ಆ್ಯಪ್ನಗರ

ಧರ್ಮಸ್ಥಳ ಯೋಜನೆಗಳು ಬಡವರಿಗೆ ಪೂರಕ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಡಾ.ವೀರೇಂದ್ರ ಹೆಗ್ಗಡೆಯವರು ಲಾಭದಾಯಕ ಕಾರ್ಯಕ್ರಮ ಮಾಡದೆ ಬಡವರ, ಜನಸಮಾನ್ಯರ ಅಭಿವೃದ್ಧಿಗೆ ಪೂರಕ ಕೆಲಸ ಮಾಡುತ್ತಿದ್ದಾರೆ ಎಂದು ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹೇಳಿದರು.

Vijaya Karnataka 15 Aug 2018, 2:54 pm
ದಾವಣಗೆರೆ : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಡಾ.ವೀರೇಂದ್ರ ಹೆಗ್ಗಡೆಯವರು ಲಾಭದಾಯಕ ಕಾರ್ಯಕ್ರಮ ಮಾಡದೆ ಬಡವರ, ಜನಸಮಾನ್ಯರ ಅಭಿವೃದ್ಧಿಗೆ ಪೂರಕ ಕೆಲಸ ಮಾಡುತ್ತಿದ್ದಾರೆ ಎಂದು ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹೇಳಿದರು.
Vijaya Karnataka Web dharmasthala projects are supplementary to the poor
ಧರ್ಮಸ್ಥಳ ಯೋಜನೆಗಳು ಬಡವರಿಗೆ ಪೂರಕ


ನಗರದ ಚಿಂದೋಡಿ ಲೀಲಾ ರಂಗಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಮಲ್ಲಿಕಾರ್ಜುನ ಮೋಟಾರ್ಸ್‌ನಿಂದ ಮಂಗಳವಾರ ಆಯೋಜಿಸಿದ್ದ ಸ್ವ ಉದ್ಯೋಗ ವಿಚಾರ ಸಂಕಿರಣ ಹಾಗೂ ಆಟೋ ವಿತರಣೆ ಮತ್ತು ಗ್ರೀನ್‌ ವೇ ಕುಕ್‌ಸ್ಟವ್‌ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಡಾ.ವಿರೇಂದ್ರ ಹೆಗ್ಗಡೆ ಅವರ ಕಾರ್ಯ, ಯೋಜನೆಗಳು ಲಾಭ ದೃಷ್ಠಿ ಒಳಗೊಳ್ಳದೆ ಜನಸಾಮಾನ್ಯರ ಸ್ವಾವಲಂಬಿ ಜೀವನಕ್ಕೆ ಅನುಕೂಲಕರವಾಗಿವೆ. 1.80 ಲಕ್ಷ ರೂ. ವೆಚ್ಚದಲ್ಲಿ ಆಟೋ ಖರೀದಿ ಮಾಡಿ 69 ಪೈಸೆ ಬಡ್ಡಿಗೆ ನೀಡಲಾಗುತ್ತಿದೆ. ಫಲಾನುಭವಿಗಳು ಇದರ ಸದ್ಬಳಕೆ ಮಾಡಿಕೊಂಡು ಸಕಾಲಕ್ಕೆ ಸಾಲ ತೀರಿಸಬೇಕು ಎಂದರು.

ಧರ್ಮಸ್ಥಳ ಅಭಿವೃದ್ಧಿ ಯೋಜನೆ ದಾವಣಗೆರೆ ಸೇರಿದಂತೆ ಕರ್ನಾಟಕದಲ್ಲಿ ಎಲ್ಲಾ ಸಮುದಾಯದ ದೇವಸ್ಥಾನಗಳ ಜಿರ್ಣೋದ್ಧಾರ, ಜನಸಾಮಾನ್ಯರಿಗೆ ಆರ್ಥಿಕ ಸಹಕಾರ ನೀಡುತ್ತಿದೆ. ದಾವಣಗೆರೆಯ ಕುಂದುವಾಡದ ಶ್ರೀ ಕರಿಸಿದ್ದೇಶ್ವರ ದೇವಸ್ಥಾನಕ್ಕೆ 2 ಲಕ್ಷ ರೂ. ನೀಡಿದೆ ಎಂದು ತಿಳಿಸಿದರು.

ಒಂದು ಶುದ್ಧ ಕುಡಿಯುವ ನೀರಿನ ಘಟಕ ಪ್ರಾರಂಭಕ್ಕೆ 16 ಲಕ್ಷ ರೂ. ವೆಚ್ಚ ಬರುತ್ತಿದ್ದು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಕೇವಲ 5 ಲಕ್ಷ ರೂ. ವೆಚ್ಚದಲ್ಲಿ ಘಟಕವನ್ನು ನಿರ್ಮಿಸಿಕೊಡುತ್ತಿದೆ. ಜನಸಾಮಾನ್ಯರು ಧರ್ಮಸ್ಥಳ ಸಂಸ್ಥೆಯಿಂದ ಹೆಚ್ಚು ಸೇವೆಗಳನ್ನು ಪಡೆದುಕೊಂಡು, ಶ್ರಮಪಟ್ಟು ದುಡಿದು ಆರ್ಥಿಕವಾಗಿ ಪ್ರಗತಿ ಹೊಂದಬೇಕು ಎಂದು ಸಲಹೆ ನೀಡಿದರು.

ಪಾಲಿಕೆಯಿಂದ 17 ನೀರಿನ ಘಟಕ:

ಪಾಲಿಕೆ ಆಯುಕ್ತ ಮಂಜುನಾಥ್‌ ಆರ್‌.ಬಳ್ಳಾರಿ ಮಾತನಾಡಿ, ಪಾಲಿಕೆ ವ್ಯಾಪ್ತಿಯಲ್ಲಿ ಧರ್ಮಸ್ಥಳ ಯೋಜನೆಯಲ್ಲಿ ದೈನಂದಿನ ಬೇಕಾದ ಪರಿಕರಗಳನ್ನು ನೀಡಲಾಗಿದೆ. ಸಮಾಜಮುಖಿ ಕಾರ್ಯಕ್ರಮ ಮಾಡಲಾಗುತ್ತಿದೆ. ಪಾಲಿಕೆ ವ್ಯಾಪ್ತಿಯಲ್ಲಿ 17 ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಿದ್ದು, ನಿಟುವಳ್ಳಿಯಲ್ಲಿ 24 ಗಂಟೆಯೂ ಶುದ್ಧ ನೀರಿನ ಸೇವೆ ದೊರೆಯುತ್ತಿದೆ ಎಂದರು.

ಶಾಸಕರು ಶುದ್ಧ ಕುಡಿಯುವ ನೀರಿನ ಘಟಕ ಹೆಚ್ಚಿಸುವಂತೆ ಸೂಚನೆ ನೀಡಿದ್ದು, ಈ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸೋಣ. ಹಾಗೆಯೇ ಪರಿಸರ ಸ್ನೇಹಿಯಾಗಿ ಕೆಲಸ ಮಾಡೋಣ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಧರ್ಮಸ್ಥಳ ಸಂಸ್ಥೆಯ ಧಾರವಾಡ ಪ್ರಾದೇಶಿಕ ನಿರ್ದೇಶಕ ಸೀತಾರಾಮ ಶೆಟ್ಟಿ, ಯೂನಿಯನ್‌ ಬ್ಯಾಂಕ್‌ ಮಹಾಪ್ರಬಂಧಕ ಶ್ರೀನಿವಾಸಲು ರೆಡ್ಡಿ, ಮಲ್ಲಿಕಾರ್ಜುನ ಮೋಟಾರ್ಸ್‌ ಮಾಲೀಕ ಎನ್‌.ಜಿ. ಗುರುಸಿದ್ದಯ್ಯ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿರ್ದೇಶಕ ಜಯಂತ ಪೂಜಾರಿ, ಕೃಷ್ಣಪ್ಪ, ಲಲಿತಾ, ಆರ್‌.ಚಂದ್ರಶೇಖರ್‌, ಅಣಬೇರು ಮಂಜಣ್ಣ, ಕುಸುಮ ಶೆಟ್ರು ಇತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ