ಆ್ಯಪ್ನಗರ

ಬೋರ್ಡ್‌ ಮಾದರಿ ಎಸ್ಸೆಸ್ಸೆಲ್ಸಿ ಪೂರ್ವಸಿದ್ಧತಾ ಪರೀಕ್ಷೆ

ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ರಾಜ್ಯ ಮಟ್ಟದ ಪೂರ್ವ ಸಿದ್ಧತಾ ಪರೀಕ್ಷೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಬೋರ್ಡ್‌ ಪರೀಕ್ಷೆ ಮಾದರಿಯಲ್ಲಿ ಸೋಮವಾರ ನಡೆಸಲಾಯಿತು.

Vijaya Karnataka 26 Feb 2019, 9:07 pm
ದಾವಣಗೆರೆ : ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ರಾಜ್ಯ ಮಟ್ಟದ ಪೂರ್ವ ಸಿದ್ಧತಾ ಪರೀಕ್ಷೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಬೋರ್ಡ್‌ ಪರೀಕ್ಷೆ ಮಾದರಿಯಲ್ಲಿ ಸೋಮವಾರ ನಡೆಸಲಾಯಿತು.
Vijaya Karnataka Web board model essexi preparatory test
ಬೋರ್ಡ್‌ ಮಾದರಿ ಎಸ್ಸೆಸ್ಸೆಲ್ಸಿ ಪೂರ್ವಸಿದ್ಧತಾ ಪರೀಕ್ಷೆ


ಜಿಲ್ಲೆಯ 91 ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳಲ್ಲಿ ಬಾಲಕರು 12,407, ಬಾಲಕಿಯರು 12,515 ಸೇರಿ ಒಟ್ಟು 24,922 ವಿದ್ಯಾರ್ಥಿಗಳು ರಾಜ್ಯ ಮಟ್ಟದ ಪೂರ್ವ ಸಿದ್ಧತಾ ಪರೀಕ್ಷೆಯ ಪ್ರಥಮ ಭಾಷೆಯ ಪತ್ರಿಕೆಯನ್ನು ಆಯಾ ಪರೀಕ್ಷಾ ಕೇಂದ್ರಗಳಲ್ಲಿ ಎದುರಿಸಿದರು.

ದಾವಣಗೆರೆ ದಕ್ಷಿಣ ವಲಯದ 21 ಪರೀಕ್ಷಾ ಕೇಂದ್ರಗಳಲ್ಲಿ ಬಾಲಕರು 2,842, ಬಾಲಕಿಯರು 2,847 ಸೇರಿದಂತೆ ಒಟ್ಟು 5,689 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಪರೀಕ್ಷೆಯು ಸುವ್ಯವಸ್ಥಿತವಾಗಿ ನಡೆಯಿತು. ಡಿಡಿಪಿಐ ಸಿ.ಆರ್‌. ಪರಮೇಶ್ವರಪ್ಪ, ಬಿಇಒ ಬಿ.ಸಿ. ಸಿದ್ಧಪ್ಪನಗರದ ಸಿದ್ಧಗಂಗಾ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಡಿಡಿಪಿಐ ಸಿ.ಆರ್‌.ಪರಮೇಶ್ವರಪ್ಪ ಮಾತನಾಡಿ, ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದ ಪೂರ್ವ ಸಿದ್ಧತಾ ಪರೀಕ್ಷೆಯನ್ನು ಬೋರ್ಡ್‌ ಮಾದರಿಯಲ್ಲಿಯೇ ಮಾಡುತ್ತಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ಪರೀಕ್ಷೆ ಹುಡುಕಾಟದ ಒತ್ತಡ ನಿವಾರಣೆಯಾಗಲಿದೆ. ಈ ಪೂರ್ವ ಸಿದ್ಧತಾ ಪರೀಕ್ಷೆ ಬೋರ್ಡ್‌ ಪರೀಕ್ಷೆಗೆ ಸಹಕಾರಿಯಾಗಲಿದೆ. ಮಾ.21ರಿಂದ ಪ್ರಾರಂಭವಾಗಲಿರುವ ವಾರ್ಷಿಕ ಪರೀಕ್ಷಾ ಕೇಂದ್ರಗಳ ಪರಿಚಯ ಮಕ್ಕಳಿಗೆ ಆಗುವುದರಿಂದ ಪಾಲಕರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಈ ನೂತನ ಪ್ರಯೋಗ ಯಶಸ್ವಿಯಾಗಲಿ ಎಂದರು.

ಈ ವೇಳೆ ಮುಖ್ಯ ಅಧೀಕ್ಷಕ ಎಚ್‌.ಆಂಜಿನಪ್ಪ, ಉಪ ಮುಖ್ಯ ಅಧೀಕ್ಷಕ ವಿಜಯಕುಮಾರ್‌ ಚಿಂದೆ, ಮ.ಗು.ಮುರುಗೇಂದ್ರಯ್ಯ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ