ಆ್ಯಪ್ನಗರ

ಸಿಗರೇಟ್‌ ತಂದುಕೊಡಲು ನಿರಾಕರಿಸಿದ್ದಕ್ಕೆ ಹಲ್ಲೆ

ಸಿಗರೇಟ್‌ ತಂದು ಕೊಡಲು ನಿರಾಕರಿಸಿದ ಯುವಕನ ಮೇಲೆ ಹಲ್ಲೆ ನಡೆಸಿದ ಮೂವರು ಕುಡುಕರನ್ನು ಚಿಕ್ಕಜಾಲ ಠಾಣೆ ಪೊಲೀಸರು ಬಂಧಿಸಿದ್ದಾರೆ.

Vijaya Karnataka 1 May 2019, 5:00 am
ಬೆಂಗಳೂರು: ಸಿಗರೇಟ್‌ ತಂದು ಕೊಡಲು ನಿರಾಕರಿಸಿದ ಯುವಕನ ಮೇಲೆ ಹಲ್ಲೆ ನಡೆಸಿದ ಮೂವರು ಕುಡುಕರನ್ನು ಚಿಕ್ಕಜಾಲ ಠಾಣೆ ಪೊಲೀಸರು ಬಂಧಿಸಿದ್ದಾರೆ.
Vijaya Karnataka Web youth thrashed by group arrest
ಸಿಗರೇಟ್‌ ತಂದುಕೊಡಲು ನಿರಾಕರಿಸಿದ್ದಕ್ಕೆ ಹಲ್ಲೆ


ಚಿಕ್ಕಜಾಲದ ವಿಐಟಿ ಕ್ರಾಸ್‌ ಡಾಬಾದಲ್ಲಿ ಘಟನೆ ನಡೆದಿದ್ದು ಸೊಣ್ಣಪ್ಪನ ಹಳ್ಳಿ ನಿವಾಸಿಗಳು ಹಾಗೂ ಲಾರಿ ಚಾಲಕರುಗಳಾದ ರಾಜು, ಮಹೇಶ ಮತ್ತು ದಾಮೋದರ ಬಂಧಿತರು. ತಲೆ ಮರೆಸಿಕೊಂಡಿರುವ ಇನ್ನೂ ಮೂವರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಆರೋಪಿಗಳೆಲ್ಲರೂ ಡಾಬಾದಲ್ಲಿ ಮದ್ಯ ಸೇವಿಸಿ ಊಟಕ್ಕಾಗಿ ಕುಳಿತಿದ್ದರು. ಈ ವೇಳೆ ಊಟ ಪಾರ್ಸೆಲ್‌ ತೆಗೆದುಕೊಂಡು ಹೋಗಲು ಯುವಕನೊಬ್ಬ ಅಲ್ಲಿಗೆ ಬಂದಿದ್ದ. ಈ ವೇಳೆ ದಾಮೋದರ ಸಿಗರೇಟ್‌ ತಂದುಕೊಡುವಂತೆ ಯುವಕನಿಗೆ ಹೇಳಿದ್ದ. ಅದಕ್ಕೆ ಆತ ನಿರಾಕರಿಸಿದ್ದು, ಈ ವಿಚಾರದಲ್ಲಿ ಪರಸ್ಪರ ಮಾತು ಬೆಳೆದಿದೆ. ಕುಪಿತಗೊಂಡ ಆರೋಪಿಗಳು ಡಾಬಾದಲ್ಲಿದ್ದ ಕುರ್ಚಿ ಹಾಗೂ ಕಬ್ಬಿಣದ ರಾಡ್‌ನಿಂದ ಯುವಕನಿಗೆ ಹಲ್ಲೆ ನಡೆಸಿದ್ದಾರೆ. ತಕ್ಷಣ ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಅವರನ್ನು ಬಂಧಿಸಿದ್ದಾರೆ.

ಹಲ್ಲೆಯ ದೃಶ್ಯಗಳು ಡಾಬಾದ ಸಿಸಿಟಿವಿಯಲ್ಲಿ ದಾಖಲಾಗಿದ್ದು ಅದರ ಆಧಾರದಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳಿಗೆ ಬಲೆ ಬೀಸಲಾಗಿದೆ. ಹಲ್ಲೆಗೊಳಗಾದ ಯುವಕ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದು, ಚಿಕ್ಕಜಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ