ಆ್ಯಪ್ನಗರ

ಸಾಹಿತ್ಯದ ಅಖಂಡ ಬದುಕು ಚರ್ಚಿಸಿ

ಸಾಹಿತ್ಯ ಸಮ್ಮೇಳನ ಕೇವಲ ಸಾಹಿತ್ಯದ ಬಗ್ಗೆ ಮಾತ್ರ ಚರ್ಚಿಸಬೇಕಿಲ್ಲ, ಸಾಹಿತ್ಯ ಅಖಂಡ ಬದುಕನ್ನು ಮತ್ತು ಅಲ್ಲಿನ ಸಮಸ್ಯೆಯನ್ನು ಒಳಗೊಂಡಿದ್ದು ಸ್ಥಳೀಯ ಸಮಸ್ಯೆಗಳು ಕೂಡ ಇಲ್ಲಿ ಚರ್ಚೆಯಾಗಬೇಕು ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಎಸ್‌.ಜಿ. ಸಿದ್ಧರಾಮಯ್ಯ ಹೇಳಿದರು.

Vijaya Karnataka 31 Jan 2019, 5:00 am
ದಾವಣಗೆರೆ: ಸಾಹಿತ್ಯ ಸಮ್ಮೇಳನ ಕೇವಲ ಸಾಹಿತ್ಯದ ಬಗ್ಗೆ ಮಾತ್ರ ಚರ್ಚಿಸಬೇಕಿಲ್ಲ, ಸಾಹಿತ್ಯ ಅಖಂಡ ಬದುಕನ್ನು ಮತ್ತು ಅಲ್ಲಿನ ಸಮಸ್ಯೆಯನ್ನು ಒಳಗೊಂಡಿದ್ದು ಸ್ಥಳೀಯ ಸಮಸ್ಯೆಗಳು ಕೂಡ ಇಲ್ಲಿ ಚರ್ಚೆಯಾಗಬೇಕು ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಎಸ್‌.ಜಿ. ಸಿದ್ಧರಾಮಯ್ಯ ಹೇಳಿದರು.
Vijaya Karnataka Web discuss the whole life of literature
ಸಾಹಿತ್ಯದ ಅಖಂಡ ಬದುಕು ಚರ್ಚಿಸಿ


ಬುಧವಾರ ಒಂಬತ್ತನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣವನ್ನು ದಂಧೆ ಆಗಿಸಿದ ಪರಿಣಾಮ ಐಸಿಎಸ್‌ಸಿ, ಸಿಬಿಎಸ್‌ಸಿಗಳಲ್ಲಿ ಕನ್ನಡ ಕಲಿಸುತ್ತಿಲ್ಲ. ಸರಕಾರಿ ಶಾಲೆಗಳಲ್ಲಿ ಅದು ಅನುತ್ಪಾದಕ ಎಂದು ಸರಕಾರವೂ ಹಣ ವೆಚ್ಚ ಮಾಡುತ್ತಿಲ್ಲ. ಹಾಗಾಗಿ ನಮ್ಮ ಮಕ್ಕಳು ಅತ್ತ ಇಂಗ್ಲಿಷ್‌ ಇಲ್ಲ , ಇತ್ತ ಕನ್ನಡವೂ ಇಲ್ಲ ಎಂಬಂತಾಗಿದೆ. ಗ್ರಹಿಕೆ ಮತ್ತು ಕಲ್ಪನೆ ಬೆಳೆಯಬೇಕಾದರೆ ಅದು ನೆಲದ ಭಾಷೆಯಲ್ಲಿ ಕಲಿಸಬೇಕು ಎಂದು ಪ್ರತಿಪಾದಿಸಿದರು.

ಸಮ್ಮೇಳನಾಧ್ಯಕ್ಷ ಡಾ. ಲೋಕೇಶ್‌ ಅಗಸನಕಟ್ಟೆ ಬದುಕು-ಬರಹ ಕುರಿತು ಮಾತನಾಡಿದ ಡಾ. ಎಚ್‌.ಟಿ. ಕೃಷ್ಣಮೂರ್ತಿ, ಲೋಕೇಶ್‌ ಒಟ್ಟು 18 ಪುಸ್ತಕ ಬರೆದಿದ್ದಾರೆ. ಎರಡು ಬಾರಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದ್ದಾರೆ ಎಂದರು.

ಪರಿಷತ್‌ ಅಧ್ಯಕ್ಷ ಡಾ.ಎಚ್‌.ಎಸ್‌. ಮಂಜುನಾಥ ಕುರ್ಕಿ ಪ್ರಾಸ್ತಾವಿಕ ಮಾತನಾಡಿದರು. ಶಾಸಕ ಎಸ್‌.ಎ. ರವೀಂದ್ರನಾಥ್‌ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಸಾಹಿತ್ಯ ಪರಿಷತ್‌ನ ಶೇಖರ್‌ಗೌಡ ಮಾಲಿ ಪಾಟೀಲ, ಮಾಜಿ ಅಧ್ಯಕ್ಷ ಎ.ಆರ್‌. ಉಜ್ಜನಪ್ಪ, ತಾಲೂಕು ಅಧ್ಯಕ್ಷ ವಾಮದೇವಪ್ಪ ಇದ್ದರು. ವಿನೂತನ ಮಹಿಳಾ ಸಮಾಜದ ಮಹಿಳೆಯರು ನಾಡಗೀತೆ ಹಾಡಿದರು. ಬಿ.ದಿಳ್ಳೆಪ್ಪ ಸ್ವಾಗತಿಸಿದರು. ಎನ್‌.ಎಸ್‌. ರಾಜು ನಿರೂಪಿಸಿದರು. ಯಶಾ ದಿನೇಶ್‌ ಮತ್ತು ಸಂಗಡಿಗರು ನಾಡು ನುಡಿ ಗೀತ ಗಾಯನ ನಡೆಸಿಕೊಟ್ಟರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ