ಆ್ಯಪ್ನಗರ

ಗೋವಿನಕೋವಿ ಮರಳು ಕ್ವಾರಿ ಡಿಸಿ ವೀಕ್ಷಣೆ

ಆಶ್ರಯ ಫಲಾನುಭವಿಗಳ ಮನೆಗಳ ನಿರ್ಮಾಣಕ್ಕೆ ಮೀಸಲಿಟ್ಟಿರುವ ತಾಲೂಕಿನ ಹರಳಹಳ್ಳಿ ಹಾಗೂ ಗೋವಿನಕೋವಿಯ ಮರಳು ಕ್ವಾರಿಗಳಿಗೆ ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.

ವಿಕ ಸುದ್ದಿಲೋಕ 18 Jun 2017, 8:58 pm
ಹೊನ್ನಾಳಿ : ಆಶ್ರಯ ಫಲಾನುಭವಿಗಳ ಮನೆಗಳ ನಿರ್ಮಾಣಕ್ಕೆ ಮೀಸಲಿಟ್ಟಿರುವ ತಾಲೂಕಿನ ಹರಳಹಳ್ಳಿ ಹಾಗೂ ಗೋವಿನಕೋವಿಯ ಮರಳು ಕ್ವಾರಿಗಳಿಗೆ ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.
Vijaya Karnataka Web
ಗೋವಿನಕೋವಿ ಮರಳು ಕ್ವಾರಿ ಡಿಸಿ ವೀಕ್ಷಣೆ


ಈ ಮರಳನ್ನು ಯಾರಿಗೆ ಎಷ್ಟು ಹಣಕ್ಕೆ ಮಾರುತ್ತಿದ್ದೀರಿ ಎಂದು ಮರಳು ತುಂಬಿದ ಟ್ರ್ಯಾಕ್ಟರ್‌ ಚಾಲಕರನ್ನು ಜಿಲ್ಲಾಧಿಕಾರಿ ಪ್ರಶ್ನಿಸಿದರು. ಸರಕಾರದಿಂದ ನಮಗೆ ಆಶ್ರಯ ಮನೆ ಮಂಜೂರಾಗಿದ್ದು, ಮನೆ ನಿರ್ಮಾಣಕ್ಕೆ ಮರಳು ತೆಗೆದುಕೊಂಡು ಹೋಗುತ್ತಿದ್ದೇವೆ ಹೊರತು ಮಾರುವುದಕ್ಕಲ್ಲ ಎಂದು ಟ್ರ್ಯಾಕ್ಟರ್‌ ಚಾಲಕರು ಉತ್ತರಿಸಿದರು.

ಸರಕಾರ ವಿಧಿಸಿರುವ ನಿಬಂಧನೆಗಳನ್ನು ಯಾರಾದರೂ ಉಲ್ಲಂಘಿಸಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ತಮ್ಮ ವ್ಯಾಪ್ತಿಗೆ ಬರುವ ಕ್ವಾರಿಗಳಲ್ಲಿ ಸರಕಾರ ನಿಗದಿಪಡಿಸಿರುವ ದರವನ್ನು ದೊಡ್ಡ ನಾಮಫಲಕದಲ್ಲಿ ಪ್ರದರ್ಶಿಸಬೇಕು. ತಮ್ಮ ಕ್ವಾರಿಯ ಗಡಿಯನ್ನು ಗುರುತಿಸುವ ಬಣ್ಣದ ದೊಡ್ಡ ಕಂಬಗಳನ್ನು ನಿಮ್ಮ ನಿಮ್ಮ ಕ್ವಾರಿಗಳಲ್ಲಿ ಹಾಕಬೇಕು. ನದಿಯಲ್ಲಿ ಮೂರು ಇಂಚು ನೀರಿದ್ದರೆ ಅಂಥ ಕಡೆಗಳಲ್ಲಿ ಮರಳನ್ನು ತೆಗೆಯಬಾರದು. ಎರಡಕ್ಕಿಂತ ಹೆಚ್ಚು ಜೆಸಿಬಿಗಳನ್ನು ನದಿಗೆ ಇಳಿಸಬಾರದು ಎಂದು ಸೂಚಿಸಿದರು.

ಮರಳು ಪಡೆಯಲು ಬಂದ ಸಾರ್ವಜನಿಕರಿಂದ ಸರಕಾರ ನಿಗದಿಪಡಿಸಿದಕ್ಕಿಂತ ಹೆಚ್ಚು ಹಣ ವಸೂಲಿ ಮಾಡಿದರೆ ಅಂಥ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಆದೇಶ ನೀಡಿದರು.

ತಹಸೀಲ್ದಾರ್‌ ಎನ್‌.ಜೆ. ನಾಗರಾಜ್‌, ಪಿಎಸ್‌ಐ ಎನ್‌.ಸಿ. ಕಾಡದೇವರ, ಕಂದಾಯ ಅಧಿಕಾರಿ ಸಂತೋಷ್‌ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ