ಆ್ಯಪ್ನಗರ

​ ವಿಕಲಚೇತನರು ಸರಕಾರದ ಸೌಲಭ್ಯ ಪಡೆಯಿರಿ

: ಆಧುನಿಕ ಸಮಾಜದಲ್ಲಿ ವಿಕಲಚೇತನರಿಗೆ ಬಹುತೇಕ ಎಲ್ಲರೂ ಅನುಕಂಪ ,ಸಹಾನುಭೂತಿ ತೋರುತ್ತಾರೆ. ಆದರೆ ಸರಕಾರ ವಿಕಲಚೇತನರಿಗೆ ನಾನಾ ಯೋಜನೆ ರೂಪಿಸಿ,ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದು ಗ್ರಾಪಂ ಪಿಡಿಒ ಲಕ್ಕಣ್ಣನವರು ಹೇಳಿದರು.

Vijaya Karnataka Web 30 Jun 2017, 8:34 pm
ಹರಪನಹಳ್ಳಿ : ಆಧುನಿಕ ಸಮಾಜದಲ್ಲಿ ವಿಕಲಚೇತನರಿಗೆ ಬಹುತೇಕ ಎಲ್ಲರೂ ಅನುಕಂಪ ,ಸಹಾನುಭೂತಿ ತೋರುತ್ತಾರೆ. ಆದರೆ ಸರಕಾರ ವಿಕಲಚೇತನರಿಗೆ ನಾನಾ ಯೋಜನೆ ರೂಪಿಸಿ,ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದು ಗ್ರಾಪಂ ಪಿಡಿಒ ಲಕ್ಕಣ್ಣನವರು ಹೇಳಿದರು.
Vijaya Karnataka Web
​ ವಿಕಲಚೇತನರು ಸರಕಾರದ ಸೌಲಭ್ಯ ಪಡೆಯಿರಿ


ತಾಲೂಕಿನ ತೆಲಿಗಿ ಗ್ರಾಪಂದಲ್ಲಿ ಗುರುವಾರ ಜಿಲ್ಲಾ ವಿಕಲಚೇತನರ ಕಲ್ಯಾಣ ಇಲಾಖೆ ಹಾಗೂ ಹರಪನಹಳ್ಳಿ ತಾಪಂ, ತೆಲಿಗಿ ಗ್ರಾಪಂ ಸಹಯೋಗದಲ್ಲಿ ಅರಿವಿನ ಸಿಂಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾಡಿದರು.

ಪ್ರತಿಯೊಬ್ಬರು ಸರಕಾರದ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ಎಂ.ಆರ್‌.ಡಬ್ಲ್ಯು. ಆರ್‌. ಧನರಾಜ್‌ ಅರಿವಿನ ಸಿಂಚನದ ಬಗ್ಗೆ ಮಾಹಿತಿ ನೀಡಿದರು.

ತೆಲಿಗಿ ಗ್ರಾಪಂ ಅಧ್ಯಕ್ಷೆ ಭಾಗ್ಯಮ್ಮ, ಸದಸ್ಯ ಮಲ್ಲಿಕಾರ್ಜುನ್‌, ಸರ್ವಮ್ಮ, ಹೊನ್ನಮ್ಮ, ಮೈಲಾರಪ್ಪ, ಈಡಿಗರ ಲಕ್ಕಪ್ಪ, ಬಿ. ಕೃಷ್ಣಪ್ಪ, ವಿ.ಆರ್‌.ಡಬ್ಲ್ಯೂ ಆರ್‌.ಎಸ್‌. ಶಂಕರ್‌ ಮಂಜುನಾಥ್‌, ಕೆ. ನಿಂಗಪ್ಪ, ಕೆ. ಬಸಪ್ಪ, ಜಿ. ಅಂಜಿನಪ್ಪ, ವಿಕಲಚೇತನರು ಹಾಗೂ ಪಂಚಾಯಿತಿ ಸಿಬ್ಬಂದಿ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ