ಆ್ಯಪ್ನಗರ

ಸಿಎಂ ಆದವರಿಗೆ ತಾಳ್ಮೆ ಇರಬೇಕು, ಶ್ರೀಗಳೇ ನೀವು ನೊಂದುಕೊಳ್ಳಬೇಡಿ: ಬಿಎಸ್‌ವೈ ಸಿಟ್ಟಿಗೆ ಡಿಕೆಶಿ ತುಪ್ಪ

“ನಮ್ಮ ಅನುಕೂಲಕ್ಕೆ ಮಠ, ಶ್ರೀಗಳನ್ನು ಬಳಸಿಕೊಳ್ಳುತ್ತೇವೆ. ಹೀಗಾಗಿ ಸಮಾಜದ ರಾಜಕಾರಣಿಗಳು, ಸಮಾಜದವರ ಒತ್ತಡದಿಂದ ಕೇಳುತ್ತಾರೆ. ಸಿಎಂ ಆದವರಿಗೆ ತಾಳ್ಮೆ ಇರಬೇಕು. ಶ್ರೀಗಳೇ ನೀವು ನೊಂದಕೊಳ್ಳಬೇಡಿ, ಈ ಬಗ್ಗೆ ತಲೆ ಕೆಡಸಿಕೊಳ್ಳಬೇಡಿ. ನಿಮ್ಮ ಜತೆ ನಾವು ಇದ್ದೇವೆ,” ಎಂದು ಡಿಕೆ ಶಿವಕುಮಾರ್‌ ಅಭಯ ನೀಡಿದ್ದಾರೆ.

Vijaya Karnataka 15 Jan 2020, 8:24 pm

ದಾವಣಗೆರೆ: ‘ನಾವು ರಾಜಕಾರಣಿಗಳು ಅನುಕೂಲಕ್ಕಾಗಿ ಮಠಗಳನ್ನು ಬಳಸಿಕೊಳ್ಳುತ್ತೇವೆ. ಹಾಗೆಯೇ ಮಠಾಧೀಶರನ್ನು ಬಳಸಿಕೊಳ್ಳುತ್ತೇವೆ. ಹೀಗಾಗಿ ರಾಜಕಾರಣಿಗಳು ತಾಳ್ಮೆಯಿಂದ ಮಠಾಧೀಶರ ಮಾತು ಕೇಳಬೇಕು. ಅಧಿಕಾರ ಇರುವವರನ್ನು ಕೇಳುತ್ತಾರೆ. ಸೋತವರನ್ನು ಕೇಳಲು ಆಗುತ್ತದೆಯೇ? ಶ್ರೀಗಳೇ ನಿಮ್ಮ ಜೊತೆ, ನಿಮ್ಮ ಸಮಾಜದ ಜೊತೆ ನಾವು ಇದ್ದೇವೆ. ನೀವು ತಲೆ ಕೆಡಿಸಿಕೊಳ್ಳಬೇಡಿ,” ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್‌ ಹೇಳಿದರು.
Vijaya Karnataka Web DK Shivakumar 01


ಮಂಗಳವಾರ ಮುರುಗೇಶ್‌ ನಿರಾಣಿಗೆ ಸಚಿವ ಸ್ಥಾನ ನೀಡಬೇಕು ಇಲ್ಲದಿದ್ದಲ್ಲಿ ಪಂಚಮಸಾಲಿ ಸಮುದಾಯ ನಿಮ್ಮ ಕೈಬಿಡಲಿದೆ ಎಂಬುದಾಗಿ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ ಹೇಳಿದ ಮಾತು ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರನ್ನು ಕೆರಳಿಸಿತ್ತು. ಇದರಿಂದ ವೇದಿಕೆಯಲ್ಲೇ ಮಾತಿನ ಚಕಮಕಿ ನಡೆದಿತ್ತು. ಇದೀಗ ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಡಿಕೆ ಶಿವಕುಮಾರ್‌ ಸಿಎಂಗೆ ಟಾಂಗ್‌ ನೀಡಿದ್ದಾರೆ.

ಹರಿಹರದ ಪಂಚಮಸಾಲಿ ಗುರುಪೀಠದ ಆವರಣದಲ್ಲಿ ನಡೆದ ವಚನಾನಂದ ಸ್ವಾಮೀಜಿ ದ್ವಿತೀಯ ಪೀಠಾರೋಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, “ನಮ್ಮ ಅನುಕೂಲಕ್ಕೆ ಮಠ, ಶ್ರೀಗಳನ್ನು ಬಳಸಿಕೊಳ್ಳುತ್ತೇವೆ. ಹೀಗಾಗಿ ಸಮಾಜದ ರಾಜಕಾರಣಿಗಳು, ಸಮಾಜದವರ ಒತ್ತಡದಿಂದ ಕೇಳುತ್ತಾರೆ. ಸಿಎಂ ಆದವರಿಗೆ ತಾಳ್ಮೆ ಇರಬೇಕು. ಶ್ರೀಗಳೇ ನೀವು ನೊಂದುಕೊಳ್ಳಬೇಡಿ, ಈ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ನಿಮ್ಮ ಜತೆ ನಾವು ಇದ್ದೇವೆ,” ಎಂದು ಅಭಯ ನೀಡಿದರು.

‘ನನ್ನಿಂದ ಏನಾದರೂ ತಪ್ಪಾಗಿದ್ದರೆ ಹೊಟ್ಟೆಗೆ ಹಾಕಿಕೊಳ್ಳಿ’: ಕ್ಷಮೆ ಕೇಳಿದ ವಚನಾನಂದ ಸ್ವಾಮೀಜಿ

“ಸಮಾಜದ ಆರೋಗ್ಯ ಕಾಪಾಡುವ ಕೆಲಸ ಮಾಡುತ್ತಿದ್ದೀರಿ. ಸಮಾಜದ ಧ್ವನಿಯಾಗಿ ನೀವು ಕೇಳಿದ್ದೀರಿ. ನೀವು ತಲೆ ಕೆಡಸಿಕೊಳ್ಳಬೇಡಿ. ಆತ್ಮ ಸ್ಥೈರ್ಯ ಕಳೆದುಕೊಳ್ಳಬೇಡಿ,” ಎಂದು ಡಿಕೆ ಶಿವಕುಮಾರ್‌ ಭರವಸೆ ನೀಡಿದರು.

ಪಂಚಮಸಾಲಿ ಸಮಾವೇಶದಲ್ಲಿ ವಚನಾನಂದ ಸ್ವಾಮೀಜಿ v/s ಯಡಿಯೂರಪ್ಪ, ವೇದಿಕೆಯಿಂದ ಹೊರನಡೆಯಲೆತ್ನಿಸಿದ ಸಿಎಂ

“ಸಂಸ್ಕೃತಿ , ಇತಿಹಾಸ, ಧರ್ಮ, ಆರೋಗ್ಯ, ಸಾಮರಸ್ಯ ಕಾಪಾಡಲು ಶ್ರೀಗಳು, ಮಠಗಳು ಬೇಕು. ಅವರ ಮಾತು ಕೇಳಬೇಕಾದದ್ದು ರಾಜಕಾರಣಿಗಳ ಕರ್ತವ್ಯ. ವಚನಾನಂದ ಶ್ರೀಗಳೇ ನಿಮ್ಮ ಜತೆ ನಾವು ಇದ್ದೇವೆ ಎಂದು ಹೇಳಲು ಹರಜಾತ್ರೆಗೆ ಬಂದಿದ್ದೇನೆ,” ಎಂಬುದಾಗಿ ಡಿಕೆ ಶಿವಕುಮಾರ್ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ