ಆ್ಯಪ್ನಗರ

ನಕಲಿ ಪತ್ರಕರ್ತರ ಹಾವಳಿ ತಡೆಗೆ ಎಸ್ಪಿಗೆ ಮನವಿ

ನಕಲಿ ಪತ್ರಕರ್ತರ ಹಾವಳಿ ತಡೆಯುವಂತೆ ಕೋರಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಶನಿವಾರ ಎಸ್ಪಿ ಆರ್‌.ಚೇತನ್‌ಗೆ ಮನವಿ ಸಲ್ಲಿಸಲಾಯಿತು.

Vijaya Karnataka 3 Mar 2019, 5:00 am
ಹರಿಹರ : ನಕಲಿ ಪತ್ರಕರ್ತರ ಹಾವಳಿ ತಡೆಯುವಂತೆ ಕೋರಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಶನಿವಾರ ಎಸ್ಪಿ ಆರ್‌.ಚೇತನ್‌ಗೆ ಮನವಿ ಸಲ್ಲಿಸಲಾಯಿತು.
Vijaya Karnataka Web appeal to sp for prevention of fake journalists
ನಕಲಿ ಪತ್ರಕರ್ತರ ಹಾವಳಿ ತಡೆಗೆ ಎಸ್ಪಿಗೆ ಮನವಿ


ಪತ್ರಕರ್ತರೆಂದು ಹೇಳಿಕೊಂಡು ಕೆಲವರು ತಾಲೂಕಿನ ಸರಕಾರಿ ಕಚೇರಿಗಳು, ಶಾಲಾ-ಕಾಲೇಜು, ಉದ್ಯಮ ಸಂಸ್ಥೆಗಳು, ಸಾರ್ವಜನಿಕರ ಅಂಗಡಿ-ಮುಂಗಟ್ಟುಗಳಿಗೆ ತೆರಳಿ ಹೆದರಿಸಿ-ಬೆದರಿಸಿ ದಬ್ಬಾಳಿಕೆ, ದೌರ್ಜನ್ಯ ನಡೆಸುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಂತೂ ಅಂಗನವಾಡಿ ಕೇಂದ್ರ, ಗ್ರಾಪಂ, ಸರಕಾರಿ, ಖಾಸಗಿ ಶಾಲೆಗಳಿಗೆ ತೆರಳಿ ತಾವು ಟಿವಿ ಮಾಧ್ಯಮದವರು ಎಂದು ಹೇಳಿ ಮೊಬೈಲ್‌ನಲ್ಲಿ ಚಿತ್ರೀಕರಿಸುತ್ತಾ ಅಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳೊಂದಿಗೆ ಅನುಚಿತವಾಗಿ ವರ್ತಿಸುವ ಬಗ್ಗೆ ಸಂಘಕ್ಕೆ ಸಾಕಷ್ಟು ದೂರು ಬಂದಿವೆ ಎಂದರು.

ಸಾಮಾಜಿಕ ಜಾಲತಾಣದ ಸುದ್ದಿವಾಹಿನಿಯವರು ಎಂದು ಹೇಳಿ ನಿಯಮ ಬಾಹಿರವಾಗಿ ವಿವಿಧ ಲೋಗೋ ಹಿಡಿದುಕೊಂಡು ಸರಕಾರಿ ಅಧಿಕಾರಿಗಳು, ಸಾರ್ವಜನಿಕರಿಗೆ ಕಿರುಕುಳ ಕೊಡುತ್ತಿರುವ ಘಟನೆ ನಡೆಯುತ್ತಿವೆ. ಇದಲ್ಲದೆ ಪತ್ರಕರ್ತರಲ್ಲದವರೂ ತಮ್ಮ ವಾಹನಗಳ ಮೇಲೆ ಪ್ರೆಸ್‌ ಎಂದು ಬರೆದುಕೊಂಡು ಸಂಚರಿಸುತ್ತಿದ್ದಾರೆ. ಸಂಚಾರಿ ನಿಯಮ ಉಲ್ಲಂಘಿಸುವುದಲ್ಲದೆ ಪ್ರಶ್ನಿಸುವ ಪೊಲೀಸರೊಂದಿಗೆ ವಾಗ್ವಾದ ನಡೆಸುತ್ತಾರೆ ಎಂದು ದೂರುತ್ತಾ ಇಂಥವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿದ ಎಸ್ಪಿ ಸ್ಥಳದಲ್ಲಿದ್ದ ಸಿಪಿಐ ಗುರುನಾಥ್‌ ಅವರಿಗೆ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದರು.

ಸಂಘದ ಗೌರವಾಧ್ಯಕ್ಷ ಟಿ.ಇನಾಯತ್‌ ಉಲ್ಲಾ, ಅಧ್ಯಕ್ಷ ಶೇಖರಗೌಡ ಪಾಟೀಲ್‌, ಪ್ರಧಾನ ಕಾರ್ಯದರ್ಶಿ ಕೆ.ಜೈಮುನಿ, ಸಹಕಾರ್ಯದರ್ಶಿ ಮಂಜನಾಯ್ಕ, ಖಜಾಂಚಿ ಸುಬ್ರಮಣ್ಯ ನಾಡಿಗೇರ್‌, ಸದಸ್ಯರಾದ ಬಿ.ಎಂ.ಸಿದ್ದಲಿಂಗಸ್ವಾಮಿ, ರವಿಶಂಕರ್‌ ಗದ್ಗಿಮಠ, ಪ್ರವೀಣ್‌ ಆರ್‌.ಬಿ. ಜಿ.ಕೆ.ಪಂಚಾಕ್ಷ ರಿ, ಮಂಜುನಾಥ್‌ ಆರ್‌., ಮಂಜುನಾಥ್‌ ರಾಜನಹಳ್ಳಿ, ಚಿದಾನಂದ ಕಂಚೀಕೇರಿ, ಕುಮಾರ್‌ ಗಂಗನರಸಿ, ವಿಶ್ವನಾಥ್‌, ಚಂದ್ರಶೇಖರ್‌ ಕುಂಬಾರ್‌, ಸುರೇಶ್‌ ಕುಣಿಬೆಳಕೆರಿ, ಬಿ.ಎಂ.ಚಂದ್ರಶೇಖರ್‌, ಇರ್ಪಾನ್‌ ಖಾನ್‌ ಮತ್ತಿತರರಿದ್ದರು.

ಇದೇ ವೇಳೆ ನಗರ ಠಾಣೆ ನೂತನ ಕಟ್ಟಡಕ್ಕೆ ಚಾಲನೆ ನೀಡಲು ಆಗಮಿಸಿದ್ದ ಶಾಸಕ ಎಸ್‌.ರಾಮಪ್ಪ, ನಗರಸಭೆ ಅಧ್ಯಕ್ಷೆ ಸುಜಾತ ರೇವಣಸಿದ್ದಪ್ಪ, ಹೆಚ್ಚುವರಿ ಎಸ್ಪಿ ಉದೇಶ್‌, ಗ್ರಾಮಾಂತರ ಡಿವೈಎಸ್ಪಿ ಶಿವಮೂರ್ತಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ