ಆ್ಯಪ್ನಗರ

ನಕಲಿ ಅಂಕಪಟ್ಟಿ ನೀಡಿ ಜಿಲ್ಲಾಧಿಕಾರಿಗೇ ವಂಚಿಸಿದ ಚಾಲಾಕಿ ಮಹಿಳೆ : ಪಡೆದಿದ್ದು ಗ್ರಾಮ ಲೆಕ್ಕಾಧಿಕಾರಿ ಹುದ್ದೆ

ಮಹಿಳೆಯೊಬ್ಬರು ಸರ್ಕಾರಿ ಕೆಲಸ ಪಡೆಯಲು ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್‌ ಬೀಳಗಿ ಅವರಿಗೆ ನಕಲಿ ಅಂಕಪಟ್ಟಿ ನೀಡಿ ವಂಚಿಸಿರುವ ಘಟನೆ ನಡೆದಿದೆ. ಆ ಮಹಿಳೆ ವಿರುದ್ಧ ಕ್ರಿಮಿನಲ್‌ ಕೇಸ್‌ ಹಾಕುವುದಾಗಿ ಡಿಸಿ ಹೇಳಿದ್ದಾರೆ. ಮಹಿಳೆಯು ನಕಲಿ ಅಂಕಪಟ್ಟಿ ಮೂಲಕ ಗ್ರಾಮ ಲೆಕ್ಕಾಧಿಕಾರಿ ಹುದ್ದೆ ಪಡೆದಿದ್ದರು.

Vijaya Karnataka 14 Oct 2019, 7:45 pm
ದಾವಣಗೆರೆ: ಮಹಿಳೆಯೊಬ್ಬರು ಜಿಲ್ಲಾಧಿಕಾರಿ ಮಹಾಂತೇಶ್‌ ಬೀಳಗಿಗೆ ನಕಲಿ ಪಿಯುಸಿ ಅಂಕಪಟ್ಟಿ ನೀಡಿ ಕೆಲಸ ಪಡೆದು ವಂಚಿಸಿರುವ ಘಟನೆ ನಡೆದಿದೆ. ಆ ಮಹಿಳೆ ವಿರುದ್ಧ ಕ್ರಿಮಿನಲ್‌ ಕೇಸ್‌ ಹಾಕುವುದಾಗಿ ಡಿಸಿ ಹೇಳಿದ್ದಾರೆ.
Vijaya Karnataka Web fake cirtificate


ನಗರದ ಡಿಸಿ ಕಚೇರಿಯಲ್ಲಿಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, 'ಪಿಯುಸಿ ಓದಿದ ಮಮತಾ ಎಂಬ ಮಹಿಳೆಯೊಬ್ಬರು ಕೆಲಸ ಕೇಳಿಕೊಂಡು ಬಂದಿದ್ದರು. ಅವರಿಗೆ ಕೆಲಸ ನೀಡಲಾಗಿತ್ತು. ನಂತರ ಮಹಿಳೆಯ ಅಂಕಪಟ್ಟಿ ಪಿಯು ಬೋರ್ಡ್‌ಗೆ ಕಳುಹಿಸಿದಾಗ, ಅಲ್ಲಿಂದ ಇದು ಫೇಕ್‌ ಎಂಬ ಉತ್ತರ ಬಂದಿದೆ.

ಈ ಬಗ್ಗೆ ಮಮತಾರನ್ನು ವಿಚಾರಣೆ ಮಾಡಿ, ಒರಿಜಿನಲ್‌ ಅಂಕಪಟ್ಟಿ ಕೊಡಿ ಎಂದು ಕೇಳಿದಾಗ ಅವರು ಸರಿಯಾದ ಉತ್ತರ ನೀಡಲಿಲ್ಲ. ಅಂತಿಮವಾಗಿ ಸಂಸ್ಥೆಯೊಂದು ಈ ನಕಲಿ ಮಾರ್ಕ್ಸ್‌ಕಾರ್ಡ್‌ ನೀಡಿದೆ ಎಂದು ಹೇಳಿದರು. ಕೊನೆಗೆ ಎಸ್ಸೆಸ್ಸೆಲ್ಸಿ ಅಂಕಪಟ್ಟಿಯಾದರೂ ಕೊಡಿ ಎಂದು ಕೇಳಿದರೂ, ಕೊಡಲಿಲ್ಲ. ಮನೆ ಬಳಿ ಬಂದು ಕೆಲಸಕ್ಕಾಗಿ ಅತ್ತು ಕರೆದು ಗೋಳಾಡಿದ್ದರಿಂದ ಹೊನ್ನಾಳಿಯಲ್ಲಿ ಗ್ರಾಮ ಲೆಕ್ಕಾಧಿಕಾರಿ (ವಿಎ) ಜಾಬ್‌ ಕೊಡಲಾಗಿತ್ತು. ಈಗ ಅವರ ಮೇಲೆ ಕೇಸ್‌ ಹಾಕುತ್ತೇನೆ' ಎಂದು ಡಿಸಿ ಹೇಳಿದರು.

"ಜನಸ್ಪಂದನ ಸಭೆಯಲ್ಲಿಕೆಲಸ ಕೇಳಿಕೊಂಡು ಬರುವವರು ನನ್ನ ಒಳ್ಳೆಯತನವನ್ನು ದುರುಪಯೋಗಪಡಿಸಿಕೊಳ್ಳಬಾರದು. ಯಾರಾದರೂ ನನಗೆ ವಂಚಿಸಲು ಪ್ರಯತ್ನಿಸಿದರೆ ಖಂಡಿತಾ ಬಿಡುವುದಿಲ್ಲ."
-ಮಹಾಂತೇಶ್‌ ಬೀಳಗಿ, ಜಿಲ್ಲಾಧಿಕಾರಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ