ಆ್ಯಪ್ನಗರ

ಹಿಂದುಳಿದವರ ಅಭಿವೃದ್ಧಿಗೆ ಸರಕಾರ ಆದ್ಯತೆ

ಪ.ಜಾತಿ ಪ.ಪಂಗಡ ಹಾಗೂ ಹಿಂದುಳಿದವರಿಗೆ ಅನೇಕ ಜನಪರ ಯೋಜನೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನರವರು ಜಾರಿಗೆ ತಂದಿದ್ದು, ಅರ್ಹ ಫಲಾನುಭವಿಗಳು ಸದುಪಯೋಗ ಪಡೆದುಕೊಳ್ಳಬೇಕೆಂದು ಜಿಪಂ ಸದಸ್ಯ ಎಚ್‌.ಬಿ.ಪರಶುರಾಮಪ್ಪ ಹೇಳಿದರು.

ವಿಕ ಸುದ್ದಿಲೋಕ 15 Aug 2016, 2:07 pm
ಹರಪನಹಳ್ಳಿ:ಪ.ಜಾತಿ ಪ.ಪಂಗಡ ಹಾಗೂ ಹಿಂದುಳಿದವರಿಗೆ ಅನೇಕ ಜನಪರ ಯೋಜನೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನರವರು ಜಾರಿಗೆ ತಂದಿದ್ದು, ಅರ್ಹ ಫಲಾನುಭವಿಗಳು ಸದುಪಯೋಗ ಪಡೆದುಕೊಳ್ಳಬೇಕೆಂದು ಜಿಪಂ ಸದಸ್ಯ ಎಚ್‌.ಬಿ.ಪರಶುರಾಮಪ್ಪ ಹೇಳಿದರು.
Vijaya Karnataka Web
ಹಿಂದುಳಿದವರ ಅಭಿವೃದ್ಧಿಗೆ ಸರಕಾರ ಆದ್ಯತೆ


ನೀಲಗುಂದ ಗ್ರಾಮದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅರ್ಹ ಫಲಾನುಭವಿಗಳಿಗೆ ಹೊಲಿಗೆ ಯಂತ್ರ, ನಾನಾ ಉಪಕರಣ ವಿತರಿಸಿ ಮಾತನಾಡಿದರು.

ಪರಿಶಿಷ್ಟ ಜಾತಿಯವರು ಸಾಮಾಜಿಕ,ಅರ್ಥಿಕ ರಾಜಕೀಯವಾಗಿ ಮುಂದೆ ಬರಬೇಕು ಎಂದು ಹೇಳಿದರು. ಡಾ. ಬಾಬು ಜಗಜೀವನರಾಂ ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮದಿಂದ(ಲಿಡಕರ್‌) ಚಪ್ಪಲಿ ಮತ್ತು ಶೂ ಕೈಕಸುಬಿನ ಬಗ್ಗೆ ನವೆಂಬರ್‌, ಡಿಸೆಂಬರ್‌ನಲ್ಲಿ ತರಬೇತಿ ಆಯೋಜಿಸಲಾಗಿತ್ತು ಎಂದು ತಿಳಿಸಿದರು.

ತಾಪಂ ಇಒ ಬಿ.ರೇವಣ್ಣ ಮಾತನಾಡಿ, ಡಾ.ಬಿ.ಆರ್‌. ಅಂಬೇಡ್ಕರ್‌ ಮತ್ತು ಬಾಬು ಜಗಜೀವನರಾಂ ಸಮಾಜದ ಎರಡು ಕಣ್ಣುಗಳು ಇದ್ದಂತೆ, ಡಾ.ಅಂಬೇಡ್ಕರ್‌ರು ಸಂವಿಧಾನ ರಚಿಸಿದರೇ, ಹಿಂದುಳಿದವರ ಅಭಿವೃದ್ಧಿಗೆ ಬಾಬು ಜಗಜೀವನರಾಂ ನಾನಾ ಯೋಜನೆ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪರಿಶಿಷ್ಟ ಜಾತಿಯವರಲ್ಲಿ ಶಿಕ್ಷ ಣದ ಕೊರತೆ ಇದೆ. ಪ್ರತಿಯೊಬ್ಬರು ಶಿಕ್ಷ ಣವಂತರಾಗಿ, ಸ್ವಾವಲಂಬಿ ಜೀವನ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.

ಹಳ್ಳಿಗಳಲ್ಲಿ ಪ್ರತಿ ಮನೆಗೆ ಶೌಚಾಲಯ ನಿರ್ಮಿಸಿಕೊಳ್ಳುವದರೊಂದಿಗೆ ಬಹಿರ್ದೆಸೆ ತಡೆಯಬೇಕು ಎಂದರು.

ತಾಪಂ ಸದಸ್ಯ ಹುಲಿಕಟ್ಟಿ ಚಂದ್ರಪ್ಪ , ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಉಪ ನಿರ್ದೇಶಕ ಎಚ್‌.ಡಿ.ಕುಮಾರ್‌ ಹನುಮಂತಪ್ಪ, ಉಪನ್ಯಾಸಕ ಮಂಜುನಾಥ ಮಾಳಿಗಿ ಮಾತನಾಡಿದರು.

ಗ್ರಾಪಂ ಅಧ್ಯಕ್ಷೆ ಲೀಲಾವತಿ ಅಂಜಿನಪ್ಪ ಅವರು ಅಧ್ಯಕ್ಷ ತೆ ವಹಿಸಿದ್ದರು. ಪ್ರಾಣೇಶ್‌, ಲಕ್ಷ್ಮೀಕಾಂತ್‌, ಶಿವಕುಮಾರ್‌, ಅಶೋಕ್‌, ಮಾಳಿಗಿ ಉಚ್ಚಪ್ಪ, ಪಿಡಿಒ ದೇವೆಂದ್ರ ನಾಯ್ಕ ಅಂಬೇಡ್ಕರ್‌ ಸಂಘದ ಅಧ್ಯಕ್ಷ ರ ನಿಚ್ಚವನಹಳ್ಳಿ ಭೀಮಪ್ಪರವರು, ಭೋವಿ ತಿರುಪತಿ, ಮಾಳಿಗಿ ಸಣ್ಣಪ್ಪ ರೇಖಾ ಸಿದ್ದಪ್ಪ ಡಿ.ಮಹೇಶ, ಎಂ. ಪ್ರವೀಣ ಮತ್ತು ಹನುಮಂತಪ್ಪ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ