕವಾಗಿ ತಿಳಿಸಿದ್ದಾರೆ. ಹೀಗಾಗಿ, ತೀವ್ರ ಅಳಿವಿನ ಅಂಚಿನಲ್ಲಿರುವ ಹಂದಿಯನ್ನು ಎಲ್ಲಿಂದ ಕಳ್ಳಸಾಗಣೆ ಮಾಡಲಾಗಿದೆ ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ. ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣೆ ಕಾಯ್ದೆ ಅಡಿ ಕೇಸ್‌ ದಾಖಲಿಸಲಾಗಿದೆ'ಧಿ' ಎಂದು ಪೊಲೀಸರು ತಿಳಿಸಿದರು.

ಬುಲೆಟ್‌ ಪ್ರೂಪ್‌ ಜಾಕೆಟ್‌ ತಯಾರಿಸಲು : ಚಿಪ್ಪು ಹಂದಿಯ ಚಿಪ್ಪು ಅತ್ಯಂತ ಬಲಿಷ್ಠವಾಗಿರುತ್ತವೆ. ಹೀಗಾಗಿ, ಅವುಗಳನ್ನು ಬುಲೆಟ್‌ ಪ್ರೂಫ್‌ ಜಾಕೆಟ್‌, ಬೂಟು ತಯಾರಿಸಲು, ಜಾಕೆಟ್‌ಗಳ ಮೇಲೆ ಅಲಂಕಾರ ಸೇರಿದಂತೆ ಇನ್ನಿತರ ಉದ್ದೇಶಗಳಿಗೆ ಬಳಸಲಾಗುತ್ತದೆ ಎಂದು ಪೊಲೀಸರು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ