ಆ್ಯಪ್ನಗರ

ದಾಖಲೆ ಸಂಗ್ರಹಿಸಿಡಲು ಡಿಜಿ ಲಾಕರ್‌ ಆ್ಯಪ್‌

ಕೇಂದ್ರ ಸರಕಾರ ಡಿಜಿಟಲ್‌ ವ್ಯವಸ್ಥೆಗೆ ಆದ್ಯತೆ ನೀಡಿದ್ದು, ಕಾಗದರಹಿತ ಆಡಳಿತ ಪರಿಕಲ್ಪನೆಯ ಯೋಜನೆಯ ಭಾಗವಾಗಿ ಡಿಜಿ ಲಾಕರ್‌ ಆ್ಯಪ್‌ನ್ನು ರೂಪಿಸಲಾಗಿದೆ ಎಂದು ಎಸ್ಪಿ ಆರ್‌.ಚೇತನ್‌ ತಿಳಿಸಿದರು.

Vijaya Karnataka 2 Jun 2018, 2:46 pm
ದಾವಣಗೆರೆ :ಕೇಂದ್ರ ಸರಕಾರ ಡಿಜಿಟಲ್‌ ವ್ಯವಸ್ಥೆಗೆ ಆದ್ಯತೆ ನೀಡಿದ್ದು, ಕಾಗದರಹಿತ ಆಡಳಿತ ಪರಿಕಲ್ಪನೆಯ ಯೋಜನೆಯ ಭಾಗವಾಗಿ ಡಿಜಿ ಲಾಕರ್‌ ಆ್ಯಪ್‌ನ್ನು ರೂಪಿಸಲಾಗಿದೆ ಎಂದು ಎಸ್ಪಿ ಆರ್‌.ಚೇತನ್‌ ತಿಳಿಸಿದರು.
Vijaya Karnataka Web digi locker app to store documents
ದಾಖಲೆ ಸಂಗ್ರಹಿಸಿಡಲು ಡಿಜಿ ಲಾಕರ್‌ ಆ್ಯಪ್‌


ನಗರದ ಎಸ್ಪಿ ಕಚೇರಿಯಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರತಿಯೊಬ್ಬರು ವಾಹನದ ದಾಖಲೆ ಸೇರಿದಂತೆ ಇನ್ನಿತರ ದಾಖಲೆಗಳನ್ನು ತೆಗೆದುಕೊಂಡು ಹೋಗಲಾಗದ ಹಿನ್ನೆಲೆಯಲ್ಲಿ ಈ ಆ್ಯಪ್‌ನ್ನು ಸಿದ್ಧಪಡಿಸಲಾಗಿದೆ. ಈ ಆ್ಯಪ್‌ನಲ್ಲಿ ಚಾಲನಾ ಅನುಜ್ಞಾ ಪತ್ರ, ವಾಹನ ನೋಂದಣಿ ಪ್ರಮಾಣ ಪತ್ರ ಹಾಗೂ ವಾಯು ಮಾಲಿನ್ಯ ಪ್ರಮಾಣ ಪತ್ರ, ಪ್ಯಾನ್‌ ಕಾರ್ಡ್‌, ಮತದಾನ ಗುರುತಿನ ಪತ್ರ, ಪಾಸ್‌ಪೋರ್ಟ್‌, ಜನ್ಮ ದಾಖಲೆ, ಮದುವೆ ದಾಖಲೆ ಸೇರಿದಂತೆ ಇನ್ನಿತರ ದಾಖಲೆಗಳನ್ನು ಸಂಗ್ರಹಿಸಿಡಬಹುದಾಗಿದೆ. ಇ-ದಾಖಲೆಗಳು, ಯುನಿಫಾರ್ಮ್‌ ರಿಸೋರ್ಸ್‌ ಐಡೆಂಟಿ ಫೈಯರ್‌ (ಯು.ಆರ್‌.ಐ) (ಧ್ವನಿ ಮುದ್ರಿಕೆ, ವಿಡಿಯೋ, ಬರಹ) ಇತ್ಯಾದಿಗಳನ್ನೂ ಇದರಲ್ಲಿ ಶೇಖರಿಸಿಡಬಹುದಾಗಿದೆ. ಪೊಲೀಸರು ತಪಾಸಣೆ ಕೈಗೊಂಡ ವೇಳೆ ಆ್ಯಪ್‌ನಲ್ಲಿರುವ ಸಾಫ್ಟ್‌ ಕಾಫಿ ತೋರಿಸಿದರೆ ಸಾಕು ಎಂದರು.

ಲಾಕರ್‌ ವ್ಯವಸ್ಥೆ :


ಈ ದಾಖಲೆಗಳನ್ನು ಯಾವಾಗ ಬೇಕಾದರೂ, ಎಲ್ಲಿ ಬೇಕಾದರೂ ನೋಡಬಹುದು. ಆನ್‌ಲೈನ್‌ನಲ್ಲಿ ಹಂಚಿಕೊಳ್ಳಬಹುದಲ್ಲದೇ ನಕಲು ಮಾಡುವುದನ್ನು ಇದು ತಡೆಯುತ್ತದೆ. ಇದರಲ್ಲಿರುವ ದಾಖಲೆಗಳಿಗೆ ಲಾಕರ್‌ ವ್ಯವಸ್ಥೆ ಇದೆ. ಈ ಡಿಜಿ ಲಾಕರ್‌ನ್ನು ವೆಬ್‌ ಪೋರ್ಟಲ್‌ ಅಥವಾ ಮೊಬೈಲ್‌ ಅಪ್ಲೀಕೆಷನ್‌ಮೂಲಕ ಪ್ರವೇಶಿಸಬಹುದಾಗಿದೆ.

ಬಳಸುವುದು ಹೇಗೆ : ಆ್ಯಂಡ್ರೈಡ್‌ ಸೆಟ್‌ ಇರುವ ಮೊಬೈಲ್‌ನಲ್ಲಿ ಮೊದಲು ಗೂಗಲ್‌ ಪ್ಲೇಸ್ಟೋರ್‌ಗೆ ಹೋಗಬೇಕು. ಅಲ್ಲಿ ಡಿಜಿ ಲಾಕರ್‌ ಎಂದು ಟೈಪ್‌ ಮಾಡಬೇಕು. ನಂತರದಲ್ಲಿ ನೀಲಿ ಬಣ್ಣದಲ್ಲಿ ಕಾಣುವ ಆ್ಯಪ್‌ನ್ನು ಡೌನ್‌ ಲೌಡ್‌ ಮಾಡಬೇಕು. ಇದಾದ ನಂತರ ಸೈನ್‌ ಅಪ್‌ ಸೆಲೆಕ್ಟ್ ಮಾಡಿದ ವೇಳೆ ಯೂಸರ್‌ ನೇಮ… ಮತ್ತು ಪಾಸ್‌ವರ್ಡ್‌ ನಮೂದಿಸಬೇಕು. ನಂತರ ಆಧಾರ್‌ ಸಂಖ್ಯೆ ನಮೂದಿಸಬೇಕು. ಸರ್ಚ್‌ ಬಾರ್‌ನಲ್ಲಿ ರಾಜ್ಯ ಸರಕಾರದ ಟ್ರಾನ್ಸ್‌ಪೋರ್ಟ್‌ ಡಿಪಾರ್ಟ್‌ಮೆಂಟ್‌ ಆಯ್ಕೆ ಮಾಡಬೇಕು. ಅಲ್ಲಿ ಡಿಎಲ್‌ ಸಂಖ್ಯೆ ನಮೂದಿಸಿಬೇಕು. ಅಲ್ಲದೇ ಡಿಜಿಟಲ್‌ ಆರ್‌ಸಿ ಪಡೆಯಲು ವಾಹನದ ನೋಂದಣಿ ಸಂಖ್ಯೆ, ಚಾರ್ಸಿ ಸಂಖ್ಯೆ ನಮೂದಿಸಬೇಕು. ಇಷ್ಟೂ ಕಾರ್ಯ ಪೂರ್ಣಗೊಂಡರೆ ಡಿಜಿಟಲ್‌ ದಾಖಲೆ ದೊರೆಯಲಿದೆ ಎಂದು ಎಸ್ಪಿ ಮಾಹಿತಿ ನೀಡಿದರು.

ವಾಹನಗಳಿಗೆ ಕೇಸ್‌

ಫೀಲ್ಟ್‌ ಟ್ರಾಫಿಕ್‌ ವೇರಿಫಿಕೇಶನ್‌ ರಿಪೋರ್ಟ್‌ (ಎಫ್‌ಟಿವಿಆರ್‌) ನಿಂದ 2016ರಲ್ಲಿ 76356, 2017ರಲ್ಲಿ 325573, 2018ರಲ್ಲಿ 81728 ವಾಹನಗಳಿಗೆ ಕೇಸ್‌ ಹಾಕಲಾಗಿದೆ. ಒಟ್ಟು 58,31,800 ಲಕ್ಷ ಹಣ ಸಂಗ್ರಹಿಸಲಾಗಿದೆ. ಇನ್ನು ನಗರದಲ್ಲಿ ಬೈಕ್‌ ಕಳವು ಮಾಡುತ್ತಿದ್ದ ಐದು ಮಂದಿ ಆರೋಪಿಗಳನ್ನು ಬಂಧಿಸಿ 31 ವಾಹನಗಳ ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಆರ್‌.ಚೇತನ್‌ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ