ಆ್ಯಪ್ನಗರ

ತುಂಗಭದ್ರಾ ನದಿಗೆ 6.860 ಮೀಟರ್‌ ನೀರು

ಮಲೆನಾಡಿನಲ್ಲಿ ಮಳೆ ಚುರುಕಾದ ಪರಿಣಾಮ ಜಿಲ್ಲೆಯ ಜೀವ ನದಿ ತುಂಗಭದ್ರೆಯಲ್ಲಿ ನೀರಿನ ಹರಿವು ದಿನದಿನಕ್ಕೂ ಏರಿಕೆಯಾಗುತ್ತಿದೆ ನೋಡುಗರ ಕಣ್ಮನ ಸೆಳೆಯುತ್ತಿದೆ.

Vijaya Karnataka 12 Jul 2019, 5:00 am
ಹರಿಹರ : ಮಲೆನಾಡಿನಲ್ಲಿ ಮಳೆ ಚುರುಕಾದ ಪರಿಣಾಮ ಜಿಲ್ಲೆಯ ಜೀವ ನದಿ ತುಂಗಭದ್ರೆಯಲ್ಲಿ ನೀರಿನ ಹರಿವು ದಿನದಿನಕ್ಕೂ ಏರಿಕೆಯಾಗುತ್ತಿದೆ ನೋಡುಗರ ಕಣ್ಮನ ಸೆಳೆಯುತ್ತಿದೆ.
Vijaya Karnataka Web 6 860 m of tungabhadra river
ತುಂಗಭದ್ರಾ ನದಿಗೆ 6.860 ಮೀಟರ್‌ ನೀರು


ಕಳೆದ ಏಳೆಂಟು ತಿಂಗಳಿಂದ ಬರಿದಾಗಿದ್ದು, ಬೇಸಿಗೆಯಲ್ಲಿ ಹೆಚ್ಚು ಕಡಿಮೆ ಬತ್ತಿದಂತಾಗಿ ಕೆಲ ದಿನಗಳ ಕಾಲ ನಗರದ ಜನತೆ ಕುಡಿಯುವ ನೀರಿಗೆ ಪರದಾಡುವಂತಾಗಿತ್ತು.

ಕಳೆದೊಂದು ವಾರದಿಂದ ಮಲೆನಾಡಿನ ತರಿಕೆರೆ, ತೀರ್ಥಹಳ್ಳಿ, ಬಾಳೆಹೊನ್ನೂರು, ಅರೆಮಲೆನಾಡಿನ ಭದ್ರಾವತಿ, ಶಿವಮೊಗ್ಗ ಹಾಗೂ ಜಿಲ್ಲೆಯ ಹೊನ್ನಾಳಿ, ಹರಿಹರದಲ್ಲಿ ಮುಂಗಾರು ಚುರುಕುಗೊಂಡಿರುವುದು ಹಾಗು ತುಂಗಾ ಜಲಾಶಯ ತುಂಬಿ ನೀರನ್ನು ಹರಿ ಬಿಟ್ಟಿರುವುದರಿಂದ ನದಿಯಲ್ಲಿ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗುತ್ತಿದೆ.

ಜು.7 ರಂದು 6.150 ಮೀ. ಇದ್ದ ನೀರಿನ ಹರಿವು, ಜು.8 ಮತ್ತು 9 ರಂದು 5.840 ಮೀ.ಗೆ ಇಳಿಕೆಯಾಗಿತ್ತು. ಜು.10 ರಂದು 6.860 ಗೇರಿತು. ಒಂದೆ ದಿನದಲ್ಲಿ 1 ಮೀ. ಗೂ ಹೆಚ್ಚು ನೀರಿನ ಹರಿವಿನಲ್ಲಿ ಏರಿಕೆ ಕಂಡು ಬಂದಿದೆ. ನದಿಯಲ್ಲಿ 23 ಸಾವಿರ ಕ್ಯೂಸೆಕ್‌ನೀರು ನದಿಯಲ್ಲಿ ಹರಿಯುತ್ತಿದೆ.

ವೈಯಾರ:
ನಗರದ ಹೊರವಲಯದಲ್ಲಿ ಪಶ್ಚಿಮ ದಿಕ್ಕಿನಿಂದ ಉತ್ತರಕ್ಕೆ ಪಥ ಬದಲಿಸಿ ನಂತರ ಹಳೆ ಸೇತುವೆ, ರೈಲ್ವೆ ಸೇತುವೆಯ ಕಮಾನುಗಳ ಮೂಲಕ ಹರಿಯುವ ನದಿಯ ವೈಯಾರ ನೋಡುಗರ ಕಣ್ಮನ ಸೆಳೆಯುತ್ತಿದೆ. ನದಿಯಲ್ಲಿ ನೀರಿನ ಹರಿವು 11 ಮೀಟರ್‌ ಏರಿದಾಗ ಅಪಾಯ ಮಟ್ಟವೆಂದು ಪರಿಗಣಿಸಲಾಗುತ್ತಿದೆ. ಆಗ ನದಿ ಇಕ್ಕೆಲಗಳಲ್ಲಿರುವ ಹಾಗೂ ನದಿ ನೀರು ನುಗ್ಗುವ ಸಂಭವವಿರುವ ಕಡೆಯ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತದೆ. ಇನ್ನೆರಡು ದಿನ ನದಿಯ ಕ್ಯಾಚ್‌ಮೆಂಟ್‌ ಪ್ರದೇಶದಲ್ಲಿ ಮಳೆ ಮುಂದುವರಿದರೆ ಮತ್ತಷ್ಟು ನೀರಿನ ಹರಿವು ಹೆಚ್ಚಾಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ