Please enable javascript.ಆತ್ಮರಕ್ಷಣೆಗೆ ಕಾರದಪುಡಿ, ಚಾಕು ಅಗತ್ಯ: ಮುತಾಲಿಕ್ - ಆತ್ಮರಕ್ಷಣೆಗೆ ಕಾರದಪುಡಿ, ಚಾಕು ಅಗತ್ಯ: ಮುತಾಲಿಕ್ - Vijay Karnataka

ಆತ್ಮರಕ್ಷಣೆಗೆ ಕಾರದಪುಡಿ, ಚಾಕು ಅಗತ್ಯ: ಮುತಾಲಿಕ್

ವಿಕ ಸುದ್ದಿಲೋಕ 20 Jan 2014, 2:00 am
Subscribe

ಮಹಿಳೆಯರು ಆತ್ಮರಕ್ಷಣೆಗಾಗಿ ತಮ್ಮ ವ್ಯಾನಿಟಿ ಬ್ಯಾಗ್‌ನಲ್ಲಿ ಕಾರದಪುಡಿ ಹಾಗೂ ಸಣ್ಣ ಚಾಕು ಇಟ್ಟುಕೊಳ್ಳುವುದು ಅಗತ್ಯ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಸಲಹೆ ನೀಡಿದ್ದಾರೆ.

ಆತ್ಮರಕ್ಷಣೆಗೆ ಕಾರದಪುಡಿ, ಚಾಕು ಅಗತ್ಯ: ಮುತಾಲಿಕ್
ದಾವಣಗೆರೆ: ಮಹಿಳೆಯರು ಆತ್ಮರಕ್ಷಣೆಗಾಗಿ ತಮ್ಮ ವ್ಯಾನಿಟಿ ಬ್ಯಾಗ್‌ನಲ್ಲಿ ಕಾರದಪುಡಿ ಹಾಗೂ ಸಣ್ಣ ಚಾಕು ಇಟ್ಟುಕೊಳ್ಳುವುದು ಅಗತ್ಯ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಸಲಹೆ ನೀಡಿದ್ದಾರೆ.

ನಗರದ ದೈವಜ್ಞ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಶ್ರೀರಾಮ ಸೇನೆಯ ಮಹಿಳಾ ವಿಭಾಗ ದುರ್ಗಾಸೇನಾ ಕರ್ನಾಟಕದಿಂದ ನಡೆದ ಪ್ರಾಂತ ಅಭ್ಯಾಸ ವರ್ಗ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭಾರತ ದೇಶವೂ ಸೇರಿದಂತೆ ಜಗತ್ತಿನೆಲ್ಲೆಡೆ ಮಹಿಳೆಯರನ್ನು ನೋಡುವ ದೃಷ್ಟಿಕೋನ ಬದಲಾ ಗಿದೆ. ಮಹಿಳೆಯರ ಮೇಲೆ ನಡೆ ಯುವ ವಿಕೃತಿಗಳನ್ನು ತಡೆ ಗಟ್ಟುವ ಸಲುವಾಗಿ ಜಾಗೃತಿ ಮೂಡಿಸಬೇಕಾಗಿದೆ ಎಂದರು.

ಸಂಪೂರ್ಣ ಮಹಿಳಾ ಸಿಬ್ಬಂದಿಯನ್ನೇ ಒಳಗೊಂಡ ಮಹಿಳಾ ಬ್ಯಾಂಕ್‌ಗಳನ್ನು ಪ್ರತಿ ಜಿಲ್ಲೆಯಲ್ಲಿ ತೆರೆಯಬೇಕೆಂಬ ಯೋಜನೆ ಇರುವುದಾಗಿ ತಿಳಿಸಿದರು.

ಡೇ ಸಂಸ್ಕೃತಿ ನ್ಯೂ ಇಯರ್ ಡೇ, ವ್ಯಾಲೆಂಟೈನ್ ಡೇನಂಥ ಡೇ ಸಂಸ್ಕೃತಿ ಭಾರತಕ್ಕೆ ಕಾಲಿಟ್ಟಿದ್ದು, ಇದರ ಪ್ರಭಾವದಿಂದ ಮುಗ್ಧ ಮಹಿಳೆಯರನ್ನು ವ್ಯವಸ್ಥಿತವಾಗಿ ಡ್ರಗ್, ಸೆಕ್ಸ್ ಮಾಫಿ ಯಾಗೆ ಬಲಿಯಾಗುವಂತೆ ಮಾಡಿದೆ ಎಂದು ಕಿಡಿ ಕಾರಿದರು.

ಡ್ರೆಸ್‌ಕೋಡ್ ಅನಗತ್ಯ ಇಂದಿನ ಪ್ರತಿ ಸಿನಿಮಾಗಳಲ್ಲೂ ಮಹಿಳೆಯರನ್ನು ಅತ್ಯಂತ ಅಶ್ಲೀಲವಾಗಿ ಚಿತ್ರಿಸಲಾಗುತ್ತಿದೆ. ಮಹಿಳೆಯರಿಗೆ ಡ್ರೆಸ್‌ಕೋಡ್ ಇರಬೇಕು ಎಂಬುದು ನನ್ನ ಉದ್ದೇಶವಲ್ಲ. ಆದರೆ ಸಭ್ಯತೆಯ ಎಲ್ಲೆ ಮೀರದಂತಿರಬೇಕು. ಅಶ್ಲೀಲ ಪೋಸ್ಟರ್ ವಿರುದ್ಧ ಹೋರಾಟಕ್ಕೆ ಕರೆ ಕೊಟ್ಟರು.

ವೈನ್ ಲಾಬಿ ದೊಡ್ಡದು ದೇಶದಲ್ಲಿ ವೈನ್ ಲಾಬಿ ಬಹಳ ದೊಡ್ಡದಾಗಿದ್ದು, ಇಡೀ ಸಮಾಜವನ್ನು ಕುಲಗೆಡಿಸುತ್ತಿದೆ. ಇದನ್ನು ನಾಶಪಡಿಸಲು ಮಠಾಪತಿಗಳು, ಮಹಿಳೆಯರು ಒಂದಾಗಿ ಹೋರಾಡಬೇಕು ಎಂದು ಹೇಳಿದರು.

ಶಿವಮೊಗ್ಗ, ಕರಾವಳಿ ಭಾಗದಲ್ಲಿ ನಡೆಯುವ ಉಗ್ರ ಚಟುವಟಿಕೆ ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿವೆ ಎಂದು ಆರೋಪಿಸಿದರು.

ದುರ್ಗಾಸೇನಾ ರಾಜ್ಯಾಧ್ಯಕ್ಷೆ ಕಮಲಾ ಜೇಡರ ಮಾತನಾಡಿ, ಅತ್ಯಾಚಾರ, ದೌರ್ಜನ್ಯಗಳನ್ನು ತಡೆಗಟ್ಟುವ ಉದ್ದೇಶದಿಂದ ಮಹಿಳೆಯರಲ್ಲಿ ಜಾಗೃತಿ ಮೂಡಿಸಲು ಪ್ರಾಂತ ಅಭ್ಯಾಸ ವರ್ಗ ನಡೆಸಿತ್ತಿರುವುದಾಗಿ ತಿಳಿಸಿದರು.

ಕೃಷ್ಣಾನಂದ ಸ್ವಾಮೀಜಿ ಮಾತನಾಡಿದರು.

ಸಿದ್ದಲಿಂಗ ಸ್ವಾಮೀಜಿ, ಹಿಂದೂ ಮಹಾಸಭಾದ ಹಿಮಾನಿತಾಯಿ ಸಾವರಕರ, ವಿಜಯಲಕ್ಷ್ಮಿ ವೀರ ಮಾಚಿನೇನ, ಸಹೇಲಿ ಸಂಸ್ಥೆಯ ರೂಪಾ, ಹೇಮಾ ರವಿ, ಗಂಗಾಧರ್ ರಂಗನಾಥ್, ಮತ್ತಿತರರು ಉಪಸ್ಥಿತರಿದ್ದರು.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ