ಆ್ಯಪ್ನಗರ

ದಾವಣಗೆರೆ: ಐವತ್ತೇಳು ಸಾವಿರ ಅಡಿಕೆ ಮೂಟೆ ಕಾಯುತ್ತಿವೆ ಮಾರುಕಟ್ಟೆ, ಬೆಳೆಗಾರರು ಕಂಗಾಲು !

ಲಾಕ್‌ಡೌನ್‌ನಿಂದ ವ್ಯಾಪಾರ ವಹಿವಾಟು ಸಂಪೂರ್ಣ ನೆಲ ಕಚ್ಚಿ, ಮಧ್ಯ ಕರ್ನಾಟಕದ ಜೀವನಾಡಿ ತುಮ್‌ಕೋಸ್‌ ರೈತರಿಲ್ಲದೇ ಖಾಲಿ ಖಾಲಿಯಾಗಿದೆ. ಮಾರುಕಟ್ಟೆ ಸ್ಥಗಿತ ಹಿನ್ನೆಲೆ ಸುಮಾರು 150 ಕೋಟಿ ರೂ. ಮೌಲ್ಯದ ಅಡಕೆ ಮೂಟೆಗಳು ಗೋದಾಮಿನಲ್ಲಿ ಉಳಿದಿದೆ.

Vijaya Karnataka Web 23 Apr 2020, 6:53 am
ಸತೀಶ್‌ ಎಂ ಪವಾರ್‌ ಚನ್ನಗಿರಿ
Vijaya Karnataka Web arecanut

ದಾವಣಗೆರೆ: ಕೊರೊನಾ ಹಿನ್ನೆಲೆ ಲಾಕ್‌ಡೌನ್‌ ಆದಾಗಿನಿಂದ ಅಡಕೆ ವ್ಯಾಪಾರದ ಮಾರುಕಟ್ಟೆ ಸಂಪೂರ್ಣ ನಿಲುಗಡೆಯಾಗಿದೆ. ಗೋಡೌನ್‌ನಲ್ಲಿ ಸ್ಟಾಕ್‌ ಬಿದ್ದಿರುವ ಅಂದಾಜು 57 ಸಾವಿರ ಅಡಕೆ ಮೂಟೆಗಳು ಮಾರುಕಟ್ಟೆಗಾಗಿ ಕಾಯುತ್ತಿವೆ. ಸುಮಾರು 150 ಕೋಟಿ ರೂ. ಮೌಲ್ಯದ ಅಡಕೆ ಮೂಟೆಗಳು ಗೋದಾಮಿನಲ್ಲಿ ಉಳಿದಿದೆ.

ಸಾಗಣೆ ಸಮಸ್ಯೆಯಿಂದ ರೈತರ ಅಡಕೆ ತುಮ್‌ಕೋಸ್‌ಗೆ ಬರುತ್ತಿಲ್ಲ. ಜತೆಗೆ ಖರೀದಿಸಿದ ಅಡಕೆ ಹೊರ ಹೋಗಲು, ಲಾರಿಗಳಿಗೆ ಲೋಡ್‌ ಮಾಡಲು ಕಾರ್ಮಿಕರ ಸಮಸ್ಯೆ ಇದೆ. ಆದರೆ, ಅಡಕೆ ಬೆಳೆಗಾರರಿಗೆ ಯಾವುದೇ ತೊಂದರೆಯಾಗದಂತೆ ಸಂಸ್ಕರಣಾ ಸಾಲ ಮತ್ತು ಅಡಮಾನ ಸಾಲ ನೀಡುವ ಮೂಲಕ ತುಮ್‌ಕೋಸ್‌ ಅಡಕೆ ಬೆಳೆಗಾರರ ಹಿತವನ್ನು ಕಾಯುತ್ತಿದೆ.

ರೈತರಿಗೆ ಸಾಲ ಸೌಲಭ್ಯ
12 ಸಾವಿರ ಮಂದಿ ಷೇರುದಾರರರನ್ನು ಹೊಂದಿರುವ ಸಹಕಾರ ಸಂಸ್ಥೆ ಇದಾಗಿದ್ದು, ಸುಮಾರು 6667 ಷೇರುದಾರರು 25 ಕೋಟಿಯಷ್ಟು ಅಡಮಾನ ಸಾಲ ಹಾಗೂ 196 ಜನ ಸದಸ್ಯರು ಸಂಸ್ಕರಣಾ ಸಾಲವನ್ನು ಪಡೆದುಕೊಂಡಿದ್ದಾರೆ. ಲಾಕ್‌ಡೌನ್‌ ಮುಂಚೆಯ ಮಾರುಕಟ್ಟೆಯ ಸಂದರ್ಭದಲ್ಲಿ ಕ್ವಿಂಟಾಲ್‌ ಅಡಕೆ 39,400 ರೂ. ಉತ್ತಮ ಧಾರಣೆ ಇತ್ತು. ಕೊರೊನಾ ಕಾರಣದಿಂದ ಸದ್ಯ ಮಾರುಕಟ್ಟೆ ವಹಿವಾಟು ನಿಂತಿದೆ.

ಬ್ಯಾಂಕಿಂಗ್‌ ವ್ಯವಸ್ಥೆ

ತುಮ್‌ಕೋಸ್‌ನ 7 ಬ್ರಾಂಚ್‌ಗಳಲ್ಲಿ ಕಳೆದ ಒಂದು ವಾರದಿಂದ ಕಚೇರಿ ತೆರೆದಿದ್ದರೂ ಷೇರುದಾರರ ಪ್ರವೇಶ ಬಂದ್‌ ಮಾಡಲಾಗಿದೆ. ಆದರೆ, ಹಣದ ಅವಶ್ಯಕತೆ ಇರುವ ರೈತರು ಬ್ಯಾಂಕ್‌ ಖಾತೆ ನಂಬರ್‌ ನೀಡಿದರೆ ಅವಶ್ಯಕತೆಗನುಣವಾದ ಹಣವನ್ನು ಬ್ಯಾಂಕಿಂಗ್‌ ವ್ಯವಸ್ಥೆಯ ಮೂಲಕ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಅಡಕೆ ಕೊಳೆಯುವಂತಹ ವಸ್ತುವಾಗದೇ ಇರುವುದರಿಂದ ರೈತರಿಗೆ ಅನುಕೂಲವಾಗುವಂತೆ ಅಡಕೆ ಅಡಮಾನ ಮತ್ತು ಸಂಸ್ಕರಣಾ ಸಾಲ ಸೌಲಭ್ಯವನ್ನು ಬ್ಯಾಂಕಿಂಗ್‌ ಮೂಲಕ ಕಲ್ಪಿಸಲಾಗಿದೆ. ಅಡಕೆ ಮಾರುಕಟ್ಟೆ ಟೆಂಡರ್‌ ಇಲ್ಲದೇ ಇರುವುದು ಮತ್ತು ವಾಹನ ಸೌಲಭ್ಯ ಇರದೇ ಇರುವುದರಿಂದ ಗೋಡೌನ್‌ನಲ್ಲಿ ಅಡಕೆ ಸ್ಟಾಕ್‌ ಆಗಿದೆ.
ಆರ್‌.ಎ.ರವಿ, ತುಮ್‌ಕೋಸ್‌ ಅಧ್ಯಕ್ಷ

ಲಾಕ್‌ಡೌನ್‌ ಪ್ರಾರಂಭವಾದ ದಿನದಿಂದಲೂ ವ್ಯಾಪಾರ ವಹಿವಾಟಿನ ಮೇಲೆ ತೀವ್ರ ಪರಿಣಾಮ ಬೀರಿದೆ. ಸಿಎಂ ಕೊರೊನಾ ನಿಧಿಗೆ ತುಮ್‌ಕೋಸ್‌ನಿಂದ 5 ಲಕ್ಷ ರೂ. ದೇಣಿಗೆ ನೀಡಲಾಗಿದೆ. ಜತೆಗೆ ತುಮ್‌ಕೋಸ್‌ನ 120 ಜನ ಹಮಾಲರಿಗೆ 1 ಸಾವಿರ ರೂ. ಮೌಲ್ಯದ ದಿನಸಿ ಕಿಟ್‌ಗಳನ್ನು ನೀಡಲಾಗಿದೆ.
ಪ್ರಕಾಶ್‌, ಮುಖ್ಯ ಲೆಕ್ಕಿಗರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ