ಆ್ಯಪ್ನಗರ

ವಸತಿ ಶಾಲೆಗಳಿಗೆ 71 ಲೈಟ್‌ ಅಳವಡಿಕೆಗೆ 71 ಲಕ್ಷ ಹಣ ಗುಳುಂ

ತಾಲೂಕಿನ ಸಮಾಜ ಕಲ್ಯಾಣ ಇಲಾಖೆಗೆ ಒಳಪಡುವ ಗೋಪನಾಳ್‌, ಅಸ್ತಾಪನಹಳ್ಳಿ ಹಾಗೂ ಕರೇಕಟ್ಟೆಯಲ್ಲಿನ ವಸತಿ ಶಾಲೆಗಳಿಗೆ 71 ವಿದ್ಯುತ್‌ ದೀಪಗಳ ಅಳವಡಿಕೆಗೆ 71 ಲಕ್ಷ ರೂ. ಪಡೆದಿದ್ದು, ಈ ಅವ್ಯವಹಾರದ ತನಿಖೆ ಕೈಗೊಳ್ಳಬೇಕೆಂದು ತಾಪಂ ಸದಸ್ಯರು ಒಕ್ಕೊರಲಿನಿಂದ ಒತ್ತಾಯಿಸಿದರು.

Vijaya Karnataka 20 Jul 2018, 5:00 am
ಚನ್ನಗಿರಿ : ತಾಲೂಕಿನ ಸಮಾಜ ಕಲ್ಯಾಣ ಇಲಾಖೆಗೆ ಒಳಪಡುವ ಗೋಪನಾಳ್‌, ಅಸ್ತಾಪನಹಳ್ಳಿ ಹಾಗೂ ಕರೇಕಟ್ಟೆಯಲ್ಲಿನ ವಸತಿ ಶಾಲೆಗಳಿಗೆ 71 ವಿದ್ಯುತ್‌ ದೀಪಗಳ ಅಳವಡಿಕೆಗೆ 71 ಲಕ್ಷ ರೂ. ಪಡೆದಿದ್ದು, ಈ ಅವ್ಯವಹಾರದ ತನಿಖೆ ಕೈಗೊಳ್ಳಬೇಕೆಂದು ತಾಪಂ ಸದಸ್ಯರು ಒಕ್ಕೊರಲಿನಿಂದ ಒತ್ತಾಯಿಸಿದರು.
Vijaya Karnataka Web 71 lakhs for 71 lights for residential schools
ವಸತಿ ಶಾಲೆಗಳಿಗೆ 71 ಲೈಟ್‌ ಅಳವಡಿಕೆಗೆ 71 ಲಕ್ಷ ಹಣ ಗುಳುಂ


ಪಟ್ಟಣದ ತಾಪಂ ಸಭಾಂಗಣದಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಈ ವಿಷಯ ಸ್ಪೋಟಿಸಿದ ಸದಸ್ಯರು, ಸಮಾಜ ಕಲ್ಯಾಣ ಇಲಾಖೆಯ ಗೋಪನಾಳ್‌ ವಸತಿ ನಿಲಯಕ್ಕೆ 19 ಲೈಟ್‌ಗಳನ್ನು ಹಾಕಿ 19 ಲಕ್ಷ , ಅಸ್ತಾಪನಹಳ್ಳಿ ವಸತಿ ಶಾಲೆಗೆ 21 ಲೈಟ್‌ಗಳನ್ನು ಹಾಕಿ 21 ಲಕ್ಷ , ಕರೇಕಟ್ಟೆಯ ವಸತಿ ಶಾಲೆಗೆ 10 ಲೈಟುಗಳನ್ನು ಹಾಕಿ 10 ಲಕ್ಷ ರೂ. ಪಡೆಯಲಾಗಿದೆ. ಅಧಿಕಾರಿಗಳಿಗೆ ಲಿಖಿತವಾಗಿ ದೂರು ನೀಡಿದರು ಕ್ರಮ ಕೈಗೊಂಡಿಲ್ಲ. ಸರಕಾರದ ಲಕ್ಷಾಂತರ ರೂ. ಲೂಟಿ ಮಾಡಲಾಗಿದೆ. ಅವ್ಯವಹಾರದ ಈ ಪ್ರಕರಣ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಟಿಎಸ್‌ಡಬ್ಲೂ ಕಲ್ಯಾಣ ಅಧಿಕಾರಿ ಕುಮಾರ್‌ ಮಾತನಾಡಿ, ವಿದ್ಯುತ್‌ ದೀಪವನ್ನು ಅಳವಡಿಸುವ ಟೆಂಡರ್‌ ರಾಜ್ಯ ಸಮಾಜ ಕಲ್ಯಾಣ ಇಲಾಖೆ ಕಚೇರಿಯಿಂದ ಆಗಿದೆ. ಈ ಬಗ್ಗೆ ಹಿಂದಿನ ಅಧಿಕಾರಿ ಮಾಹಿತಿ ನೀಡಿದರೂ ಕೇಂದ್ರ ಕಚೇರಿ ಯಾವುದೇ ಕ್ರಮಕೈಗೊಂಡಿಲ್ಲ ಎಂದು ತಿಳಿಸಿದರು.

ಡೋನೇಷನ್‌ ಹಾವಳಿ:


ತಾಪಂ ಸದಸ್ಯ ಹಾಲೇಶ್‌ನಾಯ್ಕ ಮಾತನಾಡಿ, ತಾಲೂಕಿನ ಖಾಸಗಿ ಶಾಲೆಗಳಲ್ಲಿ ವಂತಿಕೆ ಹಾವಳಿ ಹೆಚ್ಚಾಗಿದ್ದು, ಪೋಷಕರು ಮಕ್ಕಳನ್ನು ಶಾಲೆಗಳಿಗೆ ಸೇರಿಸಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರಕಾರ ಸಮಾನ ಶಿಕ್ಷ ಣ ನೀಡುವ ನಿಟ್ಟಿನಲ್ಲಿ ಆರ್‌ಟಿಐ ಯೋಜನೆ ನೀಡಿದ್ದು, ತಾಲೂಕಿನಲ್ಲಿ 650 ವಿದ್ಯಾರ್ಥಿಗಳ ದಾಖಲಾತಿಯಲ್ಲಿ 350 ಮಂದಿಗೆ ಮಾತ್ರ ಪ್ರವೇಶ ದೊರೆತಿದೆ. ಉಳಿದ ಸೀಟುಗಳನ್ನು ಖಾಸಗಿ ಶಾಲೆಗಳು ಹಣಕ್ಕೆ ಮಾರಾಟ ಮಾಡಿಕೊಳ್ಳುತ್ತಿವೆ ಎಂದು ದೂರಿದರು.

ಹೆರಿಗೆಗೆ ಶಿವಮೊಗ್ಗಕ್ಕೆ ರೆಫರ್‌:

ಸದಸ್ಯೆ ಗಾಯತ್ರಿ ಅಣ್ಣಪ್ಪ ಮಾತನಾಡಿ, ಸರಕಾರಿ ಆಸ್ಪತ್ರೆಯಲ್ಲಿ ಹೆರಿಗೆಗಾಗಿ ಬಂದವರನ್ನು ಶಿವಮೊಗ್ಗಕ್ಕೆ ಹೋಗುವಂತೆ ವೈದ್ಯರೇ 108 ವಾಹನ ತರಿಸಿ ಕಳುಹಿಸುತ್ತಾರೆ. ಸರಕಾರದ ಔಷಧ ನೀಡದೆ ಹೊರಗಿನ ಖಾಸಗಿ ಅಂಗಡಿಗೆ ಬರೆಯುತ್ತಾರೆ. ಗ್ರಾಮೀಣ ಭಾಗದ ವೈದ್ಯರು ಬರೆದ ಚೀಟಿಗೆ ಜನರಿಕ್‌ ಔಷಧ ಅಂಗಡಿಯಲ್ಲಿ ಔಷಧ ನೀಡುತ್ತಿಲ್ಲ. ಇದರಿಂದ ತೊಂದರೆಯಾಗಿದೆ ಎಂದು ಸಭೆಗೆ ತಿಳಿಸಿದರು.

ಸಭೆಯ ಅಧ್ಯಕ್ಷ ತೆಯನ್ನು ತಾಪಂ ಅಧ್ಯಕ್ಷೆ ಸುಜಾತ ಬಸವರಾಜ್‌ ವಹಿಸಿದ್ದರು. ಉಪಾಧ್ಯಕ್ಷ ಆರ್‌.ಕುಮಾರ್‌ನಾಯ್ಕ, ಸ್ಥಾಯಿ ಸಮಿತಿ ಆಧ್ಯಕ್ಷ ಕೆ.ಸಿ. ರವಿ, ತಾಪಂ ಇಒ ಪ್ರಕಾಶ್‌ ಇದ್ದರು.

----

ಬಾಕ್ಸ್‌..

ಖಾಲಿ ಸೀಟ್‌ ಭರ್ತಿಗೆ ಹಣ ಒಸೂಲಿ


2018-19ನೇ ಸಾಲಿನಲ್ಲಿ ಮೊರಾರ್ಜಿ ಶಾಲೆಯಲ್ಲಿ ದಾಖಲಾತಿ ಪಡೆಯಲು ಅರ್ಜಿ ಕರೆಯಲಾಗಿದೆ. ಆದರೆ, ಕೆಲ ವಿದ್ಯಾರ್ಥಿಗಳು ದಾಖಲಾಗಿರುವುದಿಲ್ಲ. ಖಾಲಿ ಇರುವಂತ ಸ್ಥಾನವನ್ನು ತುಂಬಲು ಬರುವಂತ ಮಕ್ಕಳಿಂದ ಹಣ ವಸೂಲಿ ನಡೆಯುತ್ತಿದೆ. ಖಾಲಿ ಇರುವಂತ ಎಂಟನೇ ತರಗತಿಗೆ ದಾಖಲಾತಿಗೆ ಕಣಿವೆಬಿಳಚಿ ಗ್ರಾಮದ ಪೋಷಕರು ಮಗುವನ್ನು ಕರೆದುಕೊಂಡು ಹೋದಾಗ ಒಬ್ಬ ವಿದ್ಯಾರ್ಥಿಗೆ 20 ಸಾವಿರ ರೂ. ನೀಡಿದರೆ ಸೀಟು ನೀಡುತ್ತೇವೆ ಎಂದು ಹೇಳಿ ವಾಪಾಸ್‌ ಕಳುಹಿಸಿದ್ದಾರೆ ಎಂದು ಸದಸ್ಯ ಹಾಲೇಶ್‌ನಾಯ್ಕ ಸಭೆಯ ಗಮನಕ್ಕೆ ತಂದರು.

------

ಮಹಿಳಾ ಹಾಸ್ಟೆಲ್‌ಗೆ ಪುರುಷರ ನೇಮಕ!


ಪಟ್ಟಣದ ಮೆಟ್ರಿಕ್‌ ನಂತರದ ಬಾಲಕಿಯರ ಹಾಸ್ಟೆಲ್‌ನಲ್ಲಿ ಮಹಿಳಾ ವಾರ್ಡನ್‌ ಬದಲಿಗೆ ಪುರುಷರ ನೇಮಕ ಮಾಡಲಾಗಿದೆ. ವಾರದಲ್ಲಿ ಒಂದು ಬಾರಿಯು ಹಾಸ್ಟೆಲ್‌ಗೆ ಬರುವುದಿಲ್ಲ ಪ್ರೌಢವಸ್ಥೆಗೆ ಬಂದಿರುವ ಬಾಲಕಿಯರಿಗೆ ಏನಾದರೂ ಆದರೆ ಯಾರು ಹೊಣೆ. ರಾತ್ರಿ ಸಮಯದಲ್ಲಿ ಮಕ್ಕಳು ಹಾಸ್ಟೆಲ್‌ನಿಂದ ಹೊರಗೆ ಹೋಗುತ್ತಾರೆ ಮೊದಲು ಚಲನವಲನ ಪುಸ್ತಕವನ್ನು ಇಡಬೇಕು ಎಂದು ಸದಸ್ಯರಾದ ಪುಷ್ಪಾ ಹಾಗೂ ಕವಿತಾ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ