ಆ್ಯಪ್ನಗರ

ಹೆಲ್ಮೆಟ್ ಧರಿಸದೇ ರಾಯಲ್ ಎನ್ ಫೀಲ್ಡ್ ಓಡಿಸಿದ ಎಂ. ಪಿ. ರೇಣುಕಾಚಾರ್ಯ: ಜನರ ಆಕ್ರೋಶ!

ಹೆಲ್ಮೆಟ್ ಧರಿಸದೇ ರಾಯಲ್ ಎನ್ ಫೀಲ್ಡ್ ಓಡಿಸಿದ ಹೊನ್ನಾಳಿ ಶಾಸಕ ಎಂ. ಪಿ. ರೇಣುಕಾಚಾರ್ಯ ವಿರುದ್ಧ ಜನರು ಆಕ್ರೋಶಗೊಂಡಿದ್ದಾರೆ. ಮುನ್ನೆಚ್ಚರಿಕಾ ಕ್ರಮ ಅನುಸರಿಸದೇ ಬೈಕ್ ರೈಡ್ ಮಾಡಿದ್ದು ಎಷ್ಟರ ಮಟ್ಟಿಗೆ ಸರಿ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

Vijaya Karnataka Web 3 Apr 2021, 3:41 pm
ದಾವಣಗೆರೆ: ಸದಾ ಒಂದಿಲ್ಲೊಂದು ಸುದ್ದಿಯಲ್ಲಿರುವ ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿ ಶಾಸಕ ಎಂ. ಪಿ. ರೇಣುಕಾಚಾರ್ಯ ಮತ್ತೆ ಸುದ್ದಿಯಲ್ಲಿದ್ದಾರೆ. ಹೊನ್ನಾಳಿ ಪಟ್ಟಣದಲ್ಲಿ ಬೈಕ್ ಸವಾರಿ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಆದರೆ, ಈ ವೇಳೆ ಹೆಲ್ಮೆಟ್ ಧರಿಸದೇ ಚಾಲನೆ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.
Vijaya Karnataka Web ರೇಣುಕಾಚಾರ್ಯ


ಹೊನ್ನಾಳಿ ತಾಲೂಕು ಬಿಜೆಪಿ ಮಹಿಳಾ ಮೋರ್ಚಾ ತಾಲೂಕು ಉಪಾಧ್ಯಕ್ಷರಾದ ಪದ್ಮಾ ರಂಗನಾಥ್ ಅವರು ತನ್ನ ಮಕ್ಕಳಾದ ಆಕಾಶ್, ಅಕ್ಷಯ್ ಗೆ ರಾಯಲ್ ಎನ್ ಫಿಲ್ಡ್ ಹೊಸ ಬೈಕ್ ಕೊಡಿಸಿದ್ದರು. ಈ ಬೈಕ್ ಅನ್ನು ಪಟ್ಟಣದ ರೇಣುಕಾಚಾರ್ಯ ಮನೆಗೆ ತಂದಿದ್ದರು. ಈ ವೇಳೆ ಅವರ ಕೋರಿಕೆಯ ಮೇರೆಗೆ ರೇಣುಕಾಚಾರ್ಯ ಬೈಕ್ ಸವಾರಿ ಮಾಡಿದರು. ಆದರೆ, ಈ ವೇಳೆ ಮುನ್ನೆಚ್ಚರಿಕಾ ಕ್ರಮ ಅನುಸರಿಸದೇ ಬೈಕ್ ರೈಡ್ ಮಾಡಿದ್ದು ಎಷ್ಟರ ಮಟ್ಟಿಗೆ ಸರಿ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

ಇನ್ನು ಉದ್ಯೋಗ ಖಾತ್ರಿ ಯೋಜನೆಯ ಪ್ರಗತಿಯ ಬಗ್ಗೆ ಪರಿಶೀಲಿಸಲು ಕುಂಬಳೂರು ಗ್ರಾಮಕ್ಕೆ ತೆರಳಿದ್ದರು. 40 ಲಕ್ಷ ರೂಪಾಯಿ ವೆಚ್ಚದಲ್ಲಿ ಹಿರೇಕೆರೆ ಹೂಳೆತ್ತುವ ಕಾಮಗಾರಿ ನಡೆಯುತ್ತಿದ್ದು, 329 ಮಂದಿಗೆ ಉದ್ಯೋಗ ಸಿಕ್ಕಿದೆ. ಈ ವೇಳೆ ರೇಣುಕಾಚಾರ್ಯ ಅವರೇ ಸ್ವತಃ ಕೂಲಿ ಕೆಲಸ ಮಾಡುವ ಜೊತೆಗೆ ಹಾರೆ ಹಿಡಿದು ಮಣ್ಣು ತೆಗೆಯುವ ಮೂಲಕ ಗಮನ ಸೆಳೆದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ