ಆ್ಯಪ್ನಗರ

5.5 ಲಕ್ಷ ಮೌಲ್ಯದ ಗಂಧ ವಶ: ಮೂವರ ಬಂಧನ

ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳನ್ನು ತಡೆದು ದರೋಡೆ ನಡೆಸುತ್ತಿದ್ದ ಮೂವರನ್ನು ಚನ್ನಗಿರಿ ಪೊಲೀಸರು ಬಂಧಿಸಿ 55 ಲಕ್ಷ ರೂ. ಮೌಲ್ಯದ 79 ಕೆಜಿ ಶ್ರೀಗಂಧ ಮತ್ತು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

Vijaya Karnataka Web 15 Oct 2019, 9:41 am
ಚನ್ನಗಿರಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳನ್ನು ತಡೆದು ದರೋಡೆ ನಡೆಸುತ್ತಿದ್ದ ತಂಡದ ಮೂವರನ್ನು ಚನ್ನಗಿರಿ ಪೊಲೀಸರು ಬಂಧಿಸಿ 5.5 ಲಕ್ಷ ರೂ. ಮೌಲ್ಯದ 79 ಕೆಜಿ ಶ್ರೀಗಂಧ ಮತ್ತು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
Vijaya Karnataka Web arrest


ಅಕ್ರಮವಾಗಿ ಸಾಗಿಸುತ್ತಿದ್ದ ಶ್ರೀಗಂಧ ವಶ

ಶಿವಮೊಗ್ಗ ಸಮೀಪದ ಪಿಳ್ಳಂಗಿರಿಯ ಚಿಕ್ಕಪ್ಪ, ಚನ್ನಗಿರಿ ತಾಲೂಕಿನ ರಾಜಗೊಂಡನಹಳ್ಳಿಯ ನಿಂಗಪ್ಪ, ಎರೆಹಳ್ಳಿಯ ಮಂಜಪ್ಪ ಬಂಧಿತ ಆರೋಪಿಗಳು. ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನೂ ನಾಲ್ವರು ಪೊಲೀಸರ ಕಣ್ಣು ತಪ್ಪಿಸಿ ಪರಾರಿಯಾಗಿದ್ದಾರೆ.

ಇತಿಹಾಸದ ಪುಟಸೇರಿದ ಗಂಧದಕೋಠಿ, ಹೈಸ್ಕೂಲ್‌ ಮೈದಾನ

ಚನ್ನಗಿರಿ ತಾಲೂಕಿನ ಮಾವಿನಕಟ್ಟೆ- ಸುಣಿಗೆರೆ ಗ್ರಾಮದ ಮಧ್ಯದಲ್ಲಿರುವ ನೀಲಗಿರಿ ತೋಪಿನ ಬಳಿ ಸೋಮವಾರ ಬೆಳಗಿನ ಜಾವ ಶಿವಮೊಗ್ಗದ ಮತ್ತು ಚಿತ್ರದುರ್ಗದ ಕಡೆಗೆ ಹೋಗುವ ವಾಹನಗಳನ್ನು ಅಡ್ಡಗಟ್ಟಿ ದರೋಡೆಗೆ ಯತ್ನಿಸುತ್ತಿದ್ದರು.

ಅನರ್ಹ ಶಾಸಕ ಸುಧಾಕರ್‌ ಮನೆ ಆವರಣದಲ್ಲಿದ್ದ ಶ್ರೀಗಂಧ ಕಳ್ಳತನ

ಈ ಕುರಿತ ಮಾಹಿತಿ ಮೇರೆಗೆ ಸಿಪಿಐ ಆರ್‌.ಆರ್‌.ಪಾಟೀಲ್‌, ಚನ್ನಗಿರಿ ಪಿಎಸ್‌ಐ ಶಿವರುದ್ರಪ್ಪ ಮೇಟಿ ಮತ್ತು ಸಿಬ್ಬಂದಿ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 1 ಲಕ್ಷ ಬೆಲೆಯ ಎರಡು ಬೈಕುಗಳು, ಕಾರದಪುಡಿ, ಚಾಕು ವಶಪಡಿಸಕೊಳ್ಳಲಾಗಿದೆ. 

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ