ಆ್ಯಪ್ನಗರ

ಇಎಸ್‌ಐ ಆಸ್ಪತ್ರೆಗೆ ಕರೆಂಟ್‌ ಪ್ರಾಬ್ಲಂ

ಮಧ್ಯ ಕರ್ನಾಟಕ ಭಾಗದ ಜನರ ಸಂಜೀವಿನಿ ಎಂದೇ ಪ್ರಸಿದ್ಧ ಪಡೆದ ನಗರದ ನಿಟ್ಟುವಳ್ಳಿಯಲ್ಲಿರುವ ಇಎಸ್‌ಐ ವಿಮಾ ಆಸ್ಪತ್ರೆಯಲ್ಲಿ ಕರೆಂಚ್‌ ಇಲ್ಲದ್ದರಿಂದ ಜನರು ಪರದಾಡಿದರು.

Vijaya Karnataka 27 Dec 2018, 5:00 am
ದಾವಣಗೆರೆ : ಮಧ್ಯ ಕರ್ನಾಟಕ ಭಾಗದ ಜನರ ಸಂಜೀವಿನಿ ಎಂದೇ ಪ್ರಸಿದ್ಧ ಪಡೆದ ನಗರದ ನಿಟ್ಟುವಳ್ಳಿಯಲ್ಲಿರುವ ಇಎಸ್‌ಐ ವಿಮಾ ಆಸ್ಪತ್ರೆಯಲ್ಲಿ ಕರೆಂಚ್‌ ಇಲ್ಲದ್ದರಿಂದ ಜನರು ಪರದಾಡಿದರು.
Vijaya Karnataka Web current problem to esi hospital
ಇಎಸ್‌ಐ ಆಸ್ಪತ್ರೆಗೆ ಕರೆಂಟ್‌ ಪ್ರಾಬ್ಲಂ


ಬಹುಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಕಾರ್ಮಿಕರ ರಾಜ್ಯ ವಿಮಾ ನಿಗಮದ ಆಸ್ಪತ್ರೆಯಲ್ಲಿ ಮೂರು ದಿನಗಳಿಂದ ವಿದ್ಯುತ್‌ ವ್ಯತ್ಯಯ ಉಂಟಾಗಿತ್ತು. ಇದರ ಪರಿಣಾಮ ರೋಗಿಗಳು ಸಾಕಷ್ಟು ತೊಂದರೆ ಅನುಭವಿಸಿದರು.

ಆಸ್ಪತ್ರೆಗೆ ದಿನಕ್ಕೆ ನೂರರಿಂದ 300 ರೋಗಿಗಳು ಭೇಟಿ ನೀಡುತ್ತಿದ್ದು, ಕತ್ತಲೆಯಲ್ಲಿಯೇ ಚಿಕಿತ್ಸೆ, ತಪಾಸಣೆ ನಡೆಯಿತು. ಅದರಲ್ಲಿಯೂ ವಯೋವೃದ್ಧರು, ಗರ್ಭಿಣಿಯರು, ವಿಕಲಚೇತನರು ಕತ್ತಲೆಯಲ್ಲಿ ಓಡಾಡಿದರು.

ಆಸ್ಪತ್ರೆಗೆ ದಾಖಲಾದ ರೋಗಿಗಳು, ಸಂಬಂಧಿಕರು ಶೌಚಾಲಯಕ್ಕೆ ಹೋಗಬೇಕಾದರೂ ಮೊಬೈಲ್‌ ಟಾರ್ಚ್‌ ಬಳಸಬೇಕಾಗಿತ್ತು. ಇನ್ನೂ ಕೆಲ ರೋಗಿಗಳು ಮೇಣದ ಬತ್ತಿ ಬೆಳಕಿನಲ್ಲಿ ಕಾಲ ಕಳೆದರು.

ಜನರೇಟರ್‌ ಇದ್ದು ಪ್ರಯೋಜನವಿಲ್ಲ :

ವಿದ್ಯುತ್‌ ವ್ಯತ್ಯಯವಾದಾಗ ಜನರೇಟರ್‌ ಆನ್‌ ಮಾಡಬೇಕಾಗಿದ್ದು, ಮೂರು ದಿನಗಳಿಂದ ಇಲ್ಲಿನ ಸಿಬ್ಬಂದಿ ಜನರೇಟರ್‌ ಆನ್‌ ಮಾಡಿರಲಿಲ್ಲ. ರೋಗಿಗಳು ಕೇಳಿದರೆ ತಾಂತ್ರಿಕ ದೋಷದ ನೆಪವೊಡ್ಡುತ್ತಿದ್ದರು. ಅಲ್ಲದೇ ಜನರೇಟರ್‌ ಆನ್‌ ಮಾಡುವ ಸಿಬ್ಬಂದಿ ಇಲ್ಲ ಎಂಬ ನೆಪ ಹೇಳುತ್ತಿದ್ದರು. ಇದರಿಂದ ಆಸ್ಪತ್ರೆಗೆ ಸೇರಿದ ಬಡ ರೋಗಿಗಳು ಇಡೀ ರಾತ್ರಿ ಕತ್ತಲೆಯಲ್ಲಿಯೇ ಕಾಲ ಕಳೆದರು.

ಇನ್ನು ಮಾಧ್ಯಮದವರು ಬಂದ ಕೂಡಲೇ ಆಸ್ಪತ್ರೆ ಅಧಿಕಾರಿಗಳು ಜನರೇಟರ್‌ ಸಿಬ್ಬಂದಿಗೆ ಪೋನ್‌ ಮಾಡಿ ಜನರೇಟರ್‌ ಆನ್‌ ಮಾಡಿದ ಪರಿಣಾಮ ರೋಗಿಗಳ ಪಾಲಿಗೆ ಬೆಳಕು ಸಿಕ್ಕಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ