ಆ್ಯಪ್ನಗರ

ಟೇಕ್ ಆಫ್ ಆಗದ ಸರಕಾರ: ಬಿಜೆಪಿ ನಾಯಕಿ ತೇಜಸ್ವಿನಿ ಗೌಡ ಟೀಕೆ

ಕಾಂಗ್ರೆಸ್‌ ಜೆಡಿಎಸ್ ಮೈತ್ರಿ ಸರಕಾರ ಇನ್ನೂ ಟೇಕ್ ಆಫ್ ಆಗಿಲ್ಲ. ಯಾವಾಗ ಬೇಕಾದರೂ ಈ ಮೈತ್ರಿ ಸರಕಾರ ಬಿದ್ದು ಹೋಗಬಹುದು ಎಂದು ವಿಧಾನ ಪರಿಷತ್ ಸದಸ್ಯೆ, ಬಿಜೆಪಿ ನಾಯಕಿ ತೇಜಸ್ವಿನಿ ಗೌಡ ಹೇಳಿದ್ದಾರೆ.

Vijaya Karnataka Web 30 Jun 2018, 9:03 pm
ದಾವಣಗೆರೆ: ಕಾಂಗ್ರೆಸ್‌ ಜೆಡಿಎಸ್ ಮೈತ್ರಿ ಸರಕಾರ ಇನ್ನೂ ಟೇಕ್ ಆಫ್ ಆಗಿಲ್ಲ. ಯಾವಾಗ ಬೇಕಾದರೂ ಈ ಮೈತ್ರಿ ಸರಕಾರ ಬಿದ್ದು ಹೋಗಬಹುದು ಎಂದು ವಿಧಾನ ಪರಿಷತ್ ಸದಸ್ಯೆ, ಬಿಜೆಪಿ ನಾಯಕಿ ತೇಜಸ್ವಿನಿ ಗೌಡ ಹೇಳಿದ್ದಾರೆ. ಹರಿಹರದ ಬೆಳ್ಳೂಡಿ ಗ್ರಾಮದ ಕಾಗಿನೆಲೆ ಕನಕ ಗುರುಪೀಠದ ಶ್ರೀಗಳ ದರ್ಶನಾಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದರು.
Vijaya Karnataka Web TEJASWINI Gowda


ಪ್ರಸ್ತುತ ಸರಕಾರದ ಆಳ್ವಿಕೆಯಲ್ಲಿ ರಾಜ್ಯದ ಜನತೆಗೆ ಅನಿಶ್ಚಿತತೆ ಕಾಡುತ್ತಿದೆ. ಗಟ್ಟಿ ಸರಕಾರಗಳನ್ನು ಕೊಟ್ಟಂತಹ ಹೆಗ್ಗಳಿಕೆ ನಮ್ಮ ಕರ್ನಾಟಕಕ್ಕೆ ಇದೆ. ಆದರೆ, ಈ ಬಾರಿ ಸಮ್ಮಿಶ್ರ ಸರಕಾರ ರಚನೆಯಾಗಿದ್ದು, ನಾಡಿನ ಜನರಿಗೆ ದೌರ್ಭಾಗ್ಯ. ಎಷ್ಟು ದಿನ ಈ ಸರಕಾರ ಇರುತ್ತದೆ ಎಂದು ಕಾದು ನೋಡೋಣ ಎಂದರು.

ವಚನ ಭ್ರಷ್ಟತೆ, ಅವಕಾಶವಾದಿತನಕ್ಕೆ ಮತ್ತೊಂದೇ ಹೆಸರೇ ಕುಮಾರಸ್ವಾಮಿ. ಸಿಎಂ ಆಗಿ ಅಧಿಕಾರ ವಹಿಸಿಕೊಂಡ 24 ಗಂಟೆಯಲ್ಲೇ ರೈತರ ಸಾಲ ಮನ್ನಾ ಮಾಡುವ ಭರವಸೆ ನೀಡಿದ್ದವರು ಇಂದು ಮಾತು ತಪ್ಪಿದ್ದಾರೆ. ಸಿಎಂ ಎಚ್.ಡಿ.ಕುಮಾರಸ್ವಾಮಿಗೆ ಕುರ್ಚಿಯೇ ಮುಖ್ಯ. ಅದೇ ಕುರ್ಚಿಗಾಗಿ ಅವರು ಏನು ಬೇಕಾದರೂ ಮಾಡುತ್ತಾರೆ. ರೈತರು, ಜನ ಸಾಮಾನ್ಯರ ಸಂಕಷ್ಟಗಳ ಬಗ್ಗೆ ಕಾಂಗ್ರೆಸ್‌ ಜೆಡಿಎಸ್ ಮೈತ್ರಿ ಸರಕಾರಕ್ಕೆ ಅರಿವೇ ಇಲ್ಲ.ಮುಖ್ಯಮಂತ್ರಿ ಕುಮಾರಸ್ವಾಮಿ ಮುಖವಾಡ ಕಳಚುವ ಕೆಲಸವನ್ನು ರಾಜ್ಯದ ಜನತೆ ಶೀಘ್ರವೇ ಮಾಡಲಿದ್ದಾರೆ.

ಸಂಸದೆಯಾಗಿ ರಾಜಕೀಯ ಜೀವನ ಆರಂಭಿಸಿದ್ದ ನಾನು ಇದೀಗ ರಾಜಕೀಯ ಜೀವನದ 2ನೇ ಇನ್ನಿಂಗ್ಸ್ ಆರಂಭಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಎಲ್ಲ ಮಠಾಧೀಶರ ಆಶೀರ್ವಾದಪಡೆಯುತ್ತಿದ್ದೇನೆ. ಈಗಷ್ಟೇ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮಿಗಳನ್ನು ಭೇಟಿ ಮಾಡಿ, ಆಶೀರ್ವಾದ ಪಡೆದಿರುವೆ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ