ಆ್ಯಪ್ನಗರ

ಶೇ.7.5 ಮೀಸಲಿಗೆ ಆಗ್ರಹಿಸಿ ದುರ್ಗದಲ್ಲಿ ನಾಳೆ ಪ್ರತಿಭಟನೆ

Protest tomorrow in Durga demanding 7.5 per cent reservation

Vijaya Karnataka 21 Jul 2018, 2:53 pm
ಹರಪನಹಳ್ಳಿ : ಪರಿಶಿಷ್ಟ ಪಂಗಡ ಸಮುದಾಯಗಳಿಗೆ ಶೇ.7.5 ಮೀಸಲಾತಿ ನೀಡುವಂತೆ ಆಗ್ರಹಿಸಿ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನನಾಂದ ಪುರಿ ಸ್ವಾಮೀಜಿ ನೇತೃತ್ವದಲ್ಲಿ ಮಹರ್ಷಿ ವಾಲ್ಮೀಕಿ ನಾಯಕ ಸಮಾಜದಿಂದ ಜು.22ರಂದು ಚಿತ್ರದುರ್ಗದಲ್ಲಿ ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಮಹರ್ಷಿ ವಾಲ್ಮೀಕಿ ನಾಯಕ ಸಮಾಜದ ಮುಖಂಡರು ತಿಳಿಸಿದರು.
Vijaya Karnataka Web  7 5
ಶೇ.7.5 ಮೀಸಲಿಗೆ ಆಗ್ರಹಿಸಿ ದುರ್ಗದಲ್ಲಿ ನಾಳೆ ಪ್ರತಿಭಟನೆ


ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಾಲ್ಮೀಕಿ ಸಮಾಜದ ಅಧ್ಯಕ್ಷ ನಿಚ್ಚವ್ವನಹಳ್ಳಿ ಪರಶುರಾಮಪ್ಪ, ರಾಜ್ಯದಲ್ಲಿ 65 ರಿಂದ 70 ಲಕ್ಷ ಜನಸಂಖ್ಯೆ ಹೊಂದಿರುವ ನಾಯಕ ಸಮಾಜ ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ರಾಜಕೀಯ, ಶೈಕ್ಷ ಣಿಕ, ಸಾಮಾಜಿಕವಾಗಿ ಏಳ್ಗೆ ಹೊಂದಲು ಜನಸಂಖ್ಯೆ ಅನುಸಾರ ರಾಜ್ಯ ಸರಕಾರ ಶೇ.7.5ಕ್ಕೆ ಮೀಸಲಾತಿ ಹೆಚ್ಚಳ ಮಾಡುವಂತೆ ಆಗ್ರಹಿಸಿದರು.

ಇತ್ತೀಚೆಗೆ ಜಾರಿಯಾದ ಕಾಯಿದೆ ಮೂಲಕ ಮೀಸಲಾತಿ ಮುಂಬಡ್ತಿಗೆ ಅರ್ಹರಾಗಿದ್ದ ಎಲ್ಲ ಎಸ್ಟಿ ಸರಕಾರಿ ನೌಕರರನ್ನು ಮುಂಬಡ್ತಿ ಹುದ್ದೆಯಲ್ಲಿಯೇ ಮುಂದುವರೆಸಬೇಕು ಎಂದು ಮನವಿ ಮಾಡಿದರು.

ಜಗಳೂರು ಶಾಸಕ ಎಸ್‌.ವಿ.ರಾಮಚಂದ್ರ ಮತ್ತು ಮಾಜಿ ಶಾಸಕ ಎಚ್‌.ಪಿ. ರಾಜೇಶ್‌ ಅವರು ನಾಯಕ ಜನಾಂಗದವರಾಗಿದ್ದಾರೆ. ಇಬ್ಬರು ತಮ್ಮ ಭಿನ್ನಾಭಿಪ್ರಾಯ ಬದಿಗೊತ್ತಿ ಒಂದಾಗಬೇಕು. ರಾಜಕೀಯ ಪಕ್ಷ ಬೇರೆಯಾಗಿದ್ದು, ಜಾತಿಯಲ್ಲಿ ಇಬ್ಬರು ಸಹೃದಯಿಗಳಾಗಿದ್ದು ಒಂದಾಗುವಂತೆ ಸಮಾಜದ ಪದಾಧಿಕಾರಿಗಳು ಮನವಿ ಮಾಡಿದರು.

ಪುರಸಭೆ ಅಧ್ಯಕ್ಷ ಎಚ್‌.ಕೆ.ಹಾಲೇಶ್‌, ವಿಜಯಲಕ್ಷ್ಮಿ, ಕೆ.ಆನಂದಪ್ಪ, ಎಚ್‌.ಟಿ.ಗಿರೀಶಪ್ಪ, ನಿಟ್ಟೂರು ಸಣ್ಣಹಾಲಪ್ಪ, ಆರ್‌.ಲೋಕೇಶ್‌, ಕೆ.ಅಣ್ಣಪ್ಪ, ಶಿವಾನಂದ, ಪ್ರಕಾಶ್‌, ಹೊನ್ನಪ್ಪ, ಪರಸಪ್ಪ, ಇಟ್ಟಿಗುಡಿ ತಿಮ್ಮೇಶ್‌, ಎಚ್‌.ಎ. ಸುರೇಂದ್ರಬಾಬು, ಕೆ.ಉಚ್ಚಂಗೆಪ್ಪ, ಪಟ್ನಾಮದ ನಾಗರಾಜ್‌, ಮಂಡಕ್ಕಿ ಸುರೇಶ್‌, ಬಸವರಾಜ್‌, ಕೌಸರ ನಾಗರಾಜ, ಯಲ್ಲಜ್ಜಿ ಹನುಮಂತಪ್ಪ, ಪಟ್ನಾಮದ ಪರಶುರಾಮ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ