Please enable javascript.ಬದುಕಿಗಾಗಿ ಕಬ್ಬಿಣ ಕಮ್ಮಾರಿಕೆ - ಹಿರೇಕೋಗಲೂರು, ಮುಂಗಾರು, ಕೃಷಿ ಚಟುವಟಿಕೆ, ಕಬ್ಬಿಣ ಕಮ್ಮಾರಿಕೆ, hirekogaluru, rain, agriculture, iron work - Vijay Karnataka

ಬದುಕಿಗಾಗಿ ಕಬ್ಬಿಣ ಕಮ್ಮಾರಿಕೆ

ವಿಕ ಸುದ್ದಿಲೋಕ 17 Jul 2014, 4:00 am
Subscribe

ಮುಂಗಾರು ಬಂತೆಂದರೆ ಕೃಷಿ ಚಟುವಟಿಕೆ ಚುರುಕಾಗುತ್ತವೆ. ಜಮೀನು ಕೆಲಸ ಆರಂಭಿಸುವ ಮುನ್ನ ರೈತರು ಕುಲುಮೆಗೆ ತೆರಳಿ ಕುಂಟೆ, ಎಡೆ ಹೊಡೆವ ತಾಳು, ನೇಗಿಲ ತಾಳು ಹೀಗೆ ಹಲವು ಕೃಷಿ ಪರಿಕರಗಳನ್ನು ಕಮ್ಮಾರರ ಬಳಿ ಹಣಿಸ ಲಾಗುತ್ತದೆ. ಬೆಳಗ್ಗೆ ಯಿಂದ ರಾತ್ರಿವರೆಗೂ ಬಿಡುವಿಲ್ಲದೇ ಕೆಲಸದಲ್ಲಿ ತೊಡಗಿಕೊಂಡ ಕಮ್ಮಾರರಿಗೆ ಒಂದಷ್ಟು ದುಡಿದುಕೊಳ್ಳಲು ಮುಂಗಾರು ಸಮಯವನ್ನು ಸೀಸನ್ ಎಂತಲೇ ಹೇಳಬಹುದು.

 hirekogaluru rain agriculture iron work
ಬದುಕಿಗಾಗಿ ಕಬ್ಬಿಣ ಕಮ್ಮಾರಿಕೆ
ಹಿರೇಕೋಗಲೂರು: ಮುಂಗಾರು ಬಂತೆಂದರೆ ಕೃಷಿ ಚಟುವಟಿಕೆ ಚುರುಕಾಗುತ್ತವೆ. ಜಮೀನು ಕೆಲಸ ಆರಂಭಿಸುವ ಮುನ್ನ ರೈತರು ಕುಲುಮೆಗೆ ತೆರಳಿ ಕುಂಟೆ, ಎಡೆ ಹೊಡೆವ ತಾಳು, ನೇಗಿಲ ತಾಳು ಹೀಗೆ ಹಲವು ಕೃಷಿ ಪರಿಕರಗಳನ್ನು ಕಮ್ಮಾರರ ಬಳಿ ಹಣಿಸ ಲಾಗುತ್ತದೆ. ಬೆಳಗ್ಗೆಯಿಂದ ರಾತ್ರಿವರೆಗೂ ಬಿಡುವಿಲ್ಲದೇ ಕೆಲಸ ದಲ್ಲಿ ತೊಡಗಿಕೊಂಡ ಕಮ್ಮಾರರಿಗೆ ಒಂದಷ್ಟು ದುಡಿದುಕೊಳ್ಳಲು ಮುಂಗಾರು ಸಮಯವನ್ನು ಸೀಸನ್ ಎಂತಲೇ ಹೇಳಬಹುದು.

ಸಂತೇಬೆನ್ನೂರು ಗ್ರಾಮದ ಗ್ರಾಪಂ ಎದುರು ಕುಲುಮೆ ಮಾಡುವ ಟೆಂಟ್ ಹಾಕಿಕೊಂಡಿದ್ದಾರೆ. ಇಲ್ಲಿ ಇಬ್ಬರು ಮೂವರು ಕೆಲಸ ಮಾಡುತ್ತಾರೆ. ಒಬ್ಬರು ಕಬ್ಬಿಣವನ್ನು ಬಡಿದರೆ, ಮತ್ತೊಬ್ಬರು ಬೆಂಕಿಗೆ ಗಾಳಿ ಹ್ಯಾಂಡಲ್ ತಿರುಗಿಸುತ್ತಾರೆ. ಇನ್ನೊಬ್ಬರು ಕಾದ ಕಬ್ಬಿಣ ಹಿಡಿದು ಕೆಲಸ ಮಾಡುತ್ತಾರೆ.

ಒಂದು ಕುಂಟೆ ತಾಳು ಹಣಿಯಲು 150 ರೂ., ಎಡೆ ಕುಂಟೆ ತಾಳಿಗೆ 20 ರೂ., ಮಚ್ಚು 50 ರೂ., ಕುರ್ಜಿಗೆ 10 ರೂ. ಇತರೆ ಪರಿಕರಗಳಿಗೆ ತಕ್ಕಂತೆ ಹಣವಿರುತ್ತದೆ. ಕೆಲಸಕ್ಕೆ ಬಳಸಲು (ಬೆಂಕಿಗೆ) ಒಂದು ಚೀಲ ಭತ್ತದ ಜೊಳ್ಳು 50 ರೂ., ಒಂದು ಮೊರ ಇದ್ದಿಲಿಗೆ 6 ರೂ. ಇದೆ ಎನ್ನುತ್ತಾರೆ ಕುಲುಮೆ ಮಾಲೀಕರಾದ ಶಿವು, ಮಂಜು.

ಇತ್ತೀಚಿನ ದಿನಗಳಲ್ಲಿ ಈ ವೃತ್ತಿ ಮಾಡುವರು ಬೆರಳೆಣಿಕೆಯಷ್ಟು. ಹಿಂದೆ ರೈತರಿಗೆ ಕೃಷಿ ಸಾಮಾಗ್ರಿಗಳನ್ನು ಹಣಿಸಲು ಇವರ ಅವಶ್ಯವಿದ್ದೆ ಇರುತ್ತಿತ್ತು. ಆದರೆ ಟ್ರ್ತ್ರ್ಯಾಕ್ಟರ್, ಪವರ್ ಟಿಲ್ಲರ್ ಬಂದ ಮೇಲೆ ಇವರಿಗೆ ಕೊಂಚ ಕೆಲಸ ಕಡಿಮೆಯಾಗುತ್ತಿದ್ದರೂ ಕೆಲ ಸಂದರ್ಭದಲ್ಲಿ ಮಾತ್ರ ಕುಲುಮೆಗಾರರು ಬೇಕಾಗುತ್ತಾರೆ.

ಹೊಲದ ಕಳೆ ತೆಗೆಯಲು ಕಮ್ಮಾರರು ಹಣಿದ ಕುಡ ಅಥವಾ ತಾಳುಗಳು ಬೇಕಾಗು ತ್ತವೆ. ಬೆಳೆಗಳ ಸಾಲಿನ ನಡುವೆ ಬೇಸಾಯ ಹೊಡೆದರೆ ಬೆಳೆದ ಕಳೆ ನಾಶವಾಗಿ, ಸಾಲಿನಲ್ಲಿ ಮಣ್ಣು ಸಸಿಗಳ ಬುಡಕ್ಕೆ ಬರುತ್ತದೆ. ಆಗ ಸಸಿ ಗಟ್ಟಿಯಾಗಿ ಸದೃಢವಾಗಿ ಬೆಳೆಯುತ್ತದೆ. ಒಟ್ಟಾರೆ ರೈತರು ಮತ್ತು ಕಮ್ಮಾರರಿಗೆ ಕೃಷಿ ಪರಿಕರಗಳಿಂದ ಅವಿನಾಭಾವ ಸಂಬಂಧವಿದೆ.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ