ಆ್ಯಪ್ನಗರ

ಜಾತಿ ಜನಗಣತಿ ವರದಿಗೆ ಆಗ್ರಹಿಸಿ ನಾಳೆ ಪ್ರತಿಭಟನೆ

ಜಾತಿ ಜನಗಣತಿ ಸಮೀಕ್ಷಾ ವರದಿಯನ್ನು ಸರಕಾರ ಶೀಘ್ರ ಅಧಿಕೃತವಾಗಿ ಪ್ರಕಟಿಸಬೇಕೆಂದು ಆಗ್ರಹಿಸಿ ಜೂ.19ರಂದು ಬೆಳಗ್ಗೆ 11ಕ್ಕೆ ದಾವಣಗೆರೆಯ ಅಂಬೇಡ್ಕರ್‌ ಸರ್ಕಲ್‌ನಲ್ಲಿ ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಜಾತಿ ಜನಗಣತಿ ಸಮೀಕ್ಷಾ ವರದಿ ಜಾರಿ ಹೋರಾಟ ಕ್ರಿಯಾ ಸಮಿತಿ ಅಧ್ಯಕ್ಷ ಬಿ.ಎಂ. ಸತೀಶ್‌ ತಿಳಿಸಿದ್ದಾರೆ.

ವಿಕ ಸುದ್ದಿಲೋಕ 18 Jun 2017, 8:55 pm
ಹೊನ್ನಾಳಿ: ಜಾತಿ ಜನಗಣತಿ ಸಮೀಕ್ಷಾ ವರದಿಯನ್ನು ಸರಕಾರ ಶೀಘ್ರ ಅಧಿಕೃತವಾಗಿ ಪ್ರಕಟಿಸಬೇಕೆಂದು ಆಗ್ರಹಿಸಿ ಜೂ.19ರಂದು ಬೆಳಗ್ಗೆ 11ಕ್ಕೆ ದಾವಣಗೆರೆಯ ಅಂಬೇಡ್ಕರ್‌ ಸರ್ಕಲ್‌ನಲ್ಲಿ ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಜಾತಿ ಜನಗಣತಿ ಸಮೀಕ್ಷಾ ವರದಿ ಜಾರಿ ಹೋರಾಟ ಕ್ರಿಯಾ ಸಮಿತಿ ಅಧ್ಯಕ್ಷ ಬಿ.ಎಂ. ಸತೀಶ್‌ ತಿಳಿಸಿದ್ದಾರೆ.
Vijaya Karnataka Web
ಜಾತಿ ಜನಗಣತಿ ವರದಿಗೆ ಆಗ್ರಹಿಸಿ ನಾಳೆ ಪ್ರತಿಭಟನೆ


ಶನಿವಾರ ಪಟ್ಟಣದಲ್ಲಿ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಜಾತಿ ಜನಗಣತಿ ಸಮೀಕ್ಷಾ ವರದಿ ಬಹಿರಂಗದಿಂದ ತೊಂದರೆಯಾಗುತ್ತದೆ. ಸಮಾಜದ ಕೆಲವು ಮುಂದುವರಿದ ಜಾತಿಗಳ ಮುಖಂಡರು ಭೀತಿಗೊಂಡಿದ್ದಾರೆ. ಈ ಕಾರಣಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಮೇಲೆ ಒತ್ತಡ ಹೇರಿ ವರದಿ ಪ್ರಕಟವಾಗುವುದನ್ನು ಮುಂದೂಡುತ್ತಿದ್ದಾರೆ ಎಂದು ಆರೋಪಿಸಿದರು.

ಜಾತಿ ಜನಗಣತಿ ಸಮೀಕ್ಷಾ ವರದಿ ವೀರಶೈವರ ಬಲವನ್ನು ಕುಗ್ಗಿಸುವ ಕುತಂತ್ರ ಎಂದು ಕೆಲ ಸ್ವಾಮೀಜಿ ಹೇಳಿದ್ದಾರೆ. ಈ ವರದಿ ಅವೈಜ್ಞಾನಿಕ ಎಂದು ಕೆಲ ಮುಖಂಡರು ಹೇಳಿದ್ದಾರೆ. ಈ ಯಾವ ಆರೋಪಗಳು ಸತ್ಯವಲ್ಲ, ಜಾತಿ ಜನಗಣತಿ ಸಮೀಕ್ಷಾ ವರದಿಯಿಂದ ಎಲ್ಲ ವರ್ಗಗಳ ಜನರಿಗೂ ಒಳಿತಾಗುತ್ತದೆ. ಜೂನ್‌ 19ರಂದು ನಡೆಯುವ ಪ್ರತಿಭಟನೆಯಲ್ಲಿ ತಾಲೂಕಿನಿಂದ ಹೆಚ್ಚು ಜನರು ಪಾಲ್ಗೊಳ್ಳಬೇಕು ಎಂದು ವಿನಂತಿಸಿದರು.

ಸಮಿತಿಯ ಗೌರವಾಧ್ಯಕ್ಷ ಕೆಂಗೋ ಹನುಮಂತಪ್ಪ ಮಾತನಾಡಿ,ಸಿದ್ಧರಾಮಯ್ಯ ಅವರು 600 ಕೋಟಿ ರೂ. ಖರ್ಚು ಮಾಡಿ ಜಾತಿ ಜನಗಣತಿ ಸಮೀಕ್ಷಾ ವರದಿ ತಯಾರಿಸಿದ್ದಾರೆ. ಜನಸಂಖ್ಯೆಗೆ ಅನುಗುಣವಾಗಿ ಎಲ್ಲರಿಗೂ ಸರಕಾರದ ಸೌಲಭ್ಯಗಳು ದೊರಕಬೇಕು ಎಂಬುದು ಈ ವರದಿ ಉದ್ದೇಶ. ಆದ್ದರಿಂದ, ಸರಕಾರ ಯಾವುದೇ ಬೆದರಿಕೆಗೆ ಜಗ್ಗದೇ ವರದಿ ಬಹಿರಂಗಗೊಳಿಸಬೇಕು ಎಂದು ಒತ್ತಾಯಿಸಿದರು. ಕುರುಬ ಸಮಾಜದ ಮುಖಂಡ ಬಿ. ಸಿದ್ಧಪ್ಪ ಮಾತನಾಡಿದರು.

ಆಲೂರು ನಿಂಗರಾಜ್‌, ಆರ್‌. ನಾಗಪ್ಪ, ಖಾನ್‌ ಸಾಬ್‌, ಜಿ.ಎಚ್‌. ತಮ್ಮಣ್ಣ, ನ್ಯಾಮತಿ ಎಸ್‌. ಹಾಲೇಶ್‌, ಸುಂಕದಕಟ್ಟೆ ಮೋಹನ್‌ಕುಮಾರ್‌, ಕೆಂಗಲಹಳ್ಳಿ ಪ್ರಭಾಕರ್‌, ಶಿವಮೂರ್ತಿ, ಎಚ್‌.ಎ. ಉಮಾಪತಿ, ಧರ್ಮಪ್ಪ ಮತ್ತಿತರರು ಮಾತನಾಡಿದರು.

ಬಸವನಹಳ್ಳಿ ಗ್ರಾಪಂ ಉಪಾಧ್ಯಕ್ಷ ರವಿ, ಮುಖಂಡರಾದ ಮಲ್ಲೇಶ್‌ ನಾಯ್ಕ, ಪ್ರಕಾಶ್‌, ಎಸ್‌.ಎಸ್‌. ಶ್ರೀನಿವಾಸ್‌ ಸೇರಿದಂತೆ ತಾಲೂಕಿನ ನಾನಾ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ