ಆ್ಯಪ್ನಗರ

ಕಮಿಷನ್‌ ಆರೋಪದ ಆಣೆ ಪ್ರಮಾಣ ಪ್ರಹಸನ: ಸಚಿವ ರೇಣುಕಾಚಾರ್ಯ ಗೈರು

ಕಾಂಗ್ರೆಸ್‌ ಮುಖಂಡರ ಆಣೆ-ಪ್ರಮಾಣದ ಸವಾಲಿಗೆ ಗೈರು ಹಾಜರಾಗುವ ಮೂಲಕ ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ. ರೇಣುಕಾಚಾರ್ಯ ಬೆನ್ನು ತೋರಿಸಿದ ಪ್ರಹಸನ ಇಲ್ಲಿನ ಹಿರೇಕಲ್ಮಠದಲ್ಲಿ ಶನಿವಾರ ನಡೆಯಿತು.

Vijaya Karnataka Web 22 Feb 2020, 7:49 pm
ಹೊನ್ನಾಳಿ (ದಾವಣಗೆರೆ): ಕಾಂಗ್ರೆಸ್‌ ಮುಖಂಡರ ಆಣೆ-ಪ್ರಮಾಣದ ಸವಾಲಿಗೆ ಗೈರು ಹಾಜರಾಗುವ ಮೂಲಕ ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ. ರೇಣುಕಾಚಾರ್ಯ ಬೆನ್ನು ತೋರಿಸಿದ ಪ್ರಹಸನ ಇಲ್ಲಿನ ಹಿರೇಕಲ್ಮಠದಲ್ಲಿ ಶನಿವಾರ ನಡೆಯಿತು.
Vijaya Karnataka Web mp renukacharya new


‘ನಾನು ಮತ್ತು ನನ್ನ ಸಹೋದರರು ಪ್ರಾಮಾಣಿಕರು. ನಾವು ಯಾವುದರಲ್ಲೂ ಭ್ರಷ್ಟಾಚಾರ ಮಾಡಿಲ್ಲ. ಅಕ್ರಮ ಮರಳು ದಂಧೆ ನಡೆಸಿಲ್ಲ. ಪಡಿತರ ಅಕ್ಕಿ ಅಕ್ರಮ, ಅಧಿಕಾರಿಗಳಿಂದ ಮಾಮೂಲು ವಸೂಲು ಮತ್ತು ಕಾಮಗಾರಿಗಳಲ್ಲಿ ಕಮಿಷನ್‌ ಪಡೆದಿಲ್ಲ. ನನ್ನ ಕ್ಷೇತ್ರದಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ನಡೆಸುತ್ತಿದ್ದೇನೆ’ಎಂದು ಶಾಸಕ ರೇಣುಕಾಚಾರ್ಯ ಕಳೆದ ಕೆಲ ದಿನಗಳ ಹಿಂದೆ ಹೇಳಿಕೆ ನೀಡಿದ್ದರು. ಇದಕ್ಕೆ ಸ್ಥಳೀಯ ಕಾಂಗ್ರೆಸ್‌ ಮುಖಂಡರು ಶಾಸಕರ ಪ್ರಾಮಾಣಿಕತೆ ನಿರೂಪಿಸಲು ಹೊನ್ನಾಳಿಯ ಹಿರೇಕಲ್ಮಠದ ಶ್ರೀಚನ್ನಪ್ಪ ಸ್ವಾಮಿ ಪೀಠದ ಸನ್ನಿಧಿಯಲ್ಲಿ ಪ್ರಮಾಣ ಮಾಡುವಂತೆ ಸವಾಲು ಹಾಕಿದ್ದರು. ಇದಕ್ಕಾಗಿ ಕಾಂಗ್ರೆಸ್‌ ಪಕ್ಷ ದ ಮುಖಂಡರು, ಫೆ.22ರ ಶನಿವಾರ ದಿನ ಗೊತ್ತು ಪಡಿಸಿ ಹಿರೇಕಲ್ಮಠಕ್ಕೆ ಆಗಮಿಸಿದರು. ಆಣೆ-ಪ್ರಮಾಣಕ್ಕೆ ಮಧ್ಯಾಹ್ನ 12ರಿಂದ 1.30ರವರೆಗೆ ಕಾದು ಕುಳಿತರು. ಆದರೆ, ಈ ಸವಾಲು ಸ್ವೀಕರಿಸಲು ಶಾಸಕ ರೇಣುಕಾಚಾರ್ಯ ಅಲ್ಲಿಗೆ ಆಗಮಿಸಲೇ ಇಲ್ಲ.

ಈ ವೇಳೆ ಜಿಲ್ಲಾಕಾಂಗ್ರೆಸ್‌ ಅಧ್ಯಕ್ಷ ಎಚ್‌.ಬಿ. ಮಂಜಪ್ಪ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸಣ್ಣಕ್ಕಿ ಬಸವನಗೌಡ, ಮುಖಂಡರಾದ ಬಿ. ಸಿದ್ದಪ್ಪ, ಎಂ. ಸಿದ್ದಪ್ಪ, ರಮೇಶ್‌, ಶಿವಯೋಗಿ, ಕೊಡತಾಳ್‌ ರುದ್ರೇಶ್‌, ಪ್ರವೀಣ್‌, ಬಾಷಾಸಾಬ್‌, ಸುರೇಶ್‌, ರೋಷನ್‌, ಯುವ ಕಾಂಗ್ರೆಸ್‌ ಅಧ್ಯಕ್ಷ ಮಧುಗೌಡ, ಎನ್‌ಎಸ್‌ಯುಐ ತಾಲೂಕು ಅಧ್ಯಕ್ಷ ಮನೋಜ್‌ ಉಪಸ್ಥಿತರಿದ್ದರು.

"ನಾವು ಯಾವುದರಲ್ಲೂಭ್ರಷ್ಟಾಚಾರ ಮಾಡಿಲ್ಲ. ಕಮಿಷನ್‌ ಪಡೆದಿಲ್ಲ. ಇದಕ್ಕೆ ಎಲ್ಲಿಬೇಕಾದರೂ ಪ್ರಮಾಣಕ್ಕೆ ಕೂಡ ಸಿದ್ಧರಿದ್ದೇವೆ ಎಂದು ಶಾಸಕ ರೇಣುಕಾಚಾರ್ಯರು ನಮ್ಮ ಪಕ್ಷದ ಆರೋಪಕ್ಕೆ ಸಮಜಾಯಿಷಿ ನೀಡಿದರು. ನಾವು ನಮ್ಮ ಮಾತಿಗೆ ಬದ್ಧರಾಗಿ ಹಿರೇಕಲ್ಮಠಕ್ಕೆ ಆಣೆ ಪ್ರಮಾಣಕ್ಕೆ ಕರೆದಿದ್ದೆವು. ಆದರೆ ಶಾಸಕರು ಬರಲೇ ಇಲ್ಲ. ‘ಯಾವುದು ಸತ್ಯ ಮತ್ತು ಯಾವುದು ಸುಳ್ಳು’ ಎಂಬದನ್ನು ಹಿರೇಕಲ್ಮಠದ ಶ್ರೀಚನ್ನಪ್ಪಸ್ವಾಮಿಯೇ ನೋಡಿಕೊಳ್ಳುತ್ತಾನೆ."
-ಬಿ.ಸಿದ್ದಪ್ಪ, ಕಾಂಗ್ರೆಸ್‌ ಮುಖಂಡರು, ಹೊನ್ನಾಳಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ