ಆ್ಯಪ್ನಗರ

ಗಡು ಇದ್ದೂ ಪಾಲನೆ ಆಗದ ನೋಟ್‌

ಹಳೆಯ ಕರೆನ್ಸಿ ಬಳಕೆಯನ್ನು ಕೇಂದ್ರ ಸರಕಾರ ನ.14ರವರೆಗೆ ವಿಸ್ತರಣೆ ಮಾಡಿದ್ದರೂ ಅದು ನಗರದಲ್ಲಿ ತುರ್ತು ಸೇವೆಗಳ ಕಡೆ ಪಾಲನೆ ಆಗುತ್ತಿಲ್ಲ ಎಂದು ಜನತೆ ದೂರಿದ್ದಾರೆ.

ವಿಕ ಸುದ್ದಿಲೋಕ 13 Nov 2016, 2:17 pm
ದಾವಣಗೆರೆ: ಹಳೆಯ ಕರೆನ್ಸಿ ಬಳಕೆಯನ್ನು ಕೇಂದ್ರ ಸರಕಾರ ನ.14ರವರೆಗೆ ವಿಸ್ತರಣೆ ಮಾಡಿದ್ದರೂ ಅದು ನಗರದಲ್ಲಿ ತುರ್ತು ಸೇವೆಗಳ ಕಡೆ ಪಾಲನೆ ಆಗುತ್ತಿಲ್ಲ ಎಂದು ಜನತೆ ದೂರಿದ್ದಾರೆ.
Vijaya Karnataka Web
ಗಡು ಇದ್ದೂ ಪಾಲನೆ ಆಗದ ನೋಟ್‌


ಶನಿವಾರವೂ ಬ್ಯಾಂಕ್‌ಗಳ ಮುಂದೆ ಡೆಪಾಸಿಟ್‌ ಹಾಗೂ ಹಣ ವಿನಿಮಯಕ್ಕೆ ಜನತೆ ಮುಗಿಬಿದ್ದರು, ಎಟಿಎಂಗಳ ಬಳಿಯೂ ಜನ ಜಂಗುಳಿ ಕಂಡು ಬಂತು.

ತುರ್ತು ಸೇವೆಗಳಲ್ಲಿ ಹಳೆಯ ನೋಟುಗಳನ್ನೇ ಸದ್ಯಕ್ಕೆ ಬಳಸಲು ಸರಕಾರ ಆದೇಶಿಸಿದೆ. ಆದರೆ ನಗರದ ಕೆಲ ಮೆಡಿಕಲ್‌ ಶಾಪ್‌, ಆಸ್ಪತ್ರೆಗಳಲ್ಲಿ ಪಡೆಯಲು ಹಿಂದೇಟು ಹಾಕಿದರು. ಒಂದೆಡೆ ಹೊಸ ಕರೆನ್ಸಿ ಸಿಗದೆ ಇರುವುದು, ಇನ್ನೊಂದೆಡೆ ಹಳೆ ನೋಟು ಚಲಾವಣೆ ಆಗದೆ 500, 1000 ನೋಟು ಉಳ್ಳವರು ಸಮಸ್ಯೆ ಎದುರಿಸಿದರು.

ಕೇಂದ್ರ ಸರಕಾರ ವಿದ್ಯುತ್‌ ಬಿಲ್‌, ನೀರಿನಬಿಲ್‌, ತೆರಿಗೆ ಪಾವತಿ ಕೇಂದ್ರ, ಪೆಟ್ರೋಲ್‌ಬಂಕ್‌, ಎಲ್‌ಪಿಜಿ ಗ್ಯಾಸ್‌ ಏಜೆನ್ಸಿ, ಆಸ್ಪತ್ರೆ, ರೈಲ್ವೆ ಟಿಕೆಟ್‌ ಕೌಂಟರ್‌, ಮೆಟ್ರೋರೈಲು, ಸಾರಿಗೆ, ವಿಮಾನ ಟೆಕೆಟ್‌, ಹಾಲಿನಬೂತ್‌, ಚಿತಾಗಾರ, ಮೆಡಿಕಲ್‌ ಶಾಪ್‌ಗಳಲ್ಲಿ ನ. 14 ರವರೆಗೆ ಹಳೆಯ ನೋಟುಗಳನ್ನು ಬಳಸಲು ಸೂಚಿಸಿದೆ.

ನೂಕುನುಗ್ಗಲು...

ದಿನೇ ದಿನೆ ಬ್ಯಾಂಕ್‌ಗಳ ಮುಂದೆ ಕ್ಯೂ ಬೆಳೆಯುತ್ತಿದೆ. ಕೆಲ ಎಟಿಎಂಗಳಲ್ಲಿ ಹಣ ಲೋಡ್‌ ಮಾಡಿದ್ದರೂ ಕೇವಲ 100 ರ ನೋಟಾಗಿದ್ದರಿಂದ ಕ್ಯಾಷ್‌ ಬೇಗ ಖಾಲಿಯಾಯಿತು. ನೇರ ವಿನಿಮಯಕ್ಕೆ ಜನತೆ ಮುಗಿ ಬಿದ್ದ ಕಾರಣ ಅವರಿಗೇ ಹಣ ಒದಗಿಸಲು ಆಗುತ್ತಿಲ್ಲ, ಇನ್ನು ಎಟಿಎಂಗೆ ಹಾಕಲು ಕ್ಯಾಷ್‌ ಇಲ್ಲ ಎಂದು ಬ್ಯಾಂಕ್‌ ಅಧಿಕಾರಿಗಳು ತಿಳಿಸಿದರು.

-

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ