ಆ್ಯಪ್ನಗರ

ಸರಕಾರ ಉರುಳಿಸಲು ಬಿಜೆಪಿ ವಾಮಮಾರ್ಗ: ಸಚಿವ

ಜೆಡಿಎಸ್‌ ವರಿಷ್ಠ ದೇವೇಗೌಡರ ಮಧ್ಯಂತರ ಚುನಾವಣೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೃಷ್ಣ ಭೈರೇಗೌಡ, ಸರಕಾರ ಬೀಳಿಸಲು ಬಿಜೆಪಿ ಮಾಡುತ್ತಿರುವ ವಾಮಮಾರ್ಗದ ಸವಾಲಿಗೆ ಜನರ ಕೆಲಸದ ಮೂಲಕ ಜವಾಬು ನೀಡುತ್ತೇವೆ ಎಂದರು.

Vijaya Karnataka 22 Jun 2019, 5:00 am
ದಾವಣಗೆರೆ : ಜೆಡಿಎಸ್‌ ವರಿಷ್ಠ ದೇವೇಗೌಡರ ಮಧ್ಯಂತರ ಚುನಾವಣೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೃಷ್ಣ ಭೈರೇಗೌಡ, ಸರಕಾರ ಬೀಳಿಸಲು ಬಿಜೆಪಿ ಮಾಡುತ್ತಿರುವ ವಾಮಮಾರ್ಗದ ಸವಾಲಿಗೆ ಜನರ ಕೆಲಸದ ಮೂಲಕ ಜವಾಬು ನೀಡುತ್ತೇವೆ ಎಂದರು.
Vijaya Karnataka Web bjp to overthrow govt minister
ಸರಕಾರ ಉರುಳಿಸಲು ಬಿಜೆಪಿ ವಾಮಮಾರ್ಗ: ಸಚಿವ


ಕುಡಿವ ನೀರಿನ ಸಮಸ್ಯೆ ತಿಳಿಯಲು ಜಿಲ್ಲೆಯ ನಾನಾ ಗ್ರಾಮಗಳಿಗೆ ಶುಕ್ರವಾರ ಭೇಟಿ ನೀಡಿದ ಸಚಿವರು ದಾವಣಗೆರೆ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಮಾಜಿ ಪ್ರಧಾನಮಂತ್ರಿ ದೇವೇಗೌಡರ ಹೇಳಿಕೆಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಆದರೆ ಬಿಜೆಪಿಯವರು ಸರಕಾರ ಉರುಳಿಸಲು ವಾಮಮಾರ್ಗ ಅನುಸರಿಸುತ್ತಿದ್ದಾರೆ. ಅವರು ಸರಕಾರ ಉರುಳಿಸಲ್ಲ ಎಂದು ಹೇಳುತ್ತಲೇ ಈ ಕೆಲಸ ಮಾಡುತ್ತಿದ್ದಾರೆ. ಕಳೆದ ಒಂದು ವರ್ಷದಿಂದ ಇದನ್ನು ನಾವು ನೋಡುತ್ತಿದ್ದೇವೆ. ಇವರ ವಾಮ ಮಾರ್ಗಕ್ಕೆ ನಾವು ಜನರ ಕೆಲಸದ ಮೂಲಕ ಉತ್ತರ ನೀಡುತ್ತೇವೆ ಎಂದರು.

ಬಿಜೆಪಿ ಸರಕಾರ ಕೆಡವಿ ಚುನಾವಣೆ ನಡೆಸಲು ಒಳಗೊಳಗೆ ಕೆಲಸ ಮಾಡುತ್ತಿದೆ. ಹಾಗಂತ ನಾವೇನೂ ಮೈ ಮರೆತು ಕೂತಿಲ್ಲ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಎರಡೂ ಪಕ್ಷ ದ ಎಲ್ಲ ಶಾಸಕರು, ನಾಯಕರು ಎಲ್ಲರೂ ಒಗ್ಗಟ್ಟಿನಲ್ಲಿದ್ದೇವೆ ಎಂದ ಅವರು ರೋಷನ್‌ ಬೇಗ್‌ ಹೇಳಿಕೆಗೂ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ