ಆ್ಯಪ್ನಗರ

ಕಾರಿನಲ್ಲಿ ಕರೆದೊಯ್ದು ಮಹಿಳೆಯ ಸರ ಕಿತ್ತರು!

ಡ್ರಾಪ್‌ ಕೊಡುವ ನೆಪದಲ್ಲಿ ಮಹಿಳೆಯೊಬ್ಬರನ್ನು ಕಾರಿನಲ್ಲಿ ಕೂರಿಸಿಕೊಂಡು ಅವರ ಕೊರಳಿನಲ್ಲಿದ್ದ ಚಿನ್ನದ ಸರ ಕಿತ್ತುಕೊಂಡು ಪರಾರಿ ಆದ ಘಟನೆ ಜ್ಞಾನಭಾರತಿ ಪೊಲೀಸ್‌ ಠಾಣೆ ವ್ಯಾಪ್ತಿಯ ಅಮ್ಮ ಆಶ್ರಮದ ಬಳಿ ನಡೆದಿದೆ.

Vijaya Karnataka 11 Oct 2017, 9:30 am

ಬೆಂಗಳೂರು: ಡ್ರಾಪ್‌ ಕೊಡುವ ನೆಪದಲ್ಲಿ ಮಹಿಳೆಯೊಬ್ಬರನ್ನು ಕಾರಿನಲ್ಲಿ ಕೂರಿಸಿಕೊಂಡು ಅವರ ಕೊರಳಿನಲ್ಲಿದ್ದ ಚಿನ್ನದ ಸರ ಕಿತ್ತುಕೊಂಡು ಪರಾರಿ ಆದ ಘಟನೆ ಜ್ಞಾನಭಾರತಿ ಪೊಲೀಸ್‌ ಠಾಣೆ ವ್ಯಾಪ್ತಿಯ ಅಮ್ಮ ಆಶ್ರಮದ ಬಳಿ ನಡೆದಿದೆ.

ಸ್ಥಳೀಯ ನಿವಾಸಿ ತುಳಸಮ್ಮ ಸರ ಕಳೆದುಕೊಂಡವರು. ಮಂಗಳವಾರ ಬೆಳಗ್ಗೆ ತುಳಸಮ್ಮ ಅವರು ದೇವಸ್ಥಾನದಿಂದ ಮನೆಗೆ ಮರಳುತ್ತಿದ್ದಾಗ ಕಾರಿನಲ್ಲಿ ಹಿಂಬಾಲಿಸಿ ಬಂದ ಇಬ್ಬರು ಅವರ ಹೆಸರು ಹಿಡಿದು ಕರೆದಿದ್ದರು. ''ನಾವೂ ನಿಮ್ಮ ಮನೆಯ ರಸ್ತೆಯಲ್ಲೇ ಇರೋದು. ನಿತ್ಯ ನಾವೂ ದೇವಸ್ಥಾನಕ್ಕೆ ಬರುತ್ತೀವಿ. ಮನೆಗೆ ಡ್ರಾಪ್‌ ಮಾಡ್ತೀವಿ'' ಎಂದು ಕರೆದಿದ್ದರು. ಕಾರಿನಲ್ಲಿದ್ದವರ ಮಾತಿನ ಶೈಲಿ ಗಮನಿಸಿ ನಂಬಿದ ಅವರು ಕಾರಿನಲ್ಲಿ ಕುಳಿತಿದ್ದರು. ವಿದ್ಯಾನಿಕೇತನ ಶಾಲೆ ಬಳಿ ತುಳಸಮ್ಮ ಕಾರಿನಿಂದ ಇಳಿದುಕೊಂಡು ಹೋಗುತ್ತಿದ್ದಂತೆ ಅವರ ಕೊರಳಿನಲ್ಲಿದ್ದ 60 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತುಕೊಂಡು ಕಳ್ಳರು ಪರಾರಿ ಆಗಿದ್ದಾರೆ ಎಂದು ಪೊಲೀಸರು ತಿಳಿಸಿದರು. ಜ್ಞಾನಭಾರತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ