ಆ್ಯಪ್ನಗರ

ಹಳ್ಳಿಗಳಿಗೂ ಕೋವಿಡ್‌ ವೈರಸ್‌ ಹಬ್ಬಿತು; ಜನರಲ್ಲಿ ಆತಂಕ ಹೆಚ್ಚಾಯಿತು

ನಗರ ಪ್ರದೇಶದಷ್ಟು ವೇಗದಲ್ಲಿ ಸೋಂಕು ಹರಡುತ್ತಿಲ್ಲ. ಹಾಗಾಗಿ ಗ್ರಾಮೀಣ ಪ್ರದೇಶದ ಜನತೆ ಅನಗತ್ಯ ಓಡಾಟಕ್ಕೆ ಬ್ರೇಕ್‌ ಹಾಕುವುದರಿಂದ ತಮ್ಮ ಹಳ್ಳಿಗಳನ್ನು ವೈರಸ್‌ ಕಾಟವಿಲ್ಲದೆ ಸುರಕ್ಷಿತವಾಗಿಟ್ಟುಕೊಳ್ಳಬಹುದು ಎಂದು ಆರೋಗ್ಯ ಇಲಾಖೆ ಹೇಳಿದೆ.

Vijaya Karnataka Web 30 Jun 2020, 6:03 pm
ದಾವಣಗೆರೆ: ದಾವಣಗೆರೆ ನಗರವನ್ನು ತಲ್ಲಣಗೊಳಿಸಿದ್ದ ಕೊರೊನಾ ವೈರಸ್‌ ಈಗ ಪಥ ಬದಲಿಸಿದೆ. ಜಿಲ್ಲೆಯಲ್ಲಿ ಜಗಳೂರು ಹೊರತು ಪಡಿಸಿದರೆ ನಾಲ್ಕು ತಾಲೂಕು ಕೇಂದ್ರ ಮತ್ತು ಹಳ್ಳಿಗಳಲ್ಲೂಕೊರೊನಾ ಪಾಸಿಟವ್‌ ಪ್ರಕರಣಗಳು ವರದಿಯಾಗುತ್ತಿದ್ದು, ಹಳ್ಳಿಗಳ ಹೆಬ್ಬಾಗಿಲ ಬಳಿ ವೈರಸ್‌ ನಿಂತಿರುವುದರಿಂದ ಗ್ರಾಮೀಣ ಜನತೆ ಎಚ್ಚರ ವಹಿಸಬೇಕಿದೆ.
Vijaya Karnataka Web ಕೊರೊನಾ
ಕೊರೊನಾ


ಹೌದು, ಜಿಲ್ಲೆಯಲ್ಲಿ ಈವರೆಗೂ ಹಳ್ಳಿಗಳಲ್ಲಿ 8 ಕೊರೊನಾ ಪಾಸಿಟಿವ್‌ ಪ್ರಕರಣಗಳು ದೃಢಪಟ್ಟಿದೆ. ದಾವಣಗೆರೆ, ಹರಿಹರ, ಹೊನ್ನಾಳಿ, ನ್ಯಾಮತಿ ತಾಲೂಕಿನ ಹಳ್ಳಿಗಳಲ್ಲಿ ಈ ಕೇಸ್‌ಗಳು ಕಂಡು ಬಂದಿವೆ. ಎಲ್ಲರಿಗೂ ನಗರ ಸಂಪರ್ಕದಿಂದ ಸೋಂಕು ತಗುಲಿದೆ. ಆದರೆ, ಸಮಾಧಾನದ ಸಂಗತಿಯೆಂದರೆ ಗ್ರಾಮೀಣ ಪ್ರದೇಶದಲ್ಲಿ ಕಂಡು ಬಂದ ಸೋಂಕು ಹೆಚ್ಚು ಹರಡಿಲ್ಲ. ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿರುವವರಿಗೆ ಮಾತ್ರ ಪಾಸಿಟಿವ್‌ ಕಂಡು ಬಂದಿದೆ.

ನಗರ ಪ್ರದೇಶದಷ್ಟು ವೇಗದಲ್ಲಿ ಸೋಂಕು ಹರಡುತ್ತಿಲ್ಲ. ಹಾಗಾಗಿ ಗ್ರಾಮೀಣ ಪ್ರದೇಶದ ಜನತೆ ಅನಗತ್ಯ ಓಡಾಟಕ್ಕೆ ಬ್ರೇಕ್‌ ಹಾಕುವುದರಿಂದ ತಮ್ಮ ಹಳ್ಳಿಗಳನ್ನು ವೈರಸ್‌ ಕಾಟವಿಲ್ಲದೆ ಸುರಕ್ಷಿತವಾಗಿಟ್ಟುಕೊಳ್ಳಬಹುದು ಎಂದು ಆರೋಗ್ಯ ಇಲಾಖೆ ಹೇಳಿದೆ.

ಹಳ್ಳಿಗಳ ಬಾಗಿಲಿಗೆ ಕೊರೊನಾ

ತಾಲೂಕು ಕೇಂದ್ರಗಳಲ್ಲದೆ ಹಳ್ಳಿಗಳಿಂದಲೇ ಕೊರೊನಾ ಪಾಸಿಟಿವ್‌ ಕೇಸ್‌ಗಳು ಕಂಡು ಬಂದಿದ್ದು, ಈಗ ಜಿಲ್ಲೆಯಲ್ಲಿ ದಾವಣಗೆರೆ ತಾಲೂಕಿನ ಅವರಗೊಳ್ಳ, ನೇರ್ಲಿಗೆ ಗ್ರಾಮ ಮತ್ತು ಹರಿಹರದ ರಾಜನಹಳ್ಳಿಯನ್ನು ಕಂಟೇನ್ಮೆಂಟ್‌ ಝೋನ್‌ ಎಂದು ಜಿಲ್ಲಾಡಳಿತ ಘೋಷಿಸಿದೆ. ಈವರೆಗೂ ಜಿಲ್ಲೆಯಲ್ಲಿ ದಾವಣಗೆರೆ ತಾಲೂಕಿನ 2 ಗ್ರಾಮ, ಹೊನ್ನಾಳಿ 2 ಹಳ್ಳಿ, ಹರಿಹರ ತಾಲೂಕಿನ ಒಂದು ಗ್ರಾಮದಲ್ಲಿ ಪಾಸಿಟಿವ್‌ಗಳು ಕಂಡು ಬಂದಿವೆ. ಜಿಲ್ಲೆಯಲ್ಲಿ ಜನರ ಓಡಾಟ ಹೆಚ್ಚಿರುವುದು, ಅಂತರ್‌ ಜಿಲ್ಲೆ ಓಡಾಟ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಅನಗತ್ಯವಾಗಿ ಓಡಾಡಿರುವ ನಿದರ್ಶಗಳೂ ಇವೆ ಎಂದು ಸೋಂಕಿತರ ಟ್ರಾವೆಲ್‌ ಹಿಸ್ಟರಿ ಹೇಳುತ್ತಿದೆ.

ಬೇಗ ಗುಣಮುಖ

ಗ್ರಾಮೀಣ ಮತ್ತು ತಾಲೂಕು ಕೇಂದ್ರದ ಸೋಂಕಿತರು ಬೇಗ ಗುಣಮುಖರಾಗಿ ತೆರಳುತ್ತಿದ್ದು ಸಕ್ರಿಯ ಪ್ರಕರಣಗಳು ಕಡಿಮೆಯಿವೆ. ಹರಿಹರ ತಾಲೂಕಲ್ಲಿ ಒಟ್ಟು 17 ಪ್ರಕರಣಗಳು ಕಂಡು ಬಂದಿದ್ದು ಇದರಲ್ಲಿ 12 ಮಂದಿ ಗುಣಮುಖರಾಗಿದ್ದು 5 ಜನ ಇನ್ನೂ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚನ್ನಗಿರಿಯಲ್ಲಿ ಒಟ್ಟು 14 ಪ್ರಕರಣಗಳು ವರದಿಯಾಗಿದ್ದು, ಇದರಲ್ಲಿ 8 ಮಂದಿ ಗುಣಮುಖರಾಗಿದ್ದು ಇನ್ನು ಆರು ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೊನ್ನಾಳಿಯ 2 ಪ್ರಕರಣಗಳಿಗೂ ಇನ್ನೂ ಚಿಕಿತ್ಸೆ ಮುಂದುವರಿದಿದೆ.

ಸಿಟಿ ಓಡಾಟ ಸ್ವಲ್ಪದಿನ ನಿಲ್ಲಿಸಿ

ಕೊರೊನಾ ತಾನಾಗೇ ಉದ್ಭವಿಸಲು ಸಾಧ್ಯವಿಲ್ಲ. ಓಡಾಟದಲ್ಲಿ ಸೋಂಕಿತರ ಸಂಪರ್ಕ, ಕಂಟೇನ್ಮೆಂಟ್‌ ಝೋನ್‌ ಭೇಟಿ ಇಂತಹ ಕಡೆ ಸೋಂಕು ತಗುಲಲಿದೆ. ನಗರಗಳಲ್ಲಿನ ಕಂಟೇನ್ಮೆಂಟ್‌ ಝೋನ್‌ಗಳ ಬಗ್ಗೆ ಗ್ರಾಮೀಣ ಪ್ರದೇಶದ ಜನತೆಗೆ ಗೊತ್ತಿರುವುದಿಲ್ಲ. ಹಾಗಾಗಿ ಜನತೆ ಅನಗತ್ಯ ಪಟ್ಟಣ, ನಗರ ಪ್ರದೇಶಗಳಿಗೆ ಬಂದು ಹೋಗುವುದನ್ನು ನಿಲ್ಲಿಸಬೇಕು. ಜತೆಗೆ ತಮ್ಮ ಊರುಗಳಲ್ಲೂಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಅನಗತ್ಯ ಗುಂಪುಗೂಡುವುದನ್ನು ನಿಲ್ಲಿಸಿದರೆ ಜನತೆ ತಮ್ಮ ಹಳ್ಳಿಗಳಿಗೆ ಸೋಂಕು ಕಾಲಿಡದಂತೆ ತಡೆಯಬಹುದು ಎನ್ನುತ್ತಾರೆ ಜಿಲ್ಲಾಸರ್ವೇಕ್ಷಣಾ ಆಧಿಕಾರಿ ಜಿ.ಡಿ. ರಾಘವನ್‌.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ